ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಸ್ಲಿಮರಿಗೆ ಪ್ರತ್ಯೇಕವಾದ ನೊಬೆಲ್ ಪ್ರಶಸ್ತಿ

|
Google Oneindia Kannada News

 Iran announces Great Prophet World Prize for scientific achievements
ಮಾಸ್ಕೋ, ಅ 15: ಜಗತ್ತಿನ ಮುಸ್ಲಿಂ ರಾಷ್ಟ್ರಗಳಲ್ಲಿ ಬಹಳಷ್ಟು ಪ್ರತಿಭಾನ್ವಿತ ವಿಜ್ಞಾನಿಗಳಿದ್ದಾರೆ. ಆದರ ಅವರ ಪ್ರತಿಭೆಗಳಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಗುತ್ತಿಲ್ಲ.

ಹೀಗಾಗಿ ಮುಸ್ಲಿಂ ಸಮುದಾಯದ ವಿಜ್ಞಾನಿಗಳಿಗೆ ನೊಬೆಲ್ ಪ್ರಶಸ್ತಿಗೆ ಸರಿಸಮನಾದ ಪ್ರಶಸ್ತಿ ನೀಡಿ ಅವರನ್ನು ಹುರಿದುಂಬಿಸಲು ನಿರ್ಧರಿಸಲಾಗಿದೆ ಎಂದು ಇರಾನ್ ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯ ಉಪಾಧ್ಯಕ್ಷರು ಹೇಳಿದ್ದಾರೆ.

ಈ ಪ್ರಶಸ್ತಿಗಳಿಂದ ಮುಸ್ಲಿಂ ಜಗತ್ತಿನ ಇನ್ನಷ್ಟು ವಿಜ್ಞಾನಿಗಳನ್ನು ಗುರುತಿಸಬಹುದು. ಜಾಗತಿಕ ಮಟ್ಟದಲ್ಲಿ ಇತರ ಮುಸ್ಲಿಮೇತರ ರಾಷ್ಟ್ರಗಳಿಗೆ ಈ ವಿಭಾಗದಲ್ಲಿ ನಾವು ಪೈಪೋಟಿ ನೀಡಬಹುದು ಎನ್ನುವುದು ನಮ್ಮ ಉದ್ದೇಶ ಎಂದು ಸಂಸ್ಥೆಯ ಉಪಾಧ್ಯಕ್ಷ ನಸ್ರಿನ್ ಎಸ್ ಖಾನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರವಾದಿ ಮೊಹಮ್ಮದ್ ಹೆಸರಿನಲ್ಲಿ ನೀಡಲಾಗುವ ಈ ಪ್ರಶಸ್ತಿಯನ್ನು ಮೂರು ವಿವಿಧ ತಾಂತ್ರಿಕ ಕ್ಷೇತ್ರಗಳಲ್ಲಿ ಸಾಧನೆಗೈಯುವ ವಿಜ್ಞಾನಿಗಳಿಗೆ ಎರಡು ವರ್ಷಕ್ಕೊಮ್ಮೆ ನೀಡಲಾಗುವುದು.

ಇರಾನ್ ಕೂಡಾ ಈ ಕ್ಷೇತ್ರದಲ್ಲಿ ಮಹತ್ವದ ಸಾಧನೆಯನ್ನು ಮಾಡಿದೆ ಎಂದು ನಸ್ರಿನ್ ಖಾನ್ ಹೇಳಿದ್ದಾರೆ.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮುಸ್ಲಿಮರು ಉತ್ತಮ ಸಾಧನೆ ಮಾಡಿದ್ದಾರೆ, ಇರಾನ್ ಕೂಡಾ ಇದರಲ್ಲೊಂದು.

'ಗ್ರೇಟ್ ಪ್ರಾಫೆಟ್ ವರ್ಲ್ಡ್ ಪ್ರೈಸ್' ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುವುದು. ಪ್ರಶಸ್ತಿ ಮೊತ್ತವನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದು ನಸ್ರಿನ್ ಖಾನ್ ತಿಳಿಸಿದ್ದಾರೆ.

1901 ರಲ್ಲಿ ನೊಬೆಲ್ ಪ್ರಶಸ್ತಿ ಶುರುವಾಯಿತು. ಆರು ಕ್ಷೇತ್ರಗಳಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇರಾನಿನ ಮಾನವ ಹಕ್ಕು ಹೋರಾಟಗಾರ್ತಿ ಶಿರೀನ್ ಎಬಾದಿಗೆ 2003ರಲ್ಲಿ ಈ ಪ್ರಶಸ್ತಿ ಸಿಕ್ಕಿದ್ದು ಬಿಟ್ಟರೆ ಇರಾನಿನ ಯಾವ ವ್ಯಕ್ತಿಗೂ ಈ ಪ್ರಶಸ್ತಿ ಸಿಕ್ಕಿಲ್ಲ.

English summary
Iranian Vice President for Science and Technology Nasrin Soltankhah said, Iranian government plans to grant a Nobel-like prize to selected Muslim scientists. This prize is to encourage them to promote and elevate their works and prepare them for “tighter and harder rivalries at global levels, like the Nobel Prize,”
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X