ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಞಾನಭಾರತಿ ಬಳಿ ಲಾ ವಿದ್ಯಾರ್ಥಿನಿಯ ಸಾಮೂಹಿಕ ರೇಪ್

By Srinath
|
Google Oneindia Kannada News

nepal-law-student-molested-at-bangalore-jnanabharathi
ಬೆಂಗಳೂರು, ಅ.16: IBM ಟೆಕ್ಕಿ ಗೆಳೆಯನ ಜತೆಯಿದ್ದಾಗ ನೇಪಾಳ ಮೂಲದ ವಿದ್ಯಾರ್ಥಿನಿy ಮೇಲೆ ಶನಿವಾರ ರಾತ್ರಿ ಜ್ಞಾನಭಾರತಿ ಕ್ಯಾಂಪಸ್ ಬಳಿ ಸಾಮೂಹಿಕ ಅತ್ಯಾಚಾರ ನಡೆದಿದೆ ಎನ್ನಲಾಗಿದೆ.

ಸದರಿ ವಿದ್ಯಾರ್ಥಿನಿ ನಗರದ ನಾಗರಬಾವಿಯಲ್ಲಿನ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ದುಷ್ಕರ್ಮಿಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.

ಅತ್ಯಾಚಾರ ವೃತ್ತಾಂತದ ಬಗ್ಗೆ ಅನುಮಾನವಿದೆ. ಬಾಧಿತಳನ್ನು ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ವೈದ್ಯಕೀಯ ವರದಿ ಆಧರಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈ ಮಧ್ಯೆ, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆದಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್ಎನ್ ಸಿದ್ರಾಮಪ್ಪ ಹೇಳಿದ್ದಾರೆ.

IBM ಟೆಕ್ಕಿ ಗೆಳೆಯನ ಜತೆಯಿದ್ದಾಗ: ಬಾಧಿತ ವಿದ್ಯಾರ್ಥಿನಿ 21 ವರ್ಷದ ಆಕೆ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ ದ್ವಿತೀಯ ವರ್ಷದಲ್ಲಿ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದಾಳೆ. ಈಕೆಗೆ ನಗರದ IBM ಟೆಕ್ಕಿಯೊಬ್ಬ ಫೇಸ್ ಬುಕ್ ಮೂಲಕ 6 ತಿಂಗಳ ಹಿಂದೆ ಗೆಳೆಯನಾಗಿದ್ದ. ಈತ ಕೇರಳದ ಕೊಲ್ಲಂ ಮೂಲದವ. ಅನಂತರ ಅದು ಪ್ರೇಮಕ್ಕೆ ತಿರುಗಿತ್ತು. ಹಾಗಾಗಿ, ಟೆಕ್ಕಿ ಪ್ರಿಯಕರ ದಿನಾ ರಾತ್ರಿ ಸದರಿ ವಿದ್ಯಾರ್ಥಿನಿಯನ್ನು ಭೇಟಿಯಾಗುತ್ತಿದ್ದ.

ಹಾಗಿರುವಾಗ ಶನಿವಾರ ರಾತ್ರಿ 11 ಗಂಟೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿನ ಜ್ಞಾನ ಭಾರತಿ ಕ್ಯಾಂಪಸ್‌ನಲ್ಲಿ ಟೆಕ್ಕಿ ಗೆಳೆಯ ಸೇರಿದಂತೆ ಕೆಲ ಸ್ನೇಹಿತನೊಂದಿಗೆ ಕಾರಿನಲ್ಲಿ ಕುಳಿತು ಆಕೆ ಮಾತನಾಡುತ್ತಿದ್ದಳು.

ಈ ಸಂದರ್ಭದಲ್ಲಿ ಅಲ್ಲಿಗೆ ಬಂದ 6-7 ಮಂದಿ ದುಷ್ಕರ್ಮಿಗಳು ವಿದ್ಯಾರ್ಥಿನಿ ಹಾಗೂ ಆಕೆಯ ಸ್ನೇಹಿತರೊಂದಿಗೆ ಜಗಳ ತೆಗೆದಿದ್ದಾರೆ. ಅನಂತರ ಗೆಳೆಯರನ್ನು ಥಳಿಸಿದ್ದು, ಆಕೆಯನ್ನು ಪೊದೆಯೊಂದಕ್ಕೆ ಎಳೆದೊಯ್ಯು ಸಾಮೂಹಿಕ ಅತ್ಯಾಚಾರ ನಡೆಸಿ, ಪರಾರಿಯಾಗಿದ್ದಾರೆ. ಅನಂತರ ಟೆಕ್ಕಿ ಗೆಳೆಯ ಆಕೆಯನ್ನು ಜ್ಞಾನಭಾರತಿ ಪೊಲೀಸ್ ಠಾಣೆಗೆ ಕರೆದೊಯ್ದು ದೂರು ನೀಡಿದ್ದಾನೆ ಎಂದು ತಿಳಿದು ಬಂದಿದೆ.

English summary
A 21-year-old Nepal girl student of the National Law School of India University was allegedly gang-molested by a group of seven to eight men in the adjoining Jnanabharathi campus of Bangalore University late on Saturday night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X