ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಲಿಟರಿ ಅಲ್ಲ ಸುಪ್ರೀಂ ಆದೇಶಕ್ಕೂ ಜಗ್ಗಲ್ಲ : ಮಾದೇಗೌಡ

By Mahesh
|
Google Oneindia Kannada News

KRS Dam
ಮಂಡ್ಯ, ಅ.11: ತಮಿಳುನಾಡಿಗೆ ಮತೊಮ್ಮೆ ಕರ್ನಾಟಕದಿಂದ ಕಾವೇರಿ ನೀರು ಹರಿಸಬೇಕು ಎಂದು ಕಾವೇರಿ ಮೇಲ್ವಿಚರಣಾ ಸಮಿತಿ(CMC) ನೀಡಿರುವ ಸೂಚನೆಯನ್ನು ಕಾವೇರಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಜಿ.ಮಾದೇಗೌಡ ಅವರು ತೀವ್ರವಾಗಿ ಖಂಡಿಸಿದ್ದಾರೆ.

ನೀರು ಬಿಡುವಂತೆ ಸೂಚಿಸಲು ಸಿಎಂಸಿಗೆ ಯಾವುದೇ ಅಧಿಕಾರವಿಲ್ಲ. ಮಿಲಿಟರಿ ಪಡೆ ಬರಲಿ, ಪ್ರಧಾನಿ ಆದೇಶವಿರಲಿ, ಸುಪ್ರೀಂ ಆದೇಶ ಆಗಲಿ ನಾವು ಜಗ್ಗುವುದಿಲ್ಲ. ಒಂದು ಹನಿ ನೀರು ಹೊರ ಹೋಗುವುದಿಲ್ಲ ಎಂದು ಮಾದೇಗೌಡರು ಗುಡುಗಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡಲು ಕರ್ನಾಟಕ ಸಿದ್ಧವಿಲ್ಲ. ಪ್ರಧಾನ ಮಂತ್ರಿ ಹಾಗೂ ಸುಪ್ರೀಂಕೋರ್ಟ್ ನೀರು ಬಿಡುವಂತೆ ಸೂಚಿಸಿದರೂ ನೀಡು ಬಿಡಲು ಸಾಧ್ಯವಿಲ್ಲ. ಇಂದು ರಾತ್ರಿಯಿಂದಲೇ ಕೃಷ್ಣರಾಜಸಾಗರ ಅಣೆಕಟ್ಟಿನ ಬಳಿ ರೈತರನ್ನು ಕಾವಲು ಹಾಕಲಾಗುವುದು. ಕೇಂದ್ರ ಸರ್ಕಾರ ಮಿಲಿಟರಿ ಪಡೆ ಕಳಿಸಿದರು ನಾವು ಬಗ್ಗುವುದಿಲ್ಲ ಎಂದು ಮಾದೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ಮೇಲುಸ್ತುವಾರಿ ಸಮಿತಿ ಗುರುವಾರ(ಅ.11) ಮಧ್ಯಾಹ್ನ ಕರ್ನಾಟಕಕ್ಕೆ ಲಿಖಿತ ಆದೇಶ ನೀಡಿದೆ.

ಅ.16 ರಿಂದ ಅ.31ರವರೆಗೂ ನೀರು ಬಿಡುವಂತೆ ತಮಿಳುನಾಡಿಗೆ ನೀರು ಹರಿಸಲು ಸೂಚನೆ ನೀಡಲಾಗಿದೆ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಎಸ್ ವಿ ರಂಗನಾಥ್ ಹೇಳಿದ್ದಾರೆ.
15 ಟಿಎಂಸಿ ಅಥವಾ ಪ್ರತಿದಿನ 1 ಟಿಎಂಸಿಯಂತೆ ನೀರು ಬಿಡಬೇಕು ಎಂದು ತಮಿಳುನಾಡು ಮನವಿ ಸಲ್ಲಿಸಿತ್ತು. ಅದರೆ, 9 ಟಿಎಂಸಿ (8.745) ನೀರು ಬಿಡುವಂತೆ ಕಾವೇರಿ ಮೇಲುಸ್ತುವಾರಿ ಸಮಿತಿ ಆದೇಶದಲ್ಲಿ ಹೇಳಲಾಗಿದೆ.

ಕರ್ನಾಟಕದಿಂದ ಈವರೆಗೂ 13, 000 ಕ್ಯೂಸೆಕ್ಸ್ ನೀರು ಹರಿಸಲಾಗಿದೆ. ಕಾವೇರಿ ಕೊಳ್ಳದಲ್ಲಿ ಮಂಗಳವಾರ ಹಾಗೂ ಬುಧವಾರ ಒಳ್ಳೆ ಮಳೆಯಾದ ಕಾರಣ ಗಡಿಭಾಗದ ಬಿಳಿಗುಂಡ್ಲು ಜಲಾಗಾರದಿಂದ ಹೊರಹರಿವು ಹೆಚ್ಚಾಗಿದೆ.

ರಾಜ್ಯದ ಬಳಿ 14 ಟಿಎಂಸಿ ನೀರು ಮಾತ್ರ ಇದ್ದು ಅದರಲ್ಲಿ 8.75 ಟಿಎಂಸಿ ನೀರು ತಮಿಳುನಾಡಿಗೆ ಬಿಟ್ಟರೆ ಮುಂದೆ ಗತಿ ಏನು. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು 30 ಟಿಎಂಸಿ ಬೇಕು ಎಂದು ಅಂಕಿ ಅಂಶ ತೋರಿಸುತ್ತದೆ. ಅದರೂ, ಕರ್ನಾಟಕಕ್ಕೆ ಮತ್ತೆ ಮತ್ತೆ ಅನ್ಯಾಯವಾಗುತ್ತಿದೆ ಎಂದು ಮಂಡ್ಯ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಬಗ್ಗೆ ಕರ್ನಾಟಕ ಸಲ್ಲಿರುವ ಅಕ್ಷೇಪ ಅರ್ಜಿ ಸುಪ್ರೀಂಕೋರ್ಟಿನಲ್ಲಿ ವಿಚಾರಣೆಗೆ ಬರುವ ಮುನ್ನವೇ ರಾಜ್ಯಕ್ಕೆ ಹಿನ್ನೆಡೆಯಾಗಿದೆ. ಕಾವೇರಿ ಕೊಳ್ಳದ ಸ್ಥಿತಿಗತಿ ಬಗ್ಗೆ ಅಧ್ಯಯನ ನಡೆಸಿದ ಅಧ್ಯಯನ ತಂಡ ಕೂಡಾ ಶುಕ್ರವಾರ (ಅ.11) ತನ್ನ ವರದಿಯನ್ನು ಕಾವೇರಿ ನದಿ ಪ್ರಾಧಿಕಾರಕ್ಕೆ ಸಲ್ಲಿಸುವ ಸಾಧ್ಯತೆಯಿದೆ.

English summary
Cauvery water Dispute: G Madegowda condemned The Cauvery Monitoring Committee (CMC) instruction to Karnataka to release 9 TMC to Tamilnadu from Oct 16 to Oct 31. We farmers won't release a drop of water from KRS dam said Madegowda in Mandya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X