• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತಕ್ಕೂ ಬಂತು ಗೂಗಲ್ ಉಚಿತ ಎಸ್ಎಂಎಸ್

By Mahesh
|

ಬೆಂಗಳೂರು, ಅ.11: ಗೂಗಲ್ ಸಂಸ್ಥೆ ತನ್ನ ಉಚಿತ ಎಸ್ ಎಂಎಸ್ ಚಾಟ್ ಸೇವೆಯನ್ನು ಭಾರತಕ್ಕೂ ವಿಸ್ತರಿಸಿದೆ. ಈ ಸೌಲಭ್ಯದ ಮೂಲಕ ಗೂಗಲ್ ಚಾಟ್ ಬಳಸಿ ಎಸ್ ಎಂಎಸ್ ಕಳಿಸಬಹುದಾಗಿದೆ. ಭಾರತ ಸೇರಿದಂತೆ ಏಷ್ಯಾ, ಆಫ್ರಿಕಾ ಹಾಗೂ ಉತ್ತರ ಅಮೇರಿಕದ 51 ದೇಶಗಳಿಗೆ ಈ ಸೌಲಭ್ಯ ಸಿಗಲಿದೆ.

ಗೂಗಲ್ ಎಸ್ ಎಂಎಸ್ ಇರುವಾಗ ಇದು ಯಾವುದು ಹೊಸ ಎಸ್ ಎಂಎಸ್ ವ್ಯವಸ್ಥೆ ಎಂದು ಗೂಗಲ್ ಬಳಕೆದಾರರು ತಲೆ ಕೆಡಿಸಿಕೊಳ್ಳಬೇಕಿಲ್ಲ.

ಗೂಗಲ್ ಚಾಟ್ ಮಾಡುವ ಎಲ್ಲರಿಗೂ ಈ ಸೌಲಭ್ಯ ಲಭ್ಯವಾಗಲಿದ್ದು, ಚಾಟ್ ಪ್ಯಾನೆಲ್ ನಲ್ಲಿ ಒಂದು pop up ಕಾಣಿಸಿಕೊಳ್ಳುತ್ತದೆ. next ಬಟನ್ ಒತ್ತಿದರೆ ನಿಮ್ಮ ಗೂಗಲ್ ಚಾಟ್ ಜೊತೆಗೆ ಉಚಿತ ಎಸ್ಎಂಎಸ್ ಸೇವೆ ಕೂಡಾ ಜೋಡಣೆಗೊಳ್ಳಲಿದೆ.

ನಿಮ್ಮ ಸ್ನೇಹಿತರ ಮೊಬೈಲ್ ನಂಬರ್ ಹಾಕಿ ಎಸ್ ಎಂಎಸ್ ಕಳಿಸಬಹುದು. ನೀವು ಕಳಿಸುವ ಸಂದೇಶಗಳು ಜಿಮೇಲ್ history ಯಲ್ಲೇ ಶೇಖರಿಸಲಾಗುತ್ತದೆ. ಗೂಗಲ್ ಚಾಟ್ ಸಂದೇಶವನ್ನು ಶೇಖರಿಸುವಂತೆ ಗೂಗಲ್ ಚಾಟ್ ಎಸ್ ಎಂಎಸ್ ಕೂಡಾ Save ಆಗಿರುತ್ತದೆ.

ಭಾರತದ ಪ್ರಮುಖ 8 ಮೊಬೈಲ್ ಸೇವಾ ಸಂಸ್ಥೆಗಳು ಜಿಮೇಲ್ ಎಸ್ಎಂಎಸ್ ಸೇವೆ ಜೊತೆ ಕೈಜೋಡಿಸಿದೆ.

ಏರ್ ಸೆಲ್, ಐಡಿಯಾ, ಲೂಪ್ ಮೊಬೈಲ್, ಎಂಟಿಎಸ್, ರಿಲಯನ್ಸ್, ಟಾಟಾ ಡೊಕೊಮೊ, ಟಾಟಾ ಇಂಡಿಕಾಮ್ ಹಾಗೂ ವೋಡಾಫೋನ್.

ದೆಹಲಿ, ಮುಂಬೈ, ಕೋಲ್ಕತ್ತಾ, ಗುಜರಾತ್, ಆಂಧ್ರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಅಂಡಮಾನ್ ಹಾಗೂ ನಿಕೋಬಾರ್, ಅಸ್ಸಾಂ, ಈಶಾನ್ಯ ರಾಜ್ಯಗಳಲ್ಲಿ ಸದ್ಯಕ್ಕೆ ಈ ಸೌಲಭ್ಯ ಲಭ್ಯವಿರುತ್ತದೆ. ಕೆಲವೇ ದಿನಗಳಲ್ಲಿ ಭಾರತದೆಲ್ಲೆಡೆ ಈ ಸೌಲಭ್ಯ ವಿಸ್ತರಣೆಗೊಳ್ಳಲಿದೆ ಎಂದು ಗೂಗಲ್ ಸಂಸ್ಥೆ ಹೇಳಿದೆ.

ಸ್ಮಾರ್ಟ್ ಫೋನ್ ನಲ್ಲಿ ಇಲ್ಲ: ಆದರೆ, ಈ ಸೌಲಭ್ಯ ಇನ್ನೂ ಸ್ಮಾರ್ಟ್ ಫೋನ್ ಗಳಲ್ಲಿ ಲಭ್ಯವಿಲ್ಲ. ಜಿಟಾಕ್ App ಇರುವ ಕಂಪ್ಯೂಟರ್ ಹಾಗೂ ಸ್ಮಾರ್ಟ್ ಫೋನ್ ಗಳಲ್ಲಿ ಸದ್ಯಕ್ಕೆ ಈ ಸೌಲಭ್ಯ ಲಭ್ಯವಿರುವುದಿಲ್ಲ, ಡೆಸ್ಕ್ ಟಾಪ್ PCಗಳಲ್ಲಿ ಜಿಮೇಲ್ ಮೂಲಕ ಈ ಸೌಲಭ್ಯ ಸುಲಭವಾಗಿ ಬಳಕೆ ಮಾಡಬಹುದಾಗಿದೆ.

ಎಷ್ಟು SMS ಕಳಿಸಬಹುದು: ಆರಂಭಿಕವಾಗಿ ಗ್ರಾಹಕರು 50 ಎಸ್ ಎಂಎಸ್ ಗಳಿಸಬಹುದಾಗಿದ್ದು, ಪ್ರತಿ ಎಸ್ ಎಂಎಸ್ ಗೂ ಕ್ರೆಡಿಟ್ ಮಿತಿ ಕಡಿಮೆಯಾಗುತ್ತಾ ಹೋಗುತ್ತದೆನಿಮ್ಮ ಕ್ರೆಡಿಟ್ ಖಾಲಿಯಾದ ಮೇಲೆ ಮರುದಿನ ಕ್ರೆಡಿಟ್ ಭರ್ತಿಯಾಗಲಿದೆ. ಜೊತೆಗೆ ಹೆಚ್ಚಿನ ಕ್ರೆಡಿಟ್ ಆನ್ನು ಖರೀದಿಸಬಹುದು. ನಿಮಗೆ ಬೇಕಾದ contact ಗೆ ಮಾತ್ರ ಎಸ್ ಎಂಎಸ್ ಕಳಿಸಬಹುದು ಅಥವಾ Block ಮಾಡಬಹುದು.

START or 'STOP' to +918082801060 ಕಳಿಸುವ ಮೂಲಕ ಸೌಲಭ್ಯ ಹೊಂದಬಹುದಾಗಿದೆ.

English summary
Google announced free SMS chat service to India users as well. This feature which allows users to send an SMS to their friends’ phones via GChat is now available for India and 51 other countries in Asia, Africa and North America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X