• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಟಿ ಗ್ರೂಪಿನಿಂದ ವಿಕ್ರಮ್ ಪಂಡಿತ ಹೊರನಡೆದಿದ್ದು ಏಕೆ?

By Mahesh
|

ನ್ಯೂಯಾರ್ಕ್, ಅ.18: ಅಮೆರಿಕದ ಪ್ರತಿಷ್ಠಿತ ಆರ್ಥಿಕ ಸಂಸ್ಥೆ ಸಿಟಿಗ್ರೂಪ್ ವಿಕ್ರಮ್ ಪಂಡಿತ್ ಅವರ ಹಠಾತ್ ನಿರ್ಗಮನದ ಹಿಂದಿನ ರಹಸ್ಯ ಬಹಿರಂಗವಾಗಿದೆ. ಬ್ಯಾಂಕಿಂಗ್ ಕ್ಷೇತ್ರದ ಅಗ್ರಗಣ್ಯ ಆಡಳಿತಗಾರ ಎಂದು ಹೆಸರಾಗಿದ್ದ ವಿಕ್ರಮ್ ಪಂಡಿತ್ ಅವರ ನಡುವಿನ ವೈಮನಸ್ಯದ ಕಾರಣ ಸಿಟಿ ಗ್ರೂಪ್ ಬೋರ್ಡ್ ಅವರಿಗೆ ಹೊರ ಹೋಗುವ ಬಾಗಿಲ ದಾರಿ ತೋರಿಸಿದೆ ಎಂದು ತಿಳಿದು ಬಂದಿದೆ.

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಸಿಟಿ ಗ್ರೂಪ್ ಸಂಸ್ಥೆಯನ್ನು ಲಾಭದಾಯಕ ಸ್ಥಾನಕ್ಕೆ ತಂದಿದ್ದ ಪಂಡಿತ್ ನಿರ್ಗಮನದ ಬಗ್ಗೆ ವಾಲ್ ಸ್ಟ್ರೀಟ್ ನಲ್ಲಿ ದಿಗ್ಭ್ರಮೆ ವ್ಯಕ್ತವಾಗಿತ್ತು.

ಸುಮಾರು 4,500 ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿ 2011ರಲ್ಲಿ ಸುಮಾರು 1.4 ಬಿಲಿಯನ್ ಡಾಲರ್ ಉಳಿತಾಯ ಗಳಿಸಲು ಸಿಇಒ ವಿಕ್ರಮ್ ಪಂಡಿತ್ ಕಾರಣರಾಗಿದ್ದರು ಎಂದರೆ ತಪ್ಪಾಗಲಾರದು.

ನಾಗಪುರ ಮೂಲದ ಎನ್ಆರ್ಐ ವಿಕ್ರಮ್ ಪಂಡಿತ್ ಅಮೆರಿಕಾದ ಅತಿದೊಡ್ಡ ಹಣಕಾಸು ಸಂಸ್ಥೆ ಸಿಟಿಗ್ರೂಪ್ ನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕವಾಗಿದ್ದು 2007ರ ಸುಮಾರಿಗೆ. ಕಳೆದ ಐದು ವರ್ಷಗಳಲ್ಲಿ ಸಿಟಿ ಗ್ರೂಪ್ ಬೆಳೆದು ಬಂದ ರೀತಿ ನೋಡಿದರೆ ಪಂಡಿತ್ ದೂರದರ್ಶಿತ್ವದ ಬಗ್ಗೆ ತಿಳಿಯುತ್ತದೆ.

55 ವರ್ಷದ ಪಂಡಿತ್ ಅಧಿಕಾರ ವಹಿಸಿಕೊಂಡ ಮೇಲೆ ಸಿಟಿ ಗ್ರೂಪ್ ನ ಷೇರು ಮೌಲ್ಯ ಕೂಡಾ ಏರಿಕೆ ಕಂಡಿತ್ತು.

ಸಿಟಿಯ ಇನ್ವೆಸ್ಟ್‌ಮೆಂಟ್ ಬ್ಯಾಂಕಿಂಗ್ ಮುಖ್ಯಸ್ಥರಾಗಿದ್ದ ಪಂಡಿತ್ ಅವರ ಹೆಜ್ ಫಂಡ್ ಫರ್ಮ್‌ನ್ನು 800 ಮಿಲಿಯನ್ ಅಮೆರಿಕನ್ ಡಾಲರ್‌ಗೆ ಸಿಟಿಗ್ರೂಪ್ ಕೊಂಡುಕೊಂಡಿತ್ತು. ಅಮೆರಿಕ ಹಣಕಾಸು ಕ್ಷೇತ್ರದಲ್ಲಿ ಅನೇಕ ಭಾರತೀಯರು ಉನ್ನತ ಸ್ಥಾನದಲ್ಲಿದ್ದರೂ ಈ ಕ್ಷೇತ್ರದ ಇತಿಹಾಸದಲ್ಲಿಯೇ ಭಾರತೀಯರೊಬ್ಬರು ಈ ಮಟ್ಟಕ್ಕೆ ಏರಿದ ಸಾಧನೆ ಮಾಡಿದ್ದರು.

ಉದ್ಯೋಗಿಗಳ ವಜಾ, ನೂತನ ಆರ್ಥಿಕ ನೀತಿ, ಗ್ರಾಹಕ ಸಂವೇದಿ ಕ್ರಮಗಳನ್ನು ಹೊರಡಿಸಿದ ಪಂಡಿತ್ ಅನುಸರಿಸಿದ ನೀತಿ ನಿಯಮದ ಬಗ್ಗೆ ಸಿಟಿ ಗ್ರೂಪ್ ಬೋರ್ಡ್ ನಲ್ಲಿ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಹಲವು ಬಾರಿಗೆ ಬೋರ್ಡ್ ನಲ್ಲಿ ಚರ್ಚೆಯಾಗದೆ ಪಂಡಿತ್ ಅನೇಕ ನಿರ್ಣಯಗಳನ್ನು ಕೈಗೊಂಡು ಜಾರಿಗೊಳಿಸುತ್ತಿದ್ದಾರೆ ಎಂಬ ಆರೋಪವನ್ನು ಹೊರೆಸಲಾಗಿತ್ತು.

ಇದಾ ಜೊತೆಗೆ ಫೆಡರಲ್ ರೆಸರ್ವ್ ಸ್ಟ್ರೀಟ್ ಪರೀಕ್ಷೆಯಲ್ಲಿ ಸಿಟಿ ಗ್ರೂಪ್ ಪಾಸ್ ಆಗದೆ ವೈಫಲ್ಯ ಕಂಡಿದ್ದಕ್ಕೆ ಪಂಡಿತ್ ರನ್ನು ದೂಷಿಸಲಾಗಿತ್ತು. 2008ರ ಆರ್ಥಿಕ ಸಂಕಷ್ಟದ ನಂತರ ಅಮೆರಿಕದ ಮೂರನೇ ಅತಿದೊಡ್ಡ ಯುಎಸ್ ಬ್ಯಾಂಕ್ ಅನ್ನು ಕಟ್ಟಿ ಬೆಳೆಸಿದ ಪಂಡಿತ್ ರನ್ನು ಸಿಟಿ ಗ್ರೂಪ್ ಹೊರ ಹಾಕಿರುವುದು ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿರುವುದಂತೂ ನಿಜ.

ಜುಲೈ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಸುಮಾರು ಶೇ 88 ರಂತೆ 468 ಮಿಲಿಯನ್ ಯುಎಸ್ ಡಾಲರ್ ಏರಿಕೆ ಕಂಡಿದ್ದ ಸಿಟಿ ಗ್ರೂಪ್ ಅನ್ನು ಪಂಡಿತ್ ಭಾರದ ಮನಸ್ಸಿನಿಂದ ತೊರೆದಿದ್ದಾರೆ.

ಆರ್ಥಿಕ ಸಂಕಷ್ಟದಿಂದ ಹೇಗೆ ಹೊರಬರಬೇಕು ಎಂಬುದನ್ನು ಸಿಟಿ ಗ್ರೂಪ್ ನ ನನ್ನ ಸಹದ್ಯೋಗಿಗಳು ಜಗತ್ತಿಗೆ ತೋರಿಸಿಕೊಟ್ಟ್ಟಿದ್ದಾರೆ. ಈಗ ಸಿಟಿ ಗ್ರೂಪ್ ಸದೃಢವಾಗಿದ್ದು, ಬೇರೆಯವರು ನನ್ನ ಸ್ಥಾನವನ್ನು ಅಲಂಕರಿಸಲಿ,. ನನಗೆ ಹುದ್ದೆ ತೊರೆಯಲು ಇದು ಸಕಾಲ ಎಂದು ವಿಕ್ರಮ್ ಪಂಡಿತ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Citigroup's India-born chief Vikram Pandit, who has made a sudden exit, was forced to leave the banking behemoth following differences with the board over strategy and overall business performance, media reports said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more