ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮೂರಿಗೆ ಬಂದ್ರೆ ವಾಪಸ್ ಹೋಗೋಲ್ಲಾ,ಸಚಿವರ ಧಮ್ಕಿ

|
Google Oneindia Kannada News

Union Law minister Salman Khurshid threatens Arvind Kejriwal
ನವದೆಹಲಿ, ಅ 17: ಭ್ರಷ್ಟಾಚಾರ ವಿರೋಧಿ ಸಂಘಟನೆಯ ಮೂಲಕ ರಾಜಕೀಯ ಪ್ರವೇಶಿಸಿದ ಅರವಿಂದ್ ಕ್ರೇಜಿವಾಲ್ ಮತ್ತು ಕೇಂದ್ರ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ನಡುವಣ ವಾಕ್ಸಮರ ತಾರಕಕ್ಕೇರಿದೆ.

ಒಂದು ವೇಳೆ ಕ್ರೇಜಿವಾಲ್ ನನ್ನ ಊರಿಗೆ ಪ್ರತಿಭಟನೆ ಮಾಡಲು ಬಂದರೆ ವಾಪಸ್ ಹೇಗೆ ಹೋಗ್ತಾರೆ ನೋಡ್ತೀನಿ ಎಂದು ಸಲ್ಮಾನ್ ಖುರ್ಷಿದ್ ಕ್ರೇಜಿವಾಲ್ ಅವರಿಗೆ ಬಹಿರಂಗ ಬೆದರಿಕೆ ಹಾಕಿದ್ದಾರೆ.

ನಾನು ಅಕ್ರಮ ಎಸಗಿದ್ದೇನೆ ಎಂದು ಸುಳ್ಳು ಆರೋಪ ಕ್ರೇಜಿವಾಲ್ ಮಾಡುತ್ತಿದ್ದಾರೆ. ಅವರು ನನ್ನ ಊರಾದ ಫಾರೂಖಾಬಾದ್ ಗೆ ಬರಬಹುದು. ಬರಲಿ.. ಈ ಬಾರಿ ಅವರಿಗೆ ರಕ್ತದಿಂದಲೇ ಉತ್ತರಿಸುವ ಕಾಲ ಬಂದಿದೆ. ಅವರಿಗೆ ರಕ್ತದ ಮೂಲಕವೇ ಉತ್ತರ ಕೊಡುವುದಾಗಿ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.

ನಾನೊಬ್ಬ ಕಾನೂನು ಸಚಿವ, ಹಾಗಾಗಿ ಪೆನ್ನಿನಿಂದ ಉತ್ತರ ನೀಡುತ್ತಿದ್ದೆ . ಆದರೆ ರಕ್ತದಿಂದ ಉತ್ತರ ನೀಡುವ ಕಾಲ ಸನ್ನಿಹಿತವಾಗಿದೆ ಎಂದು ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.

ಸಚಿವರ ಹೇಳಿಕೆಯನ್ನು ಭ್ರಷ್ಟಾಚಾರ ವಿರುದ್ದ ಭಾರತ ಸಂಘಟನೆ (India against Corruption) ತೀವ್ರವಾಗಿ ಖಂಡಿಸಿದೆ. ಈ ಕೂಡಲೇ ರಾಷ್ಟ್ರಪತಿಯವರು ಮಧ್ಯಪ್ರವೇಶಿಸ ಬೇಕು, ಸಂಘಟನೆಯ ಸದಸ್ಯರು ಫಾರೂಖಾಬಾದ್ ಗೆ ತೆರಳಿ ಪ್ರತಿಭಟನೆ ನಡೆಸುವುದಾಗಿ ಸಂಘಟನೆಯ ಸದಸ್ಯರು ಸವಾಲು ಹಾಕಿದ್ದಾರೆ.

ತದನಂತರ ಪತ್ರಕರ್ತರಿಗೆ ಹೇಳಿಕೆ ನೀಡಿದ ಸಚಿವರು ನನ್ನ ಹೇಳಿಕೆಯ ಉದ್ದೇಶ ಅದಲ್ಲ. ನನ್ನ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ ಎಂದು ಸ್ಪಷ್ಟ ಪಡಿಸಿದ್ದಾರೆ.

English summary
Union Law Minister Salman Khurshid threatened anti-corruption crusader-turned-politician Arvind Kejriwal, saying till now he has been wielding a pen and "it is time to replace ink with blood.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X