ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜೀವ್ ಗಾಂಧಿ ಕುಟುಂಬದ ರಕ್ಷಣೆಗಾದ ಖರ್ಚು 1800 ಕೋಟಿ

|
Google Oneindia Kannada News

Government spent 1800 crore to SPG protection to Gandhi family members and A B Vajpayee
ನವದೆಹಲಿ, ಅ 11 : ರಾಜೀವ್ ಗಾಂಧಿ ಕುಟುಂಬದ ಮೂರು ಜನ, ಪ್ರಧಾನಿ ಮತ್ತು ಮಾಜಿ ಪ್ರಧಾನಿ ಹೀಗೆ ಐದು ವಿವಿಐಪಿಗಳ ರಕ್ಷಣೆಗೆ ಕೇಂದ್ರದ ಯುಪಿಎ ಸರಕಾರ ಇದುವರೆಗೆ ಖರ್ಚು ಮಾಡಿದ್ದ ಮೊತ್ತ 1800 ಕೋಟಿ ರೂಪಾಯಿಗೂ ಮೀರಿದೆ ಎನ್ನುವ ಭಯಾನಕ ಸತ್ಯವನ್ನು ಕೇಂದ್ರ ಗೃಹ ಇಲಾಖೆ ಪ್ರಕಟಿಸಿದೆ.

ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ, ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ರಕ್ಷಣಾ ಖರ್ಚುವೆಚ್ಚ ಬರೀ 2011 -12 ಆರ್ಥಿಕ ವರ್ಷದಲ್ಲಿ 386 ಕೋಟಿ ರೂಪಾಯಿ. 2004ರಿಂದ ಇದುವರೆಗೆ ಕೇಂದ್ರ ಸರಕಾರ ಇವರ ರಕ್ಷಣೆಗೆ 1800 ಕೋಟಿ ರೂಪಾಯಿಯನ್ನು ವ್ಯಯಿಸಿದೆ.

ಈ ಐವರಿಗೆ ಕೇಂದ್ರ ಸರಕಾರ ಎಸ್ಪಿಜಿ (ಸ್ಪೆಷಲ್ ಪ್ರೊಟೆಕ್ಶನ್ ಗ್ರೂಪ್) ಭದ್ರತೆ ನೀಡುತ್ತಿದೆ. ಕಳೆದ NDA ಸರಕಾರಕ್ಕೆ ಹೋಲಿಸಿದರೆ ಯುಪಿಎ ಸರಕಾರ ಇವರ ಭದ್ರತೆಗೆ ಖರ್ಚು ಮಾಡುತ್ತಿರುವ ವೆಚ್ಚ ನಾಲ್ಕು ಪಟ್ಟು ಹೆಚ್ಚು.

ಯುಪಿಎ ಸರಕಾರ ಅಧಿಕಾರಕ್ಕೆ ಬಂದ 2004 -05ರಲ್ಲಿ 97 ಕೋಟಿ ರೂಪಾಯಿ ಮಾತ್ರ ಎಸ್ಪಿಜಿ ರಕ್ಷಣೆಗೆ ಖರ್ಚು ಮಾಡಲಾಗಿತ್ತು. ಪ್ರಸಕ್ತ ಹಣಕಾಸಿನ ಸಾಲಿನಲ್ಲಿ ಖರ್ಚಿನ ವೆಚ್ಚ 350 ಕೋಟಿ ರೂಪಾಯಿ ದಾಟಬಹುದೆಂದು ಕೇಂದ್ರ ಗೃಹ ಇಲಾಖೆ ಅಂದಾಜಿಸಿದೆ.

1999 -2000 ದಲ್ಲಿ SPG ರಕ್ಷಣೆಗೆ ಖರ್ಚಾಗಿದ್ದು 75 ಕೋಟಿ ರೂಪಾಯಿ. ವಿ ಪಿ ಸಿಂಗ್ ಮತ್ತು ಪಿ ವಿ ನರಸಿಂಹ ರಾವ್ ತಮಗೆ ನೀಡಿದ್ದ ಎಸ್ಪಿಜಿ ರಕ್ಷಣೆ ಹಿಂದಕ್ಕೆ ಪಡೆಯುವಂತೆ ಗೃಹ ಖಾತೆಗೆ ಸೂಚಿಸಿದ್ದರು.

ಅದಾದ ನಂತರ ಮಾಜಿ ಪ್ರಧಾನಿಗಳಾದ ಐ ಕೆ ಗುಜ್ರಾಲ್, ಚಂದ್ರಶೇಖರ್ ಮತ್ತು ದೇವೇಗೌಡ ಅವರಿಗೆ ನೀಡುತ್ತಿದ್ದ ಈ ಭದ್ರತೆಯನ್ನು ಹಿಂದಕ್ಕೆ ಪಡೆಯಲಾಗಿತ್ತು.

ಪ್ಯಾರಾ ಮಿಲಿಟರಿ ಪಡೆಯಿಂದ ವಿಶೇಷ ತರಬೇತಿ ಪಡೆದವರನ್ನು SPG ಪಡೆಯಲ್ಲಿರುತ್ತಾರೆ. ಸುಮಾರು ಮೂರುವರೆ ಸಾವಿರ ಸಿಬ್ಬಂದಿ ಇದರಡಿಯಲ್ಲಿ ಬರುತ್ತಾರೆ ಹಾಗೂ ಅತ್ಯಾಧುನಿಕ ಸಾಧನಗಳನ್ನು ಈ ಪಡೆಗೆ ನೀಡಲಾಗುತ್ತದೆ.

English summary
Union government spent nearly 1800 crore for protecting three members of the Gandhi family, PM Manmohan Singh and former PM A B Vajpayee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X