ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಸರೆ: ಪ್ರವಾಸಿಗರ ವಾಹನಕ್ಕೆ ಪ್ರವೇಶ ತೆರಿಗೆ ಇಲ್ಲ

By Mahesh
|
Google Oneindia Kannada News

Mysore Dasara
ಮೈಸೂರು, ಅ.11: ನಾಡ ಹಬ್ಬ ದಸರೆಗೆ ಮೈಸೂರಿಗೆ ಆಗಮಿಸುವ ಹೊರ ರಾಜ್ಯಗಳ ವಾಹನಗಳಿಗೆ ಒಂದು ತಿಂಗಳ ಕಾಲ ಪ್ರವೇಶ ತೆರಿಗೆ ವಿನಾಯಿತಿಯನ್ನು ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಹೇಳಿದ್ದಾರೆ.

ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಮದಾಸ್, ಅ.15ರಿಂದ ನ.15 ರ ತನಕ ಮೈಸೂರಿಗೆ ಆಗಮಿಸುವ ಎಲ್ಲಾ ವಾಹಗಳಿಗೂ ಪ್ರವೇಶ ತೆರಿಗೆ ವಿನಾಯಿತಿಯನ್ನು ನೀಡುವ ಮೂಲಕ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲಾಗಿದೆ.

ಮೈಸೂರು ಟೂರಿಸಂ ಫೋರಂನ ಅಧ್ಯಕ್ಷ ಎಂ ರಾಜೇಂದ್ರ ಹಾಗೂ ಉಪಾಧ್ಯಕ್ಷ ಬಿಎಸ್ ಪ್ರಶಾಂತ್ ಅವರು ಇತ್ತೀಚೆಗೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರ ಮುಂದೆ ತೆರಿಗೆ ವಿನಾಯತಿ ಬೇಡಿಕೆ ಇಟ್ಟಿದ್ದರು.

ದಸರಾ ಹಬ್ಬಕ್ಕೆ ಪ್ರವಾಸಿಗರನ್ನು ಹೊರ ರಾಜ್ಯಗಳಿಂದ ಹೆಚ್ಚಾಗಿ ಆಕರ್ಷಿಸುವ ನಿಟ್ಟಿನಲ್ಲಿ ತೆರಿಗೆ ವಿನಾಯತಿಗೆ ಆನಂದ್ ಸಿಂಗ್ ಒಪ್ಪಿಗೆ ಸೂಚಿಸಿದ್ದಾರೆ.

ಕಾವೇರಿ ನದಿ ನೀರಿಗಾಗಿ ಪ್ರತಿಭಟನೆಗಳು ನಡೆಯುತ್ತಿದ್ದರಿಂದ ದಸರಾ ಮೇಲೆ ಇದು ದುಷ್ಪರಿಣಾಮ ಬೀರಬಹುದೆಂಬ ಆತಂಕ ಇತ್ತು. ಆದರೆ ಸರ್ಕಾರ ನೀರು ಬಿಡದಿರುವ ನಿರ್ಧಾರ ತೆಗೆದುಕೊಂಡು ಅದರಂತೆ ನಡೆದುಕೊಂಡಿರುವುದರಿಂದ ಸಹಜ ಸ್ಥಿತಿಯತ್ತ
ಮೈಸೂರು ಮರಳುತ್ತಿದೆ.

ದಸರಾ ಕಾರ್ಯಕ್ರಮದಲ್ಲಿ ಯಾವುದೇ ಲೋಪ ದೋಷಗಳು ಆಗಿಲ್ಲ. ಪರಿಸ್ಥಿತಿ ಶಾಂತಿಯಾಗುತ್ತಿದೆ. ಇದರಿಂದಾಗಿ ಪ್ರವಾಸಿಗರೂ ನಿರಾಳವಾಗುತ್ತಿದ್ದಾರೆ. ಕಾವೇರಿ ಗಲಾಟೆ ದಸರಾದಮೇಲೆ ಯಾವುದೇ ಪರಿಣಾಮ ಬೀರದಂತೆವಿಜೃಂಭಣೆಯಿಂದ ದಸರಾ ಆಚರಿಸಲಾಗುವುದು ಎಂದರು.

ದಸರಾ ಗೋಲ್ಡ್ ಕಾರ್ಡ್: ದಸರಾ ಗೋಲ್ಡ್ ಕಾರ್ಡ್ ಈ ಬಾರಿ 1500 ರೂಪಾಯಿ ಹೆಚ್ಚಳವಾಗಿದೆ. ಕಳೆದ ಬಾರಿ ಈ ಕಾರ್ಡ್‌ಗೆ 6 ಸಾವಿರ ರೂ. ನಿಗದಿಪಡಿಸಲಾಗಿತ್ತು. ಆದರೆ ಈ ಬಾರಿ 7500 ರೂ. ನಿಗದಿಪಡಿಸಲಾಗಿದೆ.

ಒಂದು ಸಾವಿರ ಕಾರ್ಡ್ ಮುದ್ರಿಸಲಾಗಿದ್ದು, ಇಬ್ಬರಿಗೆ ಇದರ ಸೌಲಭ್ಯ, ಸವಲತ್ತುಗಳನ್ನು ಕಲ್ಪಿಸಲಾಗಿದೆ. ಇದಲ್ಲದೆ ಸಾವಿರ ರೂ. ಮೌಲ್ಯದ ಸಾವಿರ ಕಾರ್ಡ್ಗಳನ್ನು ಮುದ್ರಿಸಲಾಗಿದೆ. ಕಾರ್ಡ್‌ವೊಂದಕ್ಕೆಇಬ್ಬರಿಗೆ ಸೌಲಭ್ಯ ಕಲ್ಪಿಸಲಾಗುತ್ತದೆ. ಈಗಾಗಲೇ ಆನ್‌ಲೈನ್‌ನಲ್ಲಿ ಕಾರ್ಡ್‌ಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ.

ಜಂಬೂ ಸವಾರಿಯಲ್ಲಿ ಗೋಲ್ಡ್ ಕಾರ್ಡ್‌ದಾರರ ವೀಕ್ಷಣೆಗೆಂದು ಶೆಲ್ಟರ್‌ಗಳನ್ನು ಈ ಬಾರಿ ವಿಐಪಿಗ್ಯಾಲರಿಯಲ್ಲಿ ಹಾಕಲಾಗುತ್ತದೆ. ಇದರಿಂದಾಗಿ ಕಾರ್ಡ್‌ದಾರರಿಗೆ ದಸರಾ ಮೆರವಣಿಗೆ ನೋಡಲು ಅನುಕೂಲವಾಗಿದೆ ಸಚಿವ ರಾಮದಾಸ್ ಎಂದು ಹೇಳಿದರು.

ನಾಡಹಬ್ಬ ದಸರಾ ಉತ್ಸವವನ್ನು ಅತ್ಯಂತ ಸುರಕ್ಷಾ ಹಾಗೂ ಸುಂದರವಾಗಿ ಆಚರಿಸಲು ದಿನಗಣನೆ ಆರಂಭಗೊಂಡಿದೆ. ಅ.16ರಂದು ಬೆಳಗ್ಗೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ 10:42 ರಿಂದ 11:12ರೊಳಗಾಗಿ ನಾಡಿನ ಖ್ಯಾತ ಅಧ್ಯಾತ್ಮ ಚಿಂತಕ ಸಿದ್ದೇಶ್ವರ ಸ್ವಾಮೀಜಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಅ.24ರ ಅಪರಾಹ್ನ 1:47ಕ್ಕೆ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ದಸರಾ ಮೆರವಣಿಗೆ ಹಾಗೂ ಜಂಬೂ ಸವಾರಿಗೆ ಚಾಲನೆ ನೀಡಲಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ರಾಮದಾಸ್ ವಿವರಿಸಿದರು.

English summary
Mysore Dasara : Mysore Tourism Forum launched by M Rajendra and BS Prashant's demand fulfilled. Tourism Minister Anand Singh said okay to tax exemption. No entry tax on tourist vehicles for Dasara:Ramdas
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X