• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಛೇ! ಪಾಪು ಇಲ್ಲದೆ ಸುವರ್ಣಸೌಧ ಉದ್ಘಾಟನೆ

By Mahesh
|
ಬೆಳಗಾವಿ, ಅ.11: ಉತ್ತರ ಕರ್ನಾಟಕ ಮಂದಿಯ ಬಹುದಿನದ ಕನಸು ನನಸಾಗಿದೆ. ಕುಂದಾನಗರಿಯಲ್ಲಿ ಸುವರ್ಣ ವಿಧಾನ ಸೌಧವನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಗುರುವಾರ (ಅ.11) ಲೋಕಾರ್ಪಣೆ ಮಾಡಿದ್ದಾರೆ. ಅದರೆ, ಗಡಿನಾಡಿಗಾಗಿ ಬಡಿದಾಡಿದ ಹಿರಿಜೀವ ಪಾಟೀಲ್ ಪುಟ್ಟಪ್ಪ ಅವರಿಗೆ ಆಹ್ವಾನ ನೀಡದೆ ಕರ್ನಾಟಕ ಸರ್ಕಾರ ಬಹುದೊಡ್ಡ ಅವಮಾನ ಮಾಡಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ವಿಷಾದ ವ್ಯಕ್ತಪಡಿಸಿದ್ದಾರೆ.

ಉತ್ತರ ಕರ್ನಾಟಕ ಭಾಗದಲ್ಲಿ ಸುವರ್ಣ ಸೌಧ ಉದ್ಘಾಟನೆಗೊಂಡಿರುವುದು ಅತ್ಯಂತ ಸಂಭ್ರಮದ ಸಂಗತಿ. ಈ ಮೂಲಕ ಗಡಿಭಾಗದಲ್ಲಿ ಕನ್ನಡ ಕಹಳೆ ನಿರಂತರವಾಗಿ ಮೊಳಗುತ್ತಿರಲಿ. ಗಡಿಭಾಗದ ಅಭಿವೃದ್ಧಿಗೆ ಇದು ನಾಂದಿಯಾಗಲಿ.

ಅದರೆ, ಗಡಿನಾಡಿಗಾಗಿ ಸದಾಕಾಲ ಹೋರಾಟ ನಡೆಸಿ, ಶಕ್ತಿಸೌಧ ಬೇಕು ಎಂದು ಕೂಗೆತ್ತಿದ ಕನ್ನಡ ಪರ ಸಂಘಟನೆಗಳು, ಸಾಹಿತಿಗಳು, ಹೋರಾಟಗಾರರಿಗೆ ಸರ್ಕಾರ ಮನ್ನಣೆ ನೀಡದಿರುವುದು ದೊಡ್ಡ ದುರಂತ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

ಬೆಳಗಾವಿಯಲ್ಲಿ ಕರ್ನಾಟಕ ವಿಧಾನಸಭಾ ಅಧಿವೇಶನ ನಡೆಸಬೇಕು, ಸರ್ಕಾರ ಗಡಿಭಾಗಕ್ಕೆ ಸರಿಯಾದ ಸವಲತ್ತುಗಳನ್ನು ನೀಡಬೇಕು ಎಂದು ಕಳೆದ 50 ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬರಲಾಗಿದೆ.

ಈ ಹೋರಾಟದ ಅಗ್ರಗಣ್ಯ ನಾಯಕ ನಾಡೋಜ ಪಾಟೀಲ ಪುಟ್ಟಪ್ಪ ಅವರನ್ನು ಸುವರ್ಣ ವಿಧಾನಸೌಧ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸುವ ಕನಿಷ್ಠ ಸೌಜನ್ಯ ತೋರದಿರುವ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಎಂದು ವಾಟಾಳ್ ಹೇಳಿದರು.

ವಿಧಾನಸೌಧ ಎಂದರೆ ಜನಪ್ರತಿನಿಧಿಗಳು ಜನರ ಸಮಸ್ಯೆ, ನಾಡಿನ ಏಳಿಗೆ ಬಗ್ಗೆ ಚಿಂತನೆ, ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುವ ತಾಣವಾಗಿದ್ದು, ಪಕ್ಷದ ಕಚೇರಿಯಲ್ಲ ಎಂಬುದು ನೆನಪಿರಲಿ.

ಕನ್ನಡಿಗರ ಹಣೆಬರಹವೇ ಇಷ್ಟು. ಹೋರಾಟ ಮಾಡುವವರು ಒಬ್ಬರು ಸಂಭ್ರಮ ಪಟ್ಟು ಹಾರ ತುರಾಯಿ ಹಾಕಿಕೊಂಡು ಮೆರೆಯುವವರು ಮತ್ತೊಬ್ಬರು.

ಸುವರ್ಣ ಸೌಧ ಉದ್ಘಾಟನೆ ಐತಿಹಾಸಿಕ ಕಾರ್ಯಕ್ರಮ ಎಂಬುದು ಶೆಟ್ಟರ್ ಸರ್ಕಾರಕ್ಕೆ ಮರೆತು ಹೋಯಿತೆ? ಕನ್ನಡ ನಾಡು ನುಡಿಗಾಗಿ ಶ್ರಮಿಸಿರುವ ಸಾಹಿತಿಗಳು, ಹೋರಾಟಗಾರರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಕನ್ನಡಿಗರ ಶಕ್ತಿ ಪ್ರದರ್ಶನ ಮಾಡಬೇಕಿತ್ತು.

ವೇದಿಕೆ ಆಹ್ವಾನ ಸಿಗದಿದ್ದರೂ ಕನಿಷ್ಠ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಸುವರ್ಣ ಸಂಭ್ರಮವನ್ನು ಕಣ್ಣಾರೆ ನೋಡಿ ಆನಂದ ಪಡುತ್ತಿದ್ದೆವು. ಸರ್ಕಾರ ನಿರ್ಲಕ್ಷ್ಯ ಧೋರಣೆ ಬೇಸರ ತರಿಸಿದೆ.

ಈ ನಾಡಿನಲ್ಲಿ ಹೋರಾಟಗಾರರಿಗೆ ಸರ್ಕಾರ ಯಾವುದೇ ಮೌಲ್ಯ, ಮನ್ನಣೆ ನೀಡುವುದಿಲ್ಲ ಎಂದೆನಿಸುತ್ತಿದೆ ಎಂದು ವಾಟಾಳ್ ನೊಂದು ನುಡಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kannada Chalavali Party president Vatal Nagaraj condemned BJP government attitude towards the Kannada activists who fought for Suvarna Soudha. Jagadish Shettar government allegedly snubs by not inviting Patil Puttappa veteran fighter in North Karnataka to Suvarna Soudha inauguration.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more