ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Q1: ಎಚ್ ಸಿಎಲ್ ಮತ್ತೆ ಭರ್ಜರಿ ಇಳುವರಿ

By Mahesh
|
Google Oneindia Kannada News

HCL outperforms again; PAT surges 3.6%
ಬೆಂಗಳೂರು, ಅ.17: ಸತತವಾಗಿ ಇನ್ಫೋಸಿಸ್ ಗೆ ಪೈಪೋಟಿ ನೀಡುತ್ತಿರುವ ಎಚ್ ಸಿಎಲ್ ಟೆಕ್ನಾಲಜೀಸ್ ಸಂಸ್ಥೆ ತನ್ನ Q1 ತ್ರೈಮಾಸಿಕದಲ್ಲಿ ಮತ್ತೊಮ್ಮೆ ಭರ್ಜರಿ ಇಳುವರಿ ತೆಗೆದಿದೆ.

2013ನೇ ಸಾಲಿನ Q1 ತ್ರೈಮಾಸಿಕದಲ್ಲಿ ಎಚ್ ಸಿಎಲ್ ನ PAT ಶೇ 3.6 ರಂತೆ 885 ಕೋಟಿ ರು ಗೆ ಏರಿದೆ. ವರ್ಷದಿಂದ ವರ್ಷದ ಲೆಕ್ಕದಲ್ಲಿ ಶೇ 78ರಷ್ಟು ಏರಿಕೆ ಕಂಡಿದೆ.

ಎಚ್ ಸಿಎಲ್ ಸಂಸ್ಥೆಯ ಆದಾಯ 6,091 ಕೋಟಿ ರು ನಷ್ಟಿದ್ದು, y-o-yನಲ್ಲಿ ಶೇ 31 ರಷ್ಟು ಹಾಗೂ q-o-q ನಲ್ಲಿ ಶೇ 2.9 ರಷ್ಟು ಮೇಲಕ್ಕೇರಿದೆ.

ಇದೇ ಖುಷಿಯಲ್ಲಿ ಎಚ್ ಸಿಎಲ್ ಸಂಸ್ಥೆ 2 ರು ಪ್ರತಿ ಷೇರಿನಂತೆ ಮಧ್ಯಂತರ ಡಿವಿಡೆಂಡ್ ಘೋಷಿಸಿದೆ.ಸತತವಾಗಿ 39 ನೇ ತ್ರೈಮಾಸಿಕದಲ್ಲಿ ಡಿವಿಡೆಂಡ್ ನೀಡುವ ಮೂಲಕ ಭರ್ಜರಿ ಸಾಧನೆ ಮಾಡಿದೆ.

ಜುಲೈ-ಜೂನ್ ಆರ್ಥಿಕ ವರ್ಷ ಮಾದರಿ ಅನುಸರಿಸುವ ಎಚ್ ಸಿಎಲ್ ಸಂಸ್ಥೆ ಕಳೆದ ತ್ರೈಮಾಸಿಕದಲ್ಲಿ ಟಾಪ್ ಮೂರು ಸಂಸ್ಥೆಗಳಾದ ಟಿಸಿಎಸ್, ಇನ್ಫೋಸಿಸ್ ಹಾಗೂ ವಿಪ್ರೋ ತ್ರೈಮಾಸಿಕ ಗಳಿಕೆಯನ್ನು ಮೀರಿಸಿ ಬೆಳೆದಿತ್ತು.

Xerox ಕಾರ್ಪೊರೇಷನ್ ಹಾಗೂ ರೀಡರ್ಸ್ ಡೈಜಸ್ಟ್ ಅಸೋಸಿಯೇಷನ್ Inc ನಂಥ ಗ್ರಾಹಕರನ್ನು ಹೊಂದಿರುವ ಎಚ್ ಸಿಎಲ್ ಗೆ ಇನ್ಫೋಸಿಸ್ ಸಂಸ್ಥೆ ಪ್ರಮುಖ ಪ್ರತಿಸ್ಪರ್ಧಿಯಾಗಿದೆ. 100 ಬಿಲಿಯನ್ ಡಾಲರ್ ಮಾಹಿತಿ ತಂತ್ರಜ್ಞಾನ ಸಂಸ್ಥೆ ಎನಿಸಿರುವ ಇನ್ಫೋಸಿಸ್ ನ back office ಸೇವಾ ವಿಭಾಗದ ಆದಾಯ ಮುಖ್ಯವಾಗಿ ಅಮೆರಿಕ ಹಾಗೂ ಯುರೋಪ್ ಕ್ಲೈಂಟ್ ಗಳ ಮೇಲೆ ಅವಲಂಬಿತವಾಗಿದೆ.

ಜಾಗತಿಕವಾಗಿ ಆರ್ಥಿಕ ವ್ಯವಸ್ಥೆ ಹದಗೆಟ್ಟ ಪರಿಣಾಮ ಹಾಗೂ ಹೆಚ್ಚಾದ ಪ್ರತಿಸ್ಪರ್ಧೆಯಿಂದ ಇನ್ಫೋಸಿಸ್ ತತ್ತರಿಸಿದೆ. ಇನ್ನೊಂದೆಡೆ ಆಕ್ಸೆಂಚರ್ ಕೂಡಾ ಗರಿ ಬಿಚ್ಚಿ ಮೇಲೆದ್ದಿದೆ. ಡಾಲರ್ ಮಾರಾಟ ಪ್ರಗತಿಯಲ್ಲಿ ತೀವ್ರ ಕುಸಿತ ಕಂಡ ಇನ್ಫೋಸಿಸ್ ದುಃಸ್ಥಿತಿ ಲಾಭ ನೇರವಾಗಿ ಎಚ್ ಸಿಎಲ್ ಕಂಪನಿ ಪಡೆದಿದೆ.

ಎಚ್ ಸಿಎಲ್ ಸಂಸ್ಥೆಯ ಒಟ್ಟು ಉದ್ಯೋಗಿಗಳ ಸಂಖ್ಯೆ ಸುಮಾರು 85,335 ನಷ್ಟಿದೆ. ಮೂಲ ಸೌಕರ್ಯ ಕ್ಷೇತ್ರದಲ್ಲಿ ಶೇ 10.3 ರಷ್ಟು ಪ್ರಗತಿ, ಹೊರಗುತ್ತಿಗೆ(BPO) ವಿಭಾಗದಲ್ಲಿ ಶೇ 4.8 ರಷ್ಟು ಹಾಗೂ ಗ್ರಾಹಕರ ಅನ್ವಯ ಸೇವಾ ಕ್ಷೇತ್ರದಲ್ಲಿ ಶೇ 1.6 ರಷ್ಟು ಪ್ರಗತಿ ಕಾಣಿಸಿದೆ.

ಇಷ್ಟೇ ಅಲ್ಲದೆ ಹೆಲ್ತ್ ಕೇರ್ ಶೇ 14.6, ರೀಟೈಲ್ ಹಾಗೂ ಸಿಪಿಜಿ ಶೇ 10.2, ಫೈನಾನ್ಸ್ ಸೇವೆ ಶೇ 3.6 ಹಾಗೂ ಮಾಧ್ಯಮ ಪ್ರಕಟಣೆ ಮತ್ತು ಮನರಂಜನೆ ಕ್ಷೇತ್ರದಲ್ಲಿ ಶೇ 7.3 ರಷ್ಟು ಪ್ರಗತಿ ಸಾಧಿಸಲಾಗಿದೆ.

YoY ನಲ್ಲಿ ಆದಾಯ ಶೇ 31 ರಷ್ಟು ಹಾಗೂ ತ್ರೈಮಾಸಿಕದಲ್ಲಿ ಶೇ 78 ರಷ್ಟು ನಿವ್ವಳ ಆದಾಯ ಗಳಿಸಿರುವುದಕ್ಕೆ ಸಂಸ್ಥೆಯ ಉದ್ಯೋಗಿಗಳ ಶ್ರಮ ಹಾಗೂ ಎಚ್ ಸಿಎಲ್ ನ ದೂರದರ್ಶಿತ್ವ ಯೋಜನೆಗಳೇ ಕಾರಣ ಎನ್ನಬಹುದು. ಫಾರ್ಚೂನ್ ಪಟ್ಟಿಯಲ್ಲಿ ನಮ್ಮ ಖಾತೆರ್ಗಳು ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆ ಎಂದು ಎಚ್ ಸಿಎಲ್ ಸಂಸ್ಥೆಯ ಉಪಾಧ್ಯಕ್ಷ ಹಾಗೂ ಸಿಇಒ ವಿನೀತ್ ನಾಯರ್ ಪ್ರತಿಕ್ರಿಯಿಸಿದ್ದಾರೆ.

English summary
HCL Technologies continued to outperform other IT peers with Q1 2013 PAT surging 3.6% to Rs 885 crores sequentially, up 78% year-on-year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X