ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮಲಿಂಗರಾಜು 822 ಕೋಟಿ ಆಸ್ತಿ ಮುಟ್ಟುಗೋಲು

By Mahesh
|
Google Oneindia Kannada News

Ramalinga Raju
ಬೆಂಗಳೂರು, ಅ.18: ಸತ್ಯಂ ಐಟಿ ಸಂಸ್ಥೆಯ ಬಹುಕೋಟಿ ರುಪಾಯಿಗಳ ಹಗರಣಕ್ಕೆ ಸಂಬಂಧಿಸಿದಂತೆ ಸತ್ಯಂ ಕಂಪ್ಯೂಟರ್ಸ್‌ನ ಸ್ಥಾಪಕ ಅಧ್ಯಕ್ಷ ಬಿ ರಾಮಲಿಂಗರಾಜು ಅವರ ಬಹುಕೋಟಿ ಆಸ್ತಿಯನ್ನು ಗುರುವಾರ (ಅ.18) ಜಾರಿ ನಿರ್ದೇಶನಾಲಯ(ಇಡಿ) ಮುಟ್ಟುಗೋಲು ಹಾಕಿಕೊಂಡಿದೆ.

ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನಿಂದ ಕಳೆದ ವರ್ಷ ಜಾಮೀನು ಪಡೆದಿದ್ದ ರಾಮಲಿಂಗರಾಜು ಅವರಿಗೆ 'ಇಡಿ' ಗುರುವಾರ ಆಘಾತ ನೀಡಿದೆ.

ಮನಿ ಲಾಂಡ್ರಿಂಗ್ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಅದರಂತೆ ತನಿಖೆ ನಡೆಸಲಾಗಿದೆ. ರಾಮಲಿಂಗ ರಾಜು ಅವರು ತಪ್ಪೊಪ್ಪಿಗೆ ನೀಡಿದ ಮೇಲೆ ಈ ರೀತಿ ಕ್ರಮ ಜರುಗಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಳಿದ್ದಾರೆ.

ಸುಮಾರು 14,000 ಕೋಟಿ ರು ಅವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ರಾಮಲಿಂಗ ರಾಜು ಅವರ ಜೊತೆಗೆ ಇತರೆ ಆರೋಪಿಗಳಾದ PriceWaterhouseCoopers (PwC)ನ ಆಡಿಟರ್ ಸುಬ್ರಮಣಿ ಗೋಪಾಲಕೃಷ್ಣನ್ ಅಲ್ಲದೆ ಸತ್ಯಂನ ಮಾಜಿ ಸಿಎಫ್ ಒ ಶ್ರೀನಿವಾಸ್ ವದ್ಲಾಮಣಿ ಅವರು ಜಾಮೀನು ಪಡೆದಿದ್ದಾರೆ.

ವಂಚನೆ ಪ್ರಕರಣದಲ್ಲಿ ಏಳು ವರ್ಷದ ಶಿಕ್ಷೆಯಲ್ಲಿ ಸುಮಾರು 2ವರ್ಷ, 8 ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿದ್ದ ರಾಜು ಅವರು ನ.4, 2011ರಂದು ಚಂಚಲಗುಡ ಜೈಲಿನಿಂದ ಹೊರನಡೆದಿದ್ದರು. ಸುಮಾರು 7 ಸಾವಿರ ಕೋಟಿ ಮೊತ್ತದ ದಾಖಲೆಗಳನ್ನು ತಿರುಚಿದ್ದ ಆರೋಪವನ್ನು ರಾಜು ಅವರ ಮೇಲೆ ಹೊರೆಸಲಾಗಿತ್ತು.

English summary
Ramalinga Raju, founder of the Satyam Computers Services Ltd, who was given bail in November last year, received another blow on Thursday when the Enforcement Directorate attached properties belonging to him worth around Rs 822 crores.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X