ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

402ನೇ ಮೈಸೂರು ದಸರಾ ಉತ್ಸವಕ್ಕೆ ಚಾಲನೆ

By Mahesh
|
Google Oneindia Kannada News

ಮೈಸೂರು,ಅ.16: ವಿಶ್ವಪ್ರಸಿದ್ಧ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2012ಕ್ಕೆ ಸಾಂಪ್ರದಾಯಿಕವಾಗಿ ಚಾಲನೆ ದೊರೆತಿದೆ. ಶ್ರೀ ಸಿದ್ದೇಶ್ವರ ಸ್ವಾಮಿಗಳು ಶುಭ ಧನುರ್ ಲಗ್ನದಲ್ಲಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಬೆಳಗ್ಗೆ 10-47 ಗಂಟೆ ಸುಮಾರಿಗೆ ದೀಪ ಬೆಳಗಿಸಿ ನಾಡಹಬ್ಬ ದಸರಾಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

ಹತ್ತು ದಿನಗಳ ಕಾಲ ಸಾಂಪ್ರದಾಯಿಕವಾಗಿ ಆಚರಣೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಸಾಂಸ್ಕೃತಿಕ ನಗರಿ ಮೈಸೂರು ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಅವರು ಸಂಭ್ರಮದಿಂದ ಹೇಳಿದ್ದಾರೆ.

ಈ ಶುಭ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಉಪ ಮುಖ್ಯಮಂತ್ರಿ ಆರ್ ಅಶೋಕ್, ಮೈಸೂರು ಮೇಯರ್ ರಾಜೇಶ್ವರಿ, ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಗೋವಿಂದ ಕಾರಜೋಳ, ಶಾಸಕ ಎಂ ಸತ್ಯ ನಾರಾಯಣ ಸೇರಿದಂತೆ ಹಲವಾರು ಚುನಾಯಿತ ಪ್ರತಿನಿಧಿಗಳು, ಗಣ್ಯರು ಭಾಗವಹಿಸಿದ್ದರು.

ದಸರಾ ಉದ್ಘಾಟನೆಗೂ ಮುನ್ನ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ದಸರಾ ಭಜನಾ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಂದ ದೇವಿ ಸ್ತುತಿ ಭಜನಾ ಕಾರ್ಯಕ್ರಮ ಸಾಂಗವಾಗಿ ನೆರವೇರಿತು. ಬೆಳ್ಳಿರಥದಲ್ಲಿ ಬೆಟ್ಟದ ತಾಯಿ ಚಾಮುಂಡೇಶ್ವರಿಯ ಉತ್ಸವಮೂರ್ತಿ ಎಲ್ಲರನ್ನು ಆಕರ್ಷಿಸುತ್ತಿತ್ತು. ಪ್ರಧಾನ ಅರ್ಚಕ ವೇ.ಬ್ರ. ಶ್ರೀ ಶಶಿ ದೀಕ್ಷಿತ್ ಅವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಿರ್ವಿಘ್ನವಾಗಿ ನಡೆಯಿತು.

ಆಹಾರ ಮೇಳ ಉದ್ಘಾಟನೆ: ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಅವರ ಪರಿವಾರದವರು ಪಾರಂಪರಿಕ ಊಟ ಮಾಡುವ ಮೂಲಕ ಮೈಸೂರು ದಸರಾ-2012ರ ಆಹಾರ ಮೇಳವನ್ನು ಮಂಗಳವಾರ ಮಧ್ಯಾಹ್ನ ಉದ್ಘಾಟಿಸಲಿದ್ದಾರೆ. ಈ ಆಹಾರ ಮೇಳದಲ್ಲಿ ಕೇರಳ, ತಮಿಳುನಾಡು, ರಾಜಸ್ತಾನ ರಾಜ್ಯಗಳು ಸೇರಿದಂತೆ ಸುಮಾರು 52 ವಿವಿಧ ಬಗೆಯ ಆಹಾರ ಮಳಿಗೆಗಳು ಇರಲಿವೆ ಎಂದು ಸಚಿವ ರಾಮದಾಸ್ ತಿಳಿಸಿದರು.

ಚಲನಚಿತ್ರೋತ್ಸವ : ದಸರಾ ಚಲನಚಿತ್ರೋತ್ಸವವನ್ನು ನಟ ಶಿವರಾಜ್ ಕುಮಾರ್ ಹಾಗೂ ಮುಖ್ಯಮಂತ್ರಿಗಳು ಸಂಜೆ 4 ಗಂಟೆಗೆ ಕಲಾಮಂದಿರದಲ್ಲಿ ಉದ್ಘಾಟಿಸಲಿದ್ದಾರೆ.

ಪ್ರಶಸ್ತಿ ವಿಜೇತ ಚಲನಚಿತ್ರಗಳು ಹಾಗೂ ಜನಪ್ರಿಯ ಚಿತ್ರಗಳನ್ನು ಸ್ಕೌಟ್ಸ್ ಅಂಡ್ ಗೈಡ್ಸ್ ಭವನ, ಸೆನೆಟ್ ಭವನ ಸೇರಿದಂತೆ ನಗರದ ವಿವಿಧ ಉದ್ಯಾನವನಗಳು ಹಾಗೂ ಚಲನಚಿತ್ರ ಮಂದಿರಗಳಲ್ಲಿ ಪ್ರದರ್ಶಿಸಲಾಗುತ್ತದೆ. ಯುವಸಂಭ್ರಮ ಕಾರ್ಯಕ್ರಮ, ಸಾಹಸ ಕ್ರೀಡೆಗಳು, ಫಲಪುಷ್ಪ ಪ್ರದರ್ಶನ, ವಸ್ತುಪ್ರದರ್ಶನ ಮುಂತಾದವುಗಳು ಸಾರ್ವಜನಿಕರ ಆಕರ್ಷಿಸಲು ಸಿದ್ಧವಾಗಿದೆ.

English summary
Bijapur's Gnanayogashrama seer Siddeshwara Swami launched nine-day Dasara festivities Tuesday(Oct.16) at the Chamundi Hill Shrine, Mysore. The 402th Mysore Dasara events also inaugurated by CM Jagadish Shettar
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X