ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಕಿಂಗ್

By Mahesh
|
Google Oneindia Kannada News

Mukhesh Ambani
ಬೆಂಗಳೂರು, ಅ.11: ಭಾರತ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಎಲ್ ಎನ್ ಮಿತ್ತಲ್,ಅಜೀಂ ಪ್ರೇಂಜಿ ಮುಂತಾದವರನ್ನು ಹಿಂದಿಕ್ಕಿ ಮುಖೇಶ್ ಅಂಬಾನಿ ಅಗ್ರಸ್ಥಾನಕ್ಕೇರಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ನ ಅಧ್ಯಕ್ಷ ಮುಖೇಶ್ ಅಂಬಾನಿ ಒಟ್ಟು 10,107 ಕೋಟಿ ಸ್ವತ್ತು ಹೊಂದಿದ್ದಾರೆ ಎಂದು ಚೀನಾ ಮೂಲದ ಸಂಸ್ಥೆ ಹುರನ್ ವರದಿ ಮಾಡಿದೆ.

ಎರಡನೆ ಸ್ಥಾನದಲ್ಲಿ ಉಕ್ಕು ಉದ್ಯಮದ ದೊರೆ ಲಕ್ಷ್ಮಿನಾರಾಯಣ ಮಿತ್ತಲ್ 8,973 ಕೋಟಿ ರು ಹೊಂದಿದ್ದಾರೆ. ಮೂರನೇ ಸ್ಥಾನದಲ್ಲಿ ವಿಪ್ರೋ ಸಂಸ್ಥೆ ಒಡೆಯ ಅಜೀಂ ಪ್ರೇಮ್ ಜಿ (6,530 ಕೋಟಿ ರು) ಇದ್ದಾರೆ.

ದೇಶದ 100 ಮಂದಿ ಅತಿ ಶ್ರೀಮಂತರ ಮುಂಬೈ ನಗರ ಹೊಂದಿದ್ದರೆ, ಬೆಂಗಳೂರಿನಲ್ಲಿ 15 ಮಂದಿ ಅತಿ ಹೆಚ್ಚು ಗಳಿಕೆ ಹೊಂದಿರುವ ಶ್ರೀಮಂತರಿದ್ದಾರೆ.

ಸಿರಿವಂತ ಮಹಿಳೆಯರ ಪೈಕಿ ಬಯೋಕಾನ್ ಸಂಸ್ಥೆಯ ಒಡತಿ ಕಿರಣ್ ಮಜುಂದಾರ್ ಶಾ ಅವರು ಅಗ್ರಸ್ಥಾನ ಕಾಯ್ದುಕೊಂಡಿದ್ದು 3,191 ಕೋಟಿ ರು ಆಸ್ತಿ ಹೊಂದಿದ್ದಾರೆ.

ಉಳಿದಂತೆ 2,973 ಕೋಟಿ ರು ಆಸ್ತಿಯೊಂದಿಗೆ ಜಿಂದಾಲ್ ಸಂಸ್ಥೆ ಗೌರವಾಧ್ಯಕ್ಷೆ ಸಾವಿತ್ರಿ ಜಿಂದಾಲ್ ಅವರು ಅಗ್ರಸ್ಥಾನದಲ್ಲಿದ್ದಾರೆ.

ಟಾಪ್ 10 ಅತಿ ಹೆಚ್ಚು ಗಳಿಕೆ ಹೊಂದಿರುವ ಶ್ರೀಮಂತರ ಪಟ್ಟಿ: [ಅಂಕಿ ಅಂಶ ಚೀನಾದ ಹುರನ್ ಸಂಸ್ಥೆ ದಾಖಲೆಯಂತೆ]

1. ರಿಲಯನ್ಸ್ ಸಂಸ್ಥೆಯ ಮುಖೇಶ್ ಅಂಬಾನಿ (19.3 ಬಿಲಿಯನ್ ಡಾಲರ್)
2. ಆರ್ಸೆಲರ್ ಮಿತ್ತಲ್ ಸಂಸ್ಥೆಯ ಲಕ್ಷ್ಮಿ ಮಿತ್ತಲ್ (16.9 ಬಿಲಿಯನ್ ಡಾಲರ್)
3. ವಿಪ್ರೋ ಸಂಸ್ಥೆ, ಅಜೀಂ ಪ್ರೇಮ್ ಜಿ (12.3 ಬಿಲಿಯನ್ ಡಾಲರ್)
4. ದಿಲೀಪ್ ಸಾಂಘ್ವಿ, ಸನ್ ಫಾರ್ಮಾಸ್ಯೂಟಿಕಲ್ಸ್(8.5 ಬಿಲಿಯನ್ ಡಾಲರ್)
5. ಪಲ್ಲೋನ್ ಜಿ ಮಿಸ್ತ್ರಿ ಪಲ್ಲೋಜಿ ಗ್ರೂಪ್ (7.9 ಬಿಲಿಯನ್ ಡಾಲರ್)
6. ಶಶಿ ರುಯ ಮತ್ತು ರವಿ ರುಯ, ಎಸ್ಸಾರ್ ಎನರ್ಜಿ (7.2 ಬಿಲಿಯನ್ ಡಾಲರ್)
7. ಆದಿ ಗೋದ್ರೇಜ್, ಗೋದ್ರೇಜ್ ಗ್ರೂಪ್ (6.9 ಬಿಲಿಯನ್ ಡಾಲರ್)
8. ಕುಶಾಲ್ ಪಾಲ್ ಸಿಂಗ್, ಡಿಎಲ್ ಎಫ್ (6.3 ಬಿಲಿಯನ್ ಡಾಲರ್)
9. ಕುಮಾರ್ ಮಂಗಳಂ ಬಿರ್ಲಾ, ಬಿರ್ಲಾ ಗ್ರೂಪ್ (5.8 ಬಿಲಿಯನ್ ಡಾಲರ್)
10. ಸುನಿಲ್ ಮಿತ್ತಲ್, ಭಾರ್ತಿ ಏರ್ ಟೆಲ್ (5.7 ಬಿಲಿಯನ್ ಡಾಲರ್)

English summary
A China-based research firm Hurun has conducted a survey to show who is the richest person in India. Reliance Industries Chairman Mukesh Ambani topped the list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X