ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿನ್ ಕೋಕಾಕೋಲಾ ಹಿಡಿದಿದ್ದೆ ಭರ್ಜರಿ ಹಿಟ್

By Mahesh
|
Google Oneindia Kannada News

Sachin and Coke
ಬೆಂಗಳೂರು, ಅ.18: ಸಚಿನ್ ತೆಂಡೂಲ್ಕರ್ ಅವರಂಥ ಬ್ರಾಂಡ್ ಅಂಬಾಸಿಡರ್ ಪಡೆದ ಮೇಲೆ ಅಮೆರಿಕ ಮೂಲದ ಕೋಕಾ ಕೋಲಾ ಸಂಸ್ಥೆ ಭಾರತದಲ್ಲಿ ಭರ್ಜರಿ ಮಾರಾಟ ದಾಖಲಿಸಿದೆ. ಸಚಿನ್ ಅವರನ್ನು ಬಳಸಿಕೊಂಡು ಗ್ರಾಮೀಣ ಶಾಲೆಗಳ ಅಭಿವೃದ್ಧಿ ಕಾರ್ಯಕ್ಕೂ ಕೋಕಾಕೋಲಾ ಮುಂತಾಗಿದ್ದು, ಬ್ರ್ಯಾಂಡ್ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸಿದೆ.

ಕಳೆದ ತ್ರೈಮಾಸಿಕದಲ್ಲಿ ಭಾರತದಲ್ಲಿ ಕೋಕಾಕೋಲಾ ಮಾರಾಟದಲ್ಲಿ ಶೇ 15 ರಷ್ಟು ಪ್ರಗತಿ ಕಾಣಲಾಗಿದೆ. ಸೆಪ್ಟೆಂಬರ್ 30 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಆದಾಯದಲ್ಲಿ ಶೇ 4 ರಷ್ಟು ಹೆಚ್ಚಿದ್ದು 2.31 ಬಿಲಿಯನ್ ಡಾಲರ್ ಗಳಿಸಲಾಗಿದೆ. ಈ ಅವಧಿಯಲ್ಲಿ ಭಾರತದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಂಡಿದೆ ಎಂದು ಸಂಸ್ಥೆ ಪ್ರಕಟಿಸಿದೆ.

ಭಾರತದ ನಂತರ ಮಧ್ಯ ಪ್ರಾಚ್ಯ ಹಾಗೂ ಉತ್ತರ ಆಫ್ರಿಕಾದಲ್ಲಿ ಶೇ 22 ರಷ್ಟು ಏರಿಕೆ ಕಂಡಿದೆ, ರಷ್ಯಾ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಶೇ 7 ರಷ್ಟು ಮಾರಾಟ ಪ್ರಗತಿ ಕಾಣಲಾಗಿದೆ.

ಭಾರತದಲ್ಲಿ ಕೋಕಾಕೋಲಾಗಿಂತ ಜ್ಯೂಸ್ ಮಾದರಿ ತಂಪು ಪಾನೀಯಗಳೇ ಹೆಚ್ಚು ಬೇಡಿಕೆ ಉಳಿಸಿಕೊಂಡಿದೆ. ಮಿನಿಟ್ ಮೇಡ್ ಪಲ್ಪಿ ಹಾಗೂ ಮ್ಯಾಂಗೋ ಮಾಜಾ ಜ್ಯೂಸ್ ಬೇಡಿಕೆ ಹೆಚ್ಚುತ್ತಿದೆ ಎಂದು ಕೋಕಾಕೋಲಾ ಸಂಸ್ಥೆ ಹೇಳಿದೆ.

ಒಟ್ಟಾರೆ ಭಾರತದಲ್ಲಿ ಈ ತ್ರೈಮಾಸಿಕದಲ್ಲಿ ಕೋಕಾಕೋಲಾ ಶೇ 34 ಹಾಗೂ ಸ್ಪ್ರೈಟ್ ಶೇ 15 ನಷ್ಟು ಬೇಡಿಕೆ ಹೆಚ್ಚಿಸಿಕೊಂಡಿದೆ.

ಮೂರನೇ ತ್ರೈಮಾಸಿಕದ ಕೊನೆಗೆ ಕಂಪನಿಯ ನಿವ್ವಳ ಆದಾಯ 12.34 ಬಿಲಿಯನ್ ಡಾಲರ್ ನಷ್ಟಿದೆ. ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಡುವೆ ಭಾರತದಲ್ಲಿ ಹೆಚ್ಚಿನ ಹಣ ತೊಡಗಿಸಿ ಕೋಕಾಕೋಲಾ ಹೆಚ್ಚಿನ ಗಳಿಕೆ ಎತ್ತಿದೆ.

ಜಾಗತಿಕವಾಗಿ ತಂಪು ಪಾನೀಯ ಮಾರುಕಟ್ಟೆಯಲ್ಲಿ ಶೇ 52 ರಷ್ಟು ಪಾಲು ಹೊಂದಿದ್ದು, ಶೇ 21.4 ರಷ್ಟು ಪಾಲು ಹೊಂದಿರುವ ಪೆಪ್ಸಿಕೋ ಗಿಂತ ಮುಂದಿದೆ. ಆದರೆ, ಭಾರತದ ಮಾರುಕಟ್ಟೆಯಲ್ಲಿ ಕೋಕಾ ಕೋಲಾಗೆ ಕಠಿಣ ಪೈಪೋಟಿ ಎದುರಿಸುತ್ತಿದೆ.

ಭಾರತದಲ್ಲಿ ಕೋಕಾ ಕೋಲಾ ಶೇ 56 ರಷ್ಟು ಮಾರುಕಟ್ಟೆ ಪಾಲು ಹೊಂದಿದ್ದರೆ, ಶೇ 40 ರಷ್ಟು ಪಾಲು ಪೆಪ್ಸಿಕೋ ಬಳಿ ಇದೆ.

1993ರಲ್ಲಿ ಥಮ್ಸ್ ಅಪ್, ಸ್ಥಳೀಯ ಸೋಡಾ ಬ್ರಾಂಡ್ ಗಳನ್ನು ಖರೀದಿಸಿದ ಕೋಕಾ ಕೋಲಾ ಮತ್ತೆ ಹಿಂತಿರುಗಿ ನೋಡಿಲ್ಲ, ಸ್ಪ್ರೈಟ್ ಅತಿ ಹೆಚ್ಚು ಮಾರಾಟವಾಗುವ ಬ್ರಾಂಡ್ ಆಗಿದೆ. ಶೇ 16.5ರಷ್ಟು ಪಾಲು ಹೊಂದಿದೆ. ಮಾಜಾ ಜ್ಯೂಸ್ ಕೆಟಗೆರಿಯಲ್ಲಿ ಮುಂಚೂಣಿಯಲ್ಲಿದೆ.

ಸೋಡಾ ಮಾರುಕಟ್ಟೆಯಲ್ಲಿ ಪೆಪ್ಸಿಕೋ ಶೇ 15ರಷ್ಟು ಪಾಲು ಹೊಂದಿದ್ದರೆ ಕೋಕ್ ಶೇ 8.8 ರಷ್ಟು ಮಾತ್ರ ಹೊಂದಿದ್ದು ಹಿಂದೆ ಬಿದ್ದಿದೆ.

ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡುವ ಮೂಲಕ ಆರ್ಥಿಕ ಏರಿಳಿತಕ್ಕೂ ಉತ್ತರ ನೀಡಲಾಗುವುದು. ಲಾಭ ವನ್ನು ದ್ವಿಗುಣಗೊಳಿಸಲಾಗುವುದು.

ಸಚಿನ್ ತೆಂಡೂಲ್ಕರ್ ಅವರಂಥ ಬ್ರಾಂಡ್ ಅಂಬಾಸಿಡರ್ ಮೂಲಕ ಇನ್ನಷ್ಟು ಪ್ರಗತಿ ಕಾಣಲು ಕೋಕಾ ಕೋಲಾ ಯೋಜಿಸಿದೆ ಎಂದು ಸಂಸ್ಥೆಯ ಭಾರತದ ಪ್ರತಿನಿಧಿಗಳು ಹೇಳಿದ್ದಾರೆ. ಗುರುವಾರ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಶೇ 0.42 ರಷ್ಟು ಷೇರುಗಳು ಕುಸಿದಿದೆ

English summary
With Sachin as its brand ambassador Beverages major Coca-Cola reported a 15 per cent increase in growth in sales volume in India for the third quarter ended September 28 on the back of strong demand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X