ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್ಸಿಗೆ ಹೋಗೋವ್ರಿಗೆ ಬಳುವಳಿ ಏಕೆ: ಬಿಎಸ್‌ವೈ

By Srinath
|
Google Oneindia Kannada News

balachandra-jarkiholi-sure-will-join-jds-yeddyurappa
ಬೆಂಗಳೂರು, ಅ.17: ನಿರೀಕ್ಷೆಯಂತೆ, ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿಗೆ ಹೆಚ್ಚುವರಿ ಜವಾಬ್ದಾರಿ ನೀಡಿರುವುದಕ್ಕೆ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತೀವ್ರ ಅಸಮಾಧಾನ/ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್ಸಿಗೆ ಹೋಗೋವ್ರಿಗೆ ಬಳುವಳಿ ಏಕೆ ?: 'ಬಿಜೆಪಿ ಬಿಡುತ್ತಿರುವ ನನಗೆ ಅದರ ಗೊಡವೆ ಏಕೆ ಅಂತಲ್ಲ. ಇನ್ನೂ ಅನೇಕ ಆಕಾಂಕ್ಷಿಗಳು ಇರುವಾಗ ಇವರೊಬ್ಬರಿಗೇ ಏಕೆ ಮಣೆ. ಅಷ್ಟಕ್ಕೂ ಬಾಲಚಂದ್ರ ಜಾರಕಿಹೊಳಿ ಜೆಡಿ ಎಸ್ ಪಕ್ಷಕ್ಕೆ ಹೋಗುವುದು ನೂರಕ್ಕೆ ನೂರು ನಿಜ.

ಅಂಥಾದ್ದರಲ್ಲಿ ಅವಯ್ಯಗೆ ಏಕೆ ಹೆಚ್ಚು ಜವಾಬ್ದಾರಿ ಎಂಬುದಷ್ಟೇ ನನ್ನ ಪ್ರಶ್ನೆ' ಎಂದು ಯಡಿಯೂರಪ್ಪ ಗುಡುಗಿದ್ದಾರೆ. ಬಿಜೆಪಿ ರಾಜ್ಯದಲ್ಲಿ ಜೆಡಿಎಸ್‌ನ ಕುಮಾರಸ್ವಾಮಿ ಜೊತೆ ಗುಪ್ತವಾಗಿ ಕೈಜೋಡಿಸಿದೆ. ಬಿಜೆಪಿ ಹಾಗೂ ಜೆಡಿಎಸ್ ಒಂದಾಗುವುದು ಕನಸಿನ ಮಾತು ಎಂದು ಹೇಳಿದರು.

ಡಾಲರ್ಸ್ ಕಾಲೊನಿಯಲ್ಲಿ ಇಂದು ಬೆಳಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ ಯಡಿಯೂರಪ್ಪ ಅವರು ಸಿಎಂ ಶೆಟ್ಟರ್ ವಿರುದ್ಧವೂ ಕೆಂಡಕಾರಿದ್ದಾರೆ. ಯಾರಿಗೆಲ್ಲ ಹೆಚ್ಚುವರಿ ಖಾತೆಗಳನ್ನು ಹಂಚ ಬೇಕು ಎಂಬುದರ ಬಗ್ಗೆ ಶೆಟ್ಟರ್ ಗೆ ನಾನು ಹೇಳಿದ್ದೆ.

ಆದರೆ ಅವರು ನನ್ನ ಸೂಚನೆಯನ್ನು ಪಾಲಿಸುತ್ತಿಲ್ಲ. ಸರಕಾರ ಉಳಿಯಬೇಕು ಅಂದರೆ ಶೆಟ್ಟರ್ ನನ್ನ ಸಲಹೆ ಕೇಳುವುದು ಸೂಕ್ತ. ಇಲ್ಲವಾದಲ್ಲಿ ಸದಾನಂದ ಗೌಡಗೆ ಏನಾಯಿತು ಎಂಬುದನ್ನು ಅವರು ಮರೆಯುವುದು ಬೇಡ' ಎಂದು ಯಡಿಯೂರಪ್ಪ ನೇರಾನೇರ ತಮ್ಮ ಮನದಾಳದ ಸಿಟ್ಟು ಸೆಡವನ್ನು ಹೊರಹಾಕಿದರು.

ಯಡಿಯೂರಪ್ಪ ವಿರುದ್ಧ ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಿದ ಬಳಿಕ ಮತ್ತಷ್ಟು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಮುಂದಾಗಿರುವ ಬಿಜೆಪಿ ಹೈಕಮಾಂಡ್, ಸಿಎಂ ಶೆಟ್ಟರ್ ನಿರ್ಧಾರಗಳ ಮೂಲಕ ಯಡಿಯೂರಪ್ಪಗೆ ಬಿಸಿಮುಟ್ಟಿಸುತ್ತಿದೆ.

English summary
Even as the BJP Minister Balachandra Jarkiholi gets Karnataka Urban Infrastructure Development and Finance Corporation (KUIDFC) Karnataka Urban Water Supply and Drainage Board (KUWSDB) as additional charges Ex CM BS Yeddyurappa has charged that Jarkiholi is all set to join JDS shortly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X