ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಳಿ ಸ್ವಾಮೀಜಿ ಮೇಲೆ ಬಿತ್ತು ವಂಚನೆ ಪ್ರಕರಣ

By Mahesh
|
Google Oneindia Kannada News

Rishi Kumar Swamiji
ಬೆಂಗಳೂರು: ಅ.16: ಪಬ್ಲಿಕ್ ಟಿವಿ 'ಡೀಲ್ ಕಾಳಿ' ಎಂಬ ಸ್ಟಿಂಗ್ ಆಪರೇಷನ್ ಮೂಲಕ ಕಾಳಿ ಮಠದ ಋಷಿಕುಮಾರ ಸ್ವಾಮೀಜಿ ಅವರ ಮಾನ ಹರಾಜಾದ ಮೇಲೆ ಈಗ ಸ್ವಾಮೀಜಿಗೆ ಮತ್ತೊಂದು ಕಂಟಕ ಒದಗಿ ಬಂದಿದೆ.

ಸ್ವಾಮೀಜಿ ವಿರುದ್ಧ ಬೆಂಗಳೂರಿನ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ. ಮಾನವ ಹಕ್ಕುಗಳ ಹೋರಾಟಗಾರ ನರಸಿಂಹಮೂರ್ತಿ ಎಂಬುವವರು ಕಾಳಿಕಾ ಮಠದ ಸ್ವಾಮೀಜಿ ಜನರಿಗೆ ವಂಚನೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.

ಸ್ವಾಮೀಜಿಯ ವಿರುದ್ಧ ಭಾನುವಾರ ವಂಚನೆ ದೂರು ದಾಖಲಾಗಿದ್ದು, ಸ್ವಾಮೀಜಿಯ ಪೂರ್ವಾಶ್ರಮದ ಚಿದಂಬರ ರಹಸ್ಯಗಳು ಒಂದೊಂದಾಗಿಯೇ ಹೊರಬರುತ್ತಿದೆಯಲ್ಲದೆ ಸ್ವಾಮೀಜಿ ವಿರುದ್ಧ ಕೆಲ ಸಂಘಟನೆಗಳು ಪ್ರತಿಭಟನೆಗಿಳಿದಿವೆ.

ಶವವೊಂದರ ತಲೆಯ ಮೇಲೆ ಪಾದಪೂಜೆ ಮಾಡಿಸಿಕೊಳ್ಳುತ್ತಿರುವ ಋಷಿಕುಮಾರನ ವಿಕೃತ ಪೂಜೆಯ ದೃಶ್ಯಾವಳಿಗಳನ್ನು ಟಿವಿ -9 ಸೋಮವಾರ ಪ್ರಸಾರ ಮಾಡಿತ್ತು. ಅಷ್ಟೇ ಅಲ್ಲದೆ, ಆತನ ಹಲವಾರು ಆಟಾಟೋಪಗಳ ಬಗ್ಗೆ ಸಾರ್ವಜನಿಕರು ಮತ್ತು
ಆತನಿಂದ ವಂಚನೆಗೊಳಗಾದವರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಚಾನೆಲ್ಲುಗಳೂ ಋಷಿಕುಮಾರ ಸ್ವಾಮೀಜಿಯನ್ನು ಬಹಿರಂಗವಾಗಿ ಹರಾಜು ಹಾಕಿದ್ದವು. ಜನಶ್ರೀ, ಕಸ್ತೂರಿ 24 ನ್ಯೂಸ್, ಟಿವಿ9 ನಿರಂತರವಾಗಿ ಋಷಿಕುಮಾರ ಸ್ವಾಮೀಜಿಯ ಜನ್ಮ ಜಾಲಾಡಿದೆ.

ಅವನು ಕೋಡಿ ಮಠದಲ್ಲಿ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡಿದ್ದು ನಿಜ. ಆದರೆ ನಮ್ಮ ಮಠದಲ್ಲಿ ಹಾಗೆಲ್ಲ ದೀಕ್ಷೆ ಕೊಡುವ ಪದ್ಧತಿ ಇಲ್ಲ. ಈ ಕಾಳಿ ಸ್ವಾಮಿಗೆ ನಾವು ಗುರು ಪದವಿ ನೀಡಿಲ್ಲ. ಅವನು ಸ್ವಂತ ಬುದ್ಧಿಯಿಂದ ಏನೇನೋ ಮಾಡಿದರೆ ನಮ್ಮ ಮಠ ಜವಾಬ್ದಾರಿಯಲ್ಲ. ಇಂತಹುವುದಕ್ಕೆಲ್ಲ ಪ್ರತಿಕ್ರಿಯೆ ನೀಡುವ ಸಂಪ್ರದಾಯವೂ ನಮ್ಮಲ್ಲಿ ಅಷ್ಟಾಗಿ ಇಲ್ಲ ಎಂದು ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಸ್ಪಷ್ಟಪಡಿಸಿದ್ದರು

ಬಿಡದಿ ಧ್ಯಾನಪೀಠದ ನಿತ್ಯಾನಂದನ ಸ್ವಾಮೀಜಿ ವಿರುದ್ಧ ಹೋರಾಟಕ್ಕಿಳಿದು ಸುದ್ದಿ ಮಾಡಿದ್ದ ಕಾಳಿ ಮಠದ ಋಷಿಕುಮಾರ ಸ್ವಾಮೀಜಿ ವಿರುದ್ಧವೇ ಇದೀಗ ಜನತೆ ತಿರುಗಿಬಿದ್ದಿದ್ದಾರೆ. ಬೆಂಗಳೂರು ಸೇರಿದಂತೆ ಹಾಸನದ ಅರಸೀಕೆರೆ, ಚಿಕ್ಕಮಗಳೂರಿನ
ಕಡೂರು ತಾಲೂಕಿನ ನೀರಗುಂದಿಯಲ್ಲಿನ ಕಾಳಿಕಾಶ್ರಮಕ್ಕೆ ನುಗ್ಗಿ ದಾಂಧಲೆ ನಡೆಸಿದರು.

ಬೆಂಗಳೂರಿನಿಂದ ಪರಾರಿಯಾಗಿದ್ದ ಸ್ವಾಮೀಜಿ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ನೀರಗುಂದಿಯಲ್ಲಿರುವ ಕಾಳಿಕಾಶ್ರಮಕ್ಕೆ ಬಂದು ಬಳಿಕ ಕೇರಳದ ಅಜ್ಞಾತ ಸ್ಥಳದಲ್ಲಿ ತಲೆಮರೆಸಿಕೊಂಡಿದ್ದಾನೆ. ಅಲ್ಲದೆ ಇನ್ನೆರಡು ದಿನದಲ್ಲಿ ಸಾಕ್ಷಿ ಸಮೇತ ಎಲ್ಲರ ಮುಂದೆ
ಬರುವುದಾಗಿ ಶಿಷ್ಯರ ಮೂಲಕ ಮಾಧ್ಯಮಗಳಿಗೆ ಮಾಹಿತಿ ರವಾನಿಸಿದ್ದರು.

ಸದ್ಯಕ್ಕೆ ಸುವರ್ಣ ಸುದ್ದಿವಾಹಿನಿ 24X7 ಯಲ್ಲಿ 'ಜನತಾ ನ್ಯಾಯಾಲಯ'ದಲ್ಲಿ ಋಷಿಕುಮಾರ ಸ್ವಾಮೀಜಿಗಳು ನೇರ ದಿಟ್ಟ ನಿರಂತರವಾಗಿ ಸಾರ್ವಜನಿಕರ ಆಕ್ರೋಶಕ್ಕೆ ಸೂಕ್ತ ಉತ್ತರ ನೀಡುವಲ್ಲಿ ನಿರತರಾಗಿದ್ದಾರೆ.

English summary
A complaint registered against Kali mutt Rishi Kumar seer by Human right activist Narasimha Murthy in Subramanya Nagar Police Bangalore. Rishikumar swamiji allegedly involved in many fraud case and was exposed by Public TV sting operation. later TV 9 revealed many more facts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X