ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಬ್ಲಿಕ್ ಟಿವಿಯಲ್ಲಿ ಕಾಳಿ ಸ್ವಾಮಿಯ ಡೀಲ್ - ಶೊ

By Shami
|
Google Oneindia Kannada News

Rishikumar Swamy
ಇಂದು ಅಕ್ಟೋಬರ್ 14 ರ ಭಾನುವಾರ ಬೆಳಗ್ಗೆ ಇಂಥದೊಂದು ಬೆಚ್ಚಿಬೀಳಿಸುವ ಸುದ್ದಿ ಸ್ಫೋಟಗೊಳ್ಳುವುದೆಂದು ಕರ್ನಾಟಕ ನಿರೀಕ್ಷಿಸಿರಲಿಲ್ಲ. ರಜಾ ದಿವಸ ಬೆಳಗಿನ ಹೊತ್ತು ಕನ್ನಡ 24x7 ಸುದ್ದಿ ವಾಹಿನಿಗಳನ್ನು ತಡಕಾಡುವವರಿಗೆ ಮುಂಜಾನೆ 7.30 ಕ್ಕೆ ಅಕಸ್ಮಾತ್ ಕಣ್ಣಿಗೆ ಬಿದ್ದದ್ದು ಪಬ್ಲಿಕ್ ಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ವಿಶೇಷ ಕಾರ್ಯಕ್ರಮ "ಡೀಲ್ ಕಾಳಿ"

ಏನಿದು ಡೀಲ್ ಕಾಳಿ? : ಅದೊಂದು ಸ್ಟಿಂಗ್ ಆಪರೇಷನ್. ಬಿಡದಿ ಆಶ್ರಮದ ಪರಮಹಂಸ ನಿತ್ಯಾನಂದ ಸ್ವಾಮಿಯ ಇಂಟರ್ ನ್ಯಾಷನಲ್ ಲೆವೆಲ್ ಪಾಪ ಕೃತ್ಯಗಳನ್ನು ರಾಜಾರೋಷದಿಂದ, ಆವೇಶದಿಂದ ಲೋಕಲ್ ಮಟ್ಟದಲ್ಲಿ ವಿರೋಧಿಸುತ್ತಿದ್ದ ಕಾಳಿಕಾ ಮಠದ ಋಷಿಕುಮಾರ ಸ್ವಾಮೀಜಿ ಎಂಬಾತ ಹಣದ ಆಸೆಗೆ ಬಿದ್ದು ತಾನೇ ನೇಯ್ದ ಜೇಡರ ಬಲೆಯಲ್ಲಿ ತಾನೇ ಸಿಕ್ಕಿಬಿದ್ದ ಕಥೆ.

ವಿಷಯ ಇಷ್ಟು : ಕಾಳಿ ಸ್ವಾಮಿ ಮೇಲುನೋಟಕ್ಕೆ ಸಮಾಜದ ಕೊಳೆ ತೊಳೆಯಲು ಹೊರಟ ವೀರ ಸನ್ಯಾಸಿಯಂತೆ ಕಂಡರೂ ಆತನೊಬ್ಬ ಭಯಂಕರ ಡೀಲ್ ಮಾಸ್ಟರ್ ಎನ್ನುವುದು ಟಿವಿ ಪ್ರಸಾರ ಮಾಡಿದ ವಿಡಿಯೊ ಫುಟೇಜುಗಳಲ್ಲಿ ಬಹಿರಂಗವಾಯಿತು. ನಿತ್ಯಾನಂದನ ರಾಸಲೀಲೆಗಳು, ಆತನ ಆಶ್ರಮದ ಚಟುವಟಿಕೆಗಳ ವಿರುದ್ಧ ಹರಿಹಾಯುತ್ತಿದ್ದ ಕಾಳಿಸ್ವಾಮಿ, ಅದೇ ನಿತ್ಯಾನಂದನ ಸನ್ನಿಧಿಯಿಂದ 10 ಕೋಟಿ ರೂಪಾಯಿ ಕಪ್ಪ ಮತ್ತು ಒಂದು ಫಾರ್ಚೂನರ್ ಕಾರಿನ ಮೋಹಕ್ಕೆ ಸಿಲುಕಿದ್ದು ಕೋಟಿಗಟ್ಟಲೆ ಕನ್ನಡಿಗರ ಮುಂದೆ ಬೆತ್ತಲೆ ಆಯಿತು.

ಸ್ಟಿಂಗ್ ಆಪರೇಷನ್ನಿನಲ್ಲಿ ಇದ್ದವರು ಕಾಳಿ ಸ್ವಾಮಿಯ ಮೂರು ಮಂದಿ ಮಾಜಿ ಶಿಷ್ಯರು. ಈ ಮೊದಲು ಸ್ವಾಮಿಯ ವಾಕ್ ಚಾತುರ್ಯಕ್ಕೆ, ಪ್ರಭಾವಳಿಗೆ ಅವರು ಮನಸೋತಿರುತ್ತಾರೆ. ಆದರೆ, ಆತನಿಗೆ ಅಂಟಿದ ಕೀರ್ತಿ ಶನಿ, ಧನದಾಹ, ಪ್ರಚಾರ ಪ್ರಿಯತೆ ಕ್ರಮೇಣ ಗೊತ್ತಾಗಿ ಸ್ವಾಮಿಯನ್ನು ಖೆಡ್ಡದಲ್ಲಿ ಕೆಡವಲು ಪ್ಲಾನ್ ಮಾಡುತ್ತಾರೆ. ಅಂತಿಮವಾಗಿ ಬಲೆಗೆ ಬಿದ್ದ ಕಾಳಿ ಹಗರಣ ಪ್ರಸಾರ ಮಾಡುವುದಕ್ಕೆ ಪಬ್ಲಿಕ್ ಟಿವಿ ವೇದಿಕೆ ಆಗುತ್ತದೆ.

ಡೀಲ್ ಏನೆಂದರೆ: ನಿತ್ಯಾನಂದನ ವಿರುದ್ಧದ ಹೋರಾಟವನ್ನು ಕಾಳಿ ಸ್ವಾಮಿ ತುಳಿಯುವುದು. ನಿತ್ಯಾ ವಿರುದ್ಧ ಚಳವಳಿ ನಡೆಸುತ್ತಿರುವ ಕನ್ನಡಪರ, ಮಹಿಳಾಪರ ಸಂಘಟನೆಗಳ ಬಾಯಿ ಮುಚ್ಚಿಸುವುದು. ನಿತ್ಯಾನಂದನಿಂದ ಶೋಷಣೆಗೊಳಗಾಗಿರುವ (ಅತ್ಯಾಚಾರ ) ಅನಿವಾಸಿ ಭಾರತೀಯ ಆರತಿ ರಾವ್ ಅವರ ಹೋರಾಟ ಹಳ್ಳ ಹಿಡಿಸುವುದು. ಆದರೆ, ಈ ಪ್ರಾಜೆಕ್ಟಿಗೆ ನಿತ್ಯಾನಂದ ಆಶ್ರಮದಿಂದ ಪೇಮೆಂಟ್ ರೂಪದಲ್ಲಿ 10 ಕೋಟಿ ರೂ ಹಶ್ ಮನಿ ಹಾಗೂ ಒಂದು 4WD ಫಾರ್ಚೂನ್ ಕಾರ್ ( ಬೆಲೆ 28 ಲಕ್ಷ ) ಕೊಡಬೇಕು. ಇದನ್ನೆಲ್ಲ ಕಾಳಿಸ್ವಾಮಿಗೆ ಕೊಡಿಸುವ ಕ್ಯಾರಟ್ಟೇ ಪಬ್ಲಿಕ್ ಟಿವಿಯ ಸ್ಟಿಂಗ್ ಆಪರೇಷನ್.

English summary
Public TV kannada 24/7 news channel sting operation expose Rishikumar Swamy ( Kali matt Swamy) shady deals. Kali seer who was all along protesting against Nithyananda swamys misdeeds turned Volta face, sought Rs 10 crore and a Fortune Car as hush money from Nithya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X