ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತ್ಯಾನಂದನಿಗೆ ಉತ್ತರಾಧಿಕಾರಿಯಾಗುವ ಯೋಗ್ಯತೆಯಿಲ್ಲ

|
Google Oneindia Kannada News

Tamilu Nadu government submitted affidavit to Madras High Court
ಚೆನ್ನೈ, ಅ 16: ಬಿಡದಿ ನಿತ್ಯಾನಂದನಿಗೆ ಯಾವುದೇ ಮಠದ ಉತ್ತರಾಧಿಕಾರಿಯಾಗುವ ಯೋಗ್ಯತೆಯಿಲ್ಲ. ಮಧುರೈ ಅಧೀನಂ ಪೀಠದ ಉತ್ತರಾಧಿಕಾರಿಯಾಗಿ ನಿತ್ಯಾನಂದನನ್ನು ನೇಮಕ ಮಾಡುವುದು ಬೇಡವೆಂದು ತಮಿಳುನಾಡು ಸರಕಾರ ಮದ್ರಾಸ್ ಹೈಕೋರ್ಟಿಗೆ ಮನವಿ ಸಲ್ಲಿಸಿದೆ.

ನಿತ್ಯಾನಂದ ಸ್ವಾಮಿಯ ನಡತೆ ಸರಿಯಿಲ್ಲ. ಅಧೀನಂ ಪೀಠದ ಅರುಣಗಿರಿನಾಥರ ಜೊತೆ ಸೇರಿ ಮಠದ ಕೋಟ್ಯಾಂತರ ಆಸ್ತಿ ಲಪಟಾಯಿಸಲು ನಿತ್ಯಾನಂದ ಸಂಚು ನಡೆಸುತ್ತಿದ್ದಾನೆ ಎಂದು ತಮಿಳುನಾಡು ಸರಕಾರದ ಪರ ವಕೀಲ ನವನೀತ್ ಕೃಷ್ಣನ್ ವಿಭಾಗೀಯ ಪೀಠಕ್ಕೆ ಹೇಳಿಕೆ ನೀಡಿದ್ದಾರೆ.

ನಿತ್ಯಾನಂದ ಇತ್ತೀಚಿಗೆ ಅರುಣಗಿರಿನಾಥರ ಜೊತೆ ಸೇರಿ ಹೊಸ ಟ್ರಸ್ಟ್ ಆರಂಭಿಸಿದ್ದಾರೆ. ಹಿರಿಯರಾದ ಅರುಣಗಿರಿನಾಥರು ನಿತ್ಯಾನಂದ ಹೇಳಿದ್ದಕ್ಕೆಲ್ಲಾ ತಲೆಯಾಡಿಸುತ್ತಾರೆ.

ಮಧುರೈ ಅಧೀನಂ ಪೀಠದ ಉತ್ತರಾಧಿಕಾರಿಯಾಗಲು ಕನಿಷ್ಠ ಮಠದ ಸಾಮಾನ್ಯ ಭಕ್ತರಾಗಿರಬೇಕು. ನಿತ್ಯಾನಂದ ಮಠದ ಭಕ್ತನಲ್ಲ ಎಂದು ಜಗದಲ ಪ್ರತಾಪನ್ ಮತ್ತು ಮೀನಾಕ್ಷಿ ಪಿಳ್ಳೈ ಎನ್ನುವ ಮಠದ ಭಕ್ತರು ಈಗಾಗಲೇ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ್ದಾರೆ.

ಹೀಗಾಗಿ ನಿತ್ಯಾನಂದನನ್ನು ಮಠದ ಉತ್ತರಾಧಿಕಾರಿ ಮಾಡುವ ಯಾವುದೇ ಪ್ರಕ್ರಿಯೆಗೆ ಕೋರ್ಟ್ ಅನುಮತಿ ನೀಡಬಾರದೆಂದು ಸರಕಾರಿ ವಕೀಲ ನವನೀತ್ ಕೃಷ್ಣನ್, ನ್ಯಾ.ಭಾನುಮತಿ ಮತ್ತು ನ್ಯಾ.ಸುಬ್ಬಯ್ಯ ಅವರ ವಿಭಾಗೀಯ ಪೀಠಕ್ಕೆ ಮನವಿ ಸಲ್ಲಿಸಿದ್ದಾರೆ.

English summary
Tamilu Nadu government submitted affidavit to Madras High Court, stop proceeding electing Nityananda as Uttaradhikari of Madhurai Adheenam Peetham.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X