ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿ ಸುವರ್ಣ ವಿಧಾನಸೌಧದ ಸುತ್ತ ಸುತ್ತಾಟ

By Mahesh
|
Google Oneindia Kannada News

ಬೆಳಗಾವಿ, ಅ.10: ಕುಂದಾನಗರಿ ಬೆಳಗಾವಿಯ ಅಭಿವೃದ್ಧಿಗೆ ಕರ್ನಾಟಕ ಸರ್ಕಾರ ಮಾರಕವಾಗಿದೆ ಎಂದು ಎಂಇಎಸ್ ಕೂಗು ಹಾಕುವ ಹೊತ್ತಿಗೆ ಬಿಜೆಪಿ ಸರ್ಕಾರ 'ಸುವರ್ಣ ವಿಧಾನಸೌಧ'ವನ್ನು ನಿರ್ಮಿಸಿ ಮೇಲಕ್ಕೆತ್ತಿದೆ. ಈ ಸುಂದರ ಸೌಧ ನಿರ್ಮಾಣವಾಗುವಷ್ಟರಲ್ಲಿ ಮೂವರು ಮುಖ್ಯಮಂತ್ರಿಗಳು ಬಂದು ಹೋಗಿದ್ದಾರೆ.

ಉತ್ತರ ಕರ್ನಾಟಕದ ಜನತೆಯ ಆಶಾಕಿರಣವಾಗಿರುವ ಸುವರ್ಣ ವಿಧಾನಸೌಧವನ್ನು ದೇಶದ ಪ್ರಥಮ ಪ್ರಜೆ ಪ್ರಣಬ್ ಮುಖರ್ಜಿ ಅವರು ಅಕ್ಟೋಬರ್ 11 ಗುರುವಾರ ಮಧ್ಯಾಹ್ನ 12-30 ಗಂಟೆಗೆ ಲೋಕಾರ್ಪಣೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಸುವರ್ಣ ಸೌಧದ ಸುತ್ತ ಒಂದು ಕಣ್ಣೋಟ ಇಲ್ಲಿದೆ

ಸುಮಾರು 391.00 ಕೋಟಿ ವೆಚ್ಚದ ಸುವರ್ಣ ಸೌಧ ನಿರ್ಮಾಣ ಕಾಮಗಾರಿಯನ್ನು ಮೆ: ಬಿ.ಜಿ.ಶಿರ್ಕೆ ಕನ್ಸ್ಟ್ರಕ್ಸನ್ ಟೆಕ್ನಾಲಜಿ ಪ್ರೈ.ಲಿ. ಪುಣೆ ಸಂಸ್ಥೆ ಅಚ್ಚುಕಟ್ಟಾಗಿ ಪೂರೈಸಿದೆ.ಆದರೆ, ಅಂತಿಮ ಮೊತ್ತ 500 ಕೋಟಿ ರು ದಾಟುವ ನಿರೀಕ್ಷೆಯಿದೆ.

ಈ ಸುವರ್ಣ ಸೌಧದಲ್ಲಿ ಸಭಾಧ್ಯಕ್ಷರು, ಉಪ ಸಭಾಧ್ಯಕ್ಷರು ಹಾಗೂ ಸಭಾಪತಿಗಳು ಹಾಗೂ ಉಪಸಭಾಪತಿಗಳ ಕೊಠಡಿಗಳು, ವಿಧಾನ ಸಭೆ ಹಾಗೂ ವಿಧಾನ ಪರಿಷತ್ ಸಚಿವಾಲಯಗಳು, ಮುಖ್ಯಮಂತ್ರಿಗಳ ಕೊಠಡಿ ಹಾಗೂ ಕಚೇರಿ, ಸಚಿವರುಗಳಿಗಾಗಿ 38 ಕೊಠಡಿಗಳು ಕ್ಯಾಬಿನೇಟ್ ಹಾಲ್, ಮೀಟಿಂಗ್ ಹಾಲ್ ಹಾಗೂ ಆಡಳಿತ ಕಚೇರಿಗಳನ್ನು ಹೊಂದಿದೆ.

ಸುವರ್ಣ ಸೌಧ ಕಟ್ಟಡವನ್ನು ಬೆಳಗಾವಿ ಹತ್ತಿರದ ಹಲಗಾ-ಬಸ್ತವಾಡ ಗ್ರಾಮಗಳ ಪ್ರದೇಶದ ರಾಷ್ಟ್ರೀಯ ಹೆದ್ದಾರಿ-4ಕ್ಕೆ ಹೊಂದಿಕೊಂಡಿರುವ 127 ಎಕರೆ 16 ಗುಂಟೆ ಜಾಗದಲ್ಲಿ ನಿರ್ಮಿಸಲಾಗಿದೆ.

ಸುವರ್ಣ ಸೌಧ ಕಟ್ಟಡವನ್ನು ಬೆಳಗಾವಿ ಹತ್ತಿರದ ಹಲಗಾ-ಬಸ್ತವಾಡ ಗ್ರಾಮಗಳ ಪ್ರದೇಶದ ರಾಷ್ಟ್ರೀಯ ಹೆದ್ದಾರಿ-4ಕ್ಕೆ ಹೊಂದಿಕೊಂಡಿರುವ 127 ಎಕರೆ 16 ಗುಂಟೆ ಜಾಗದಲ್ಲಿ ನಿರ್ಮಿಸಲು ತೀರ್ಮಾನಿಸಿ ಭೂಸ್ವಾಧೀನ ಕಾಯ್ದೆ ಕಲಂ 4(1) ರನ್ವಯ ಸದರಿ ಸ್ಥಳಕ್ಕಾಗಿ ರು. 17.62 ಕೋಟಿಗಳ ಮೊತ್ತವನ್ನು ಪರಿಹಾರ ಧನವಾಗಿ ನೀಡಿ ಜಮೀನನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲಾಗಿತು.

22ನೇ ಜನವರಿ 2009 ರಂದು 'ಸುವರ್ಣ ಸೌಧ' ನಿರ್ಮಾಣ ಕಾಮಗಾರಿ ಭೂಮಿ ಪೂಜೆ ಹಾಗೂ ಶಂಕು ಸ್ಥಾಪನೆಯನ್ನು ಹಲಗಾ-ಬಸ್ತವಾಡ ಗ್ರಾಮಕ್ಕೆ ಸೇರಿದ ಜಾಗದಲ್ಲಿ, ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ. ಸಭಾಧ್ಯಕ್ಷರು ಕರ್ನಾಟಕ ವಿಧಾನ ಸಭೆ, ಸಭಾಪತಿಯವರು ಕರ್ನಾಟಕ ವಿಧಾನ ಪರಿಷತ್ ನೇತೃತ್ವದಡಿ ನೆರವೇರಿಸಲಾಯಿತು.

ಕಾಮಗಾರಿಯನ್ನು ಮೆ: ಬಿ.ಜಿ.ಶಿರ್ಕೆ ಕನ್ಸ್ಟ್ರಕ್ಸನ್ ಟೆಕ್ನಾಲಜಿ ಪ್ರೈ.ಲಿ. ಪೂನ ರವರಿಗೆ ಗುತ್ತಿಗೆಯನ್ನು ನೀಡಲಾಗಿತ್ತು. ಸುವರ್ಣ ಸೌಧ ಕಟ್ಟಡವು ಬೇಸ್‍ಮೆಂಟ್, ನೆಲಮಹಡಿ ಹಾಗೂ ಮೂರು ಮಹಡಿಗಳ ಕಟ್ಟಡವಾಗಿರುತ್ತದೆ.

ಕಟ್ಟಡದ ಅಳತೆ 150.15 ಮೀಟರ್ ‍X 107.25 ಮೀಟರ್ ಇದೆ. ಒಟ್ಟಾರೆ ವಿಸ್ತೀರ್ಣ-60398.00 ಚದರ ಮೀಟರ್. ಎತ್ತರ, 22.00 ಮೀಟರ್ ಆಗಿದೆ. ಅಸೆಂಬ್ಲಿ ಹಾಲ್ ನಲ್ಲಿ 300 ಜನ, ಸೆಂಟ್ರಲ್ ಹಾಲ್ ನಲ್ಲಿ 450 ಜನ, ಕೌನ್ಸಿಲ್ ಹಾಲ್ ನಲ್ಲಿ 100, ಬ್ಯಾಂಕ್ವೆಂಟ್ ಹಾಲ್ ನಲ್ಲಿ 500, ಕಾನ್ಫರನ್ಸ್ ಹಾಲ್ ನಲ್ಲಿ 350 ಹಾಗೂ 150 ಜನ ಕುಳಿತುಕೊಳ್ಳುವ ವ್ಯವಸ್ಥೆ ಹೊಂದಿದೆ.

ಸಭಾಧ್ಯಕ್ಷರು, ಉಪ ಸಭಾಧ್ಯಕ್ಷರು ಹಾಗೂ ಸಭಾಪತಿಗಳು ಹಾಗೂ ಉಪಸಭಾಪತಿಗಳ ಕೊಠಡಿಗಳು, ವಿಧಾನ ಸಭೆ ಹಾಗೂ ವಿಧಾನ ಪರಿಷತ್ ಸಚಿವಾಲಯಗಳು, ಮುಖ್ಯಮಂತ್ರಿಗಳ ಕೊಠಡಿ ಹಾಗೂ ಕಚೇರಿ, ಸಚಿವರುಗಳಿಗಾಗಿ 38 ಕೊಠಡಿಗಳು ಕ್ಯಾಬಿನೇಟ್ ಹಾಲ್, ಮೀಟಿಂಗ್ ಹಾಲ್ ಹಾಗೂ ಆಡಳಿತ ಕಚೇರಿಗಳನ್ನು ಹೊಂದಿದೆ.

ಈ ಭವ್ಯವಾದ ಕಟ್ಟಡವು ಪೂರ್ವ, ಪಶ್ಚಿಮ, ಉತ್ತರ ಹಾಗೂ ದಕ್ಷಿಣ ಭಾಗಗಳಲ್ಲಿ ಪೋರ್ಟಿಕೋ ಗ್ರ್ಯಾಂಡ್ ಸ್ಟೇಪ್ ಮತ್ತು ಕಾರಿಡಾರ್ ಗಳು, 6 ಚಿಕ್ಕ ಗೋಪುರಗಳು ಹಾಗೂ ಮಧ್ಯದಲ್ಲಿ ಮುಖ್ಯ ಗೋಪುರಗಳಿಗೆ ಗ್ರೇ ಗ್ರಾನೈಟ್ ಕಲ್ಲಿನಲ್ಲಿ ಕಲಾತ್ಮಕ ಹಾಗೂ ಅಲಂಕಾರಿಕ ಕಾಮಗಾರಿಗಳನ್ನು ಇಂಡೋ-ಗ್ರೀಕ್ ಶೈಲಿಯ ವಾಸ್ತುಶಿಲ್ಪವನ್ನು ಅಳವಡಿಸಿ ನಿರ್ಮಿಸಲಾಗಿದೆ.

ಈ ಕಟ್ಟಡದಲ್ಲಿ ಕೇಂದ್ರೀಕೃತ ಹವಾನಿಯಂತ್ರಿತ ವ್ಯವಸ್ಥೆ, 09 ಲಿಫ್ಟ್ ಗಳು, ಅಕಾಸ್ಟೀಕ್ ಇಂಟಿರಿಯರ್ಸ್, ಎನರ್ಜಿ ಎಫಿಷಿಯಂಟ್ ಲೈಟಿಂಗ್, ಫೈರ್ ಫೈಟಿಂಗ್ ವ್ಯವಸ್ಥೆ, ಇರಿಗೇಷನ್ ಸಿಸ್ಟಂ ಒಳಗೊಂಡ ಲ್ಯಾಂಡ್ ಸ್ಕೇಪಿಂಗ್, ಮಳೆ ಕೊಯಿಲು ಇತ್ಯಾದಿಗಳಿಗಾಗಿ ಅವಕಾಶ ಕಲ್ಪಿಸಲಾಗಿದೆ. ಬೆಳಗಾವಿ ನಗರ ನೀರು ಸರಬರಾಜು ವ್ಯವಸ್ಥೆಯಿಂದ ನೀರು ಪೂರೈಕೆ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ಭವ್ಯವಾದ ಕಟ್ಟಡವು ಪೂರ್ವ, ಪಶ್ಚಿಮ, ಉತ್ತರ ಹಾಗೂ ದಕ್ಷಿಣ ಭಾಗಗಳಲ್ಲಿ ಪೋರ್ಟಿಕೋ ಗ್ರ್ಯಾಂಡ್ ಸ್ಟೇಪ್ ಮತ್ತು ಕಾರಿಡಾರ್‍ಗಳು, 6 ಚಿಕ್ಕ ಗೋಪುರಗಳು ಹಾಗೂ ಮಧ್ಯದಲ್ಲಿ ಮುಖ್ಯ ಗೋಪುರಗಳಿಗೆ ಗ್ರೇ ಗ್ರಾನೈಟ್ ಕಲ್ಲಿನಲ್ಲಿ ಕಲಾತ್ಮಕ ಹಾಗೂ ಅಲಂಕಾರಿಕ ಕಾಮಗಾರಿಗಳನ್ನು ಇಂಡೋ-ಗ್ರೀಕ್ ಶೈಲಿಯ ವಾಸ್ತುಶಿಲ್ಪವನ್ನು ಅóಳವಡಿಸಿ ನಿರ್ಮಿಸಲಾಗಿದೆ.

English summary
President Pranab Mukherjee will inaugurate the newly constructed Suvarna Vidhana Soudha in Belgaum on Thursday (Oct 11). Here is bird's eye view on the construction details of Suvarna Vidhana Soudha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X