ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ ಡಿಎಫ್ ಸಿ ಸಂಸ್ಥೆಗೆ ಭರ್ಜರಿ ನಿವ್ವಳ ಲಾಭ

By Mahesh
|
Google Oneindia Kannada News

HDFC Bank Q2 FY13 net profit surges 30%
ಮುಂಬೈ, ಅ.12: ಎಚ್ ಡಿಎಫ್ ಸಿ ಬ್ಯಾಂಕ್ ಸೆ.30,2012ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ ಶೇ 30ರಂತೆ 1,560 ಕೋಟಿ ನಿವ್ವಳ ಲಾಭ ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,199 ಕೋಟಿ ರು ಲಾಭ ಗಳಿಸಿತ್ತು.

ಸಂಸ್ಥೆಯ ನಿವ್ವಳ ಆದಾಯ ಶೇ 26.7ರಂತೆ 3,732 ಕೋಟಿ ರು ಗಳಿಸಿದೆ. ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಹೋಲಿಸಿದರೆ ನಿವ್ವಳ NPA 0.97 % ನಿಂದ 0.91% ಗೆ ಇಳಿದಿದೆ. QoQನಲ್ಲಿ Capital Adequacy ಅನುಪಾತ ಶೇ 17ರಷ್ಟಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಸಂಸ್ಥೆಯ ಆದಾಯ 7,929 ಕೋಟಿ ರು.ನಿಂದ 9,869 ಕೋಟಿ ರು.ಗೆ ಏರಿಕೆಯಾಗಿದೆ.

ಎಚ್ ಡಿಎಫ್ ಸಿ ಬ್ಯಾಂಕ್ ಮಾರುಕಟ್ಟೆಯ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ನೀಡಿ ಶೇ 30 ರಷ್ಟು ಏರಿಕೆ ಕಂಡಿರುವುದು ಷೇರುಗಳ ಏರಿಕೆಗೆ ಕಾರಣವಾಗಿದೆ. ಮಧ್ಯಾಹ್ನ 2.20 ರ ವೇಳೆಗೆ ಶೇ 1.03 ರಂತೆ 603 ನಂತೆ ಏರಿಕೆ ಕಂಡಿತ್ತು.

ವಿಸ್ತರಣೆ: ಮಾ 31ಕ್ಕೆ ಅನ್ವಯವಾಗುವಂತ ತನ್ನ ವಿಸ್ತರಣಾ ಜಾಲವನ್ನು ಹಿಗ್ಗಿಸಿಕೊಂಡಿರುವ ಎಚ್ ಡಿಎಫ್ ಸಿ 2,544 ಬ್ರ್ಯಾಂಚ್, 8,913 ಎಟಿಎಂಗಳನ್ನು 996 ನಗರಗಳಲ್ಲಿ ಹೊಂದಿದೆ.

ಜೂನ್ 2012ರಲ್ಲಿ ಎಚ್ ಡಿಎಫ್ ಸಿ ಸಂಸ್ಥೆ ಶೇ 25.1 ರಷ್ಟು ಏರಿಕೆಯಾಗಿ 1275.86 ಕೋಟಿ ನಿವ್ವಳ ಲಾಭ ಗಳಿಸಿತ್ತು. ಒಟ್ಟು ಆದಾಯದಲ್ಲಿ 7276.51 ಕೋಟಿ ರು ದಾಖಲಾಗಿತ್ತು

ಕಳೆದ ಜುಲೈನಲ್ಲಿ ಎಸ್ ಬಿಐ ಹಿಂದಿಕ್ಕಿದ ಎಚ್ ಡಿಎಫ್ ಸಿ ಭಾರತದ ಅತಿ ಮೌಲ್ಯಯುತ ಬ್ಯಾಂಕ್ ಆಗಿ ಹೊರಹೊಮ್ಮಿತ್ತು.

ಅದರೆ, ಸೆಪ್ಟೆಂಬರ್ ನಲ್ಲಿ ಸರ್ಕಾರಿ ಸ್ವಾಮ್ಯದ ಅತಿ ವಿಸ್ತೃತ ಜಾಲ ಹೊಂದಿರುವ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶದ ಅತಿ ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ಸಂಸ್ಥೆ ಎನಿಸಿತ್ತು.

ಎಸ್ ಬಿಐ ಮಾರುಕಟ್ಟೆ ಮೌಲ್ಯ(m-cap: what is m-cap?) 1.48 ಲಕ್ಷ ಕೋಟಿ ದಾಟಿದೆ. ಖಾಸಗಿ ವಲಯದ ಎಚ್ ಡಿಎಫ್ ಸಿ ಕೂಡಾ ಪೈಪೋಟಿ ನೀಡುತ್ತಿದ್ದು 1,47,444 ಕೋಟಿ ಮೌಲ್ಯ ದಾಖಲಿಸಿತ್ತು.

English summary
HDFC Bank reported a 30% rise in net profit at Rs 1,560 crore for the quarter ending September 30, 2012 against Rs 1,199 crore in the corresponding period of the previous year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X