ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಲಹಂಕದಲ್ಲಿ ವಿಶ್ವೇಶ್ವರಯ್ಯ vs ಬಸವೇಶ್ವರ ಸಮರ

By Mahesh
|
Google Oneindia Kannada News

Vishweshwaraiah vs Basaveshwara in Yelahanka, source:Bangaloremirror
ಬೆಂಗಳೂರು, ಅ.12: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಯಾವುದೇ ಪಾರ್ಕ್ ಅಥವಾ ರಸ್ತೆಗಳಿಗೆ ನಾಮಕರಣ ಮಡುವ ಮುನ್ನ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಕೋರುವುದು ಮಾಮೂಲಿ. ಆದರೆ, ಯಲಹಂಕದಲ್ಲಿ ಉದ್ಯಾನವನ ನಾಮಕರಣ ಈಗ ಗೊಂದಲಮಯವಾಗಿದೆ.

ಅದರಂತೆ ಯಲಹಂಕ ಉಪನಗರ 3ನೇ 'ಎ' ಮುಖ್ಯರಸ್ತೆ, 11ನೇ 'ಎ' ಅಡ್ಡರಸ್ತೆ ಹಾಗೂ 12ನೇ 'ಎ' ಅಡ್ಡರಸ್ತೆ ನಡುವಿನ ಉದ್ಯಾನಕ್ಕೆ 'ವಿಶ್ವಗುರು ಬಸವಣ್ಣನವರ ಉದ್ಯಾನವನ' ಎಂದು ನಾಮಕರಣ ಮಾಡಲು ನಿರ್ಧರಿಸಲಾಗಿದೆ ಇದಕ್ಕೆ ಆಕ್ಷೇಪಣೆ ಇದ್ದರೆ ಸಲ್ಲಿಸಬಹುದು ಎಂದು ಬಿಬಿಎಂಪಿ ಸೆ.26,2012ರಂದು ಪ್ರಕಟಣೆ ನೀಡಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ್ದ ಸ್ಥಳೀಯರು, ಉದ್ಯಾನವನವಕ್ಕೆ ವಿಶ್ವಗುರು ಬಸವಣ್ಣ ಹೆಸರಿಡಲು ಆಕ್ಷೇಪ ವ್ಯಕ್ತಪಡಿಸಿದ್ದರು. ಚಿಕ್ಕಬಳ್ಳಾಪುರ ಬಳಿಯ ಮುದ್ದೇನಹಳ್ಳಿ ಜನಿಸಿದ ವಿಶ್ವಖ್ಯಾತ ಇಂಜಿನಿಯರ್ ಸರ್ ಎಂ ವಿಶ್ವೇಶ್ವರಯ್ಯ ಅವರ ಹೆಸರಿಡುವಂತೆ ಸ್ಥಳೀಯ ನಾಗರೀಕರು ಮನವಿ ಸಲ್ಲಿಸಿದ್ದರು. ಬಿಬಿಎಂಪಿ ಕೂಡಾ ಆಕ್ಷೇಪಣೆಗೆ ಸ್ಪಂದಿಸಿತ್ತು.

ಆದರೆ,ಈಗ ಉದ್ಯಾನವನಕ್ಕೆ ವಿಶ್ವಗುರು ಬಸವೇಶ್ವರ ಅವರ ಹೆಸರನ್ನು ಇಟ್ಟು ಆ.15 ರಂದು ತರಾತುರಿಯಲ್ಲಿ ಬಸವೇಶ್ವರ ಪುತ್ಠಳಿ ಅನಾವರಣಗೊಳಿಸಿರುವ ವೀರಶೈವ ಈಶ್ವರ ಸೇವಾ ಸಮಿತಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಬಸವಣ್ಣನವರ ಹೆಸರನ್ನು ಇಡಲು ಆಕ್ಷೇಪಣೆ ಸಲ್ಲಿಸಲಾಗಿದ್ದರೂ ಅನುಮತಿ ಇಲ್ಲದೆ ಈ ರೀತಿ ಒತ್ತುವರಿ ಮಾಡಿರುವುದು ಸ್ಥಳೀಯರನ್ನು ಕೆರಳಿಸಿದೆ.

ಅಸಲಿಗೆ ಸಮಸ್ಯೆ ಏನು?: ಯಲಹಂಕದಲ್ಲಿ ಸುಮಾರು 50 ಪಾರ್ಕ್ ಗಳಿದೆ. ರಾಜೀವ್ ಗಾಂಧಿ, ಸುಭಾಶ್ ಚಂದ್ರ ಬೋಸ್, ಶಂಕರ್ ನಾಗ್ ಮುಂತಾದವರ ಹೆಸರಲ್ಲದೆ ಬಸವಣ್ಣನವರ ಹೆಸರಿನಲ್ಲಿ 4ನೇ ಹಂತದಲ್ಲಿ ಒಂದು ಪಾರ್ಕ್ ಇದೆ. 1989ರಿಂದ ಅದೇ ಹೆಸರಿನಲ್ಲಿ ಅನಧಿಕೃತವಾಗಿ ಕರೆಯಲ್ಪಡುತ್ತಿದೆ.

* ಈಶ್ವರ ಸೇವಾ ಸಮಿತಿ ಬಿಬಿಎಂಪಿ ನಿಮಯಗಳನ್ನು ಪಾಲಿಸಿಲ್ಲ. ಅಲ್ಲದೆ ಬಸವಣ್ಣನವರ ಪುತ್ಥಳಿ ಈಗಾಗಲೇ ಆಗಸ್ಟ್ 15, 2012ರಂದು ಸ್ಥಾಪಿಸಲಾಗಿದೆ.
* ಈಗ ಪಾರ್ಕಿಗೆ ಹೊಸದಾಗಿ ನಾಮಕರಣ ಹಾಗೂ ಪುತ್ಥಳಿ ಅನಾವರಣ ಮಾಡಿದರೆ ಸರ್ಕಾರದ ಆದೇಶದ ಉಲ್ಲಂಘನೆಯಾಗಲಿದೆ.
* ಬಸವಣ್ಣನವರ ಹೆಸರನ್ನು ಮುಂದಿಟ್ಟುಕೊಂಡು ಈಶ್ವರ ಸೇವಾ ಸಮಿತಿ ತನ್ನ ವಿದ್ಯಾಸಂಸ್ಥೆಗಾಗಿ ಜಾಗವನ್ನು ಆಕ್ರಮಿಸಲು ಹುನ್ನಾರ ಹೂಡಿರುವ ಶಂಕೆ ವ್ಯಕ್ತವಾಗಿದೆ.

ಹೀಗಾಗಿ ಪಾರ್ಕಿಗೆ ಬಸವಣ್ಣ ಅವರ ಹೆಸರನ್ನು ಇಟ್ಟಿರುವುದನ್ನು ಬದಲಿಸಿ ವಿಶ್ವೇಶ್ವರಯ್ಯ ಅವರ ಹೆಸರನ್ನು ಬಿಬಿಎಂಪಿ ಇಡಬೇಕು ಎಂದು ಒಂದು ವರ್ಗ ಒತ್ತಾಯಿಸಿದೆ.

English summary
The permanent residents around the park objected for Naming of the public park & installation of bust of Sri Basaveshwara In Ward no.4, in Yelahanka New Town ‘A’ sector. BBMP also nodded for citizens appeal. But, Naming the park already carried out by Veerashaiva samithi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X