ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಬರ್ಟ್ ವದ್ರಾ ಶುದ್ಧಹಸ್ತ : ಭಾರದ್ವಾಜ್ ಪ್ರಮಾಣಪತ್ರ

By Prasad
|
Google Oneindia Kannada News

Hansraj Bhardwaj gives clean chit to Robert Vadra
ಬೆಂಗಳೂರು, ಅ. 9 : ಭ್ರಷ್ಟಾಚಾರದ ವಿರುದ್ಧ ಸೆಡ್ಡು ಹೊಡೆದಿರುವ ಆರ್ಟಿಐ ಕಾರ್ಯಕರ್ತ ಅರವಿಂದ್ ಕೇಜ್ರಿವಾಲ್ ಅವರಿಂದ ಭೂ ಖರೀದಿಯಲ್ಲಿ ಅವ್ಯವಹಾರ ನಡೆಸಿದ್ದಾರೆಂದು ಆರೋಪಕ್ಕೊಳ್ಳಗಾಗಿರುವ ರಾಬರ್ಟ್ ವದ್ರಾ ಅವರು 'ಶುದ್ಧ ಹಸ್ತ'ರಾಗಿದ್ದಾರೆ ಎಂದು ಕರ್ನಾಟಕದ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಸರ್ಟಿಫಿಕೇಟ್ ನೀಡಿ ವಿವಾದ ಸೃಷ್ಟಿಸಿದ್ದಾರೆ. ಒಂದು ರಾಜ್ಯದ ರಾಜ್ಯಪಾಲರಾಗಿರುವವರು ಕಾಂಗ್ರೆಸ್ ಏಜೆಂಟರಂತೆ ವರ್ತಿಸುವುದೇಕೆ? ಎಂಬ ಮಾತುಗಳು ಕೇಳಿಬರುತ್ತಿವೆ.

ಭ್ರಷ್ಟಾಚಾರದ ವಿರುದ್ಧ ಭಾರತ ಸಂಘಟನೆಯ ಸದಸ್ಯರಾದ ಅರವಿಂದ್ ಕೇಜ್ರಿವಾಲ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರು, ಸೋನಿಯಾ ಗಾಂಧಿ ಅವರ ಅಳಿಯ, ಪ್ರಿಯಾಂಕಾ ಗಾಂಧಿ ವದ್ರಾ ಗಂಡ ರಾಬರ್ಟ್ ವದ್ರಾ ಅವರು ಹರ್ಯಾಣಾದಲ್ಲಿ ಡಿಎಲ್ಎಫ್ ರಿಯಲ್ ಎಸ್ಟೇಟ್ ಸಂಸ್ಥೆಯ ಜೊತೆ ಕೈಜೋಡಿಸಿ ಕೋಟ್ಯಂತರ ಬೆಲೆ ಬಾಳುವ ಆಸ್ತಿಯನ್ನು ಅತ್ಯಂತ ಕಡಿಮೆ ಬೆಲೆಗೆ ಕಬಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಹಿಂದೆ ಕೇಂದ್ರ ಸಂಪುಟದಲ್ಲಿ ಕಾನೂನು ಸಚಿವರಾಗಿದ್ದ ಹಂಸರಾಜ್ ಭಾರದ್ವಾಜ್ ಅವರು ಈ ಆರೋಪಗಳಿಗೆ ಪ್ರತಿಕ್ರಿಯಿಸಿದ್ದು, ಇಂದಿರಾ ಗಾಂಧಿ ಕಾಲದಿಂದ ಸೋನಿಯಾ ಗಾಂಧಿಯ ಕಾಲದವರೆಗೆ ಗಾಂಧಿ ಕುಟುಂಬದ ವಿರುದ್ಧ ಅನೇಕರು ಅನೇಕ ರೀತಿಯ ಆರೋಪಗಳನ್ನು ಹೊರಿಸುತ್ತಲೇ ಬಂದಿದ್ದಾರೆ. ಆದರೆ, ಆ ಎಲ್ಲ ಆರೋಪಗಳು ಸುಳ್ಳಾಗಿ ಪರಿಣಮಿಸಿವೆ ಎಂದು ಅವರು ಹೇಳಿದ್ದಾರೆ.

"ಅರವಿಂದ್ ಕೇಜ್ರಿವಾಲ್ ಕಾನೂನು ತಜ್ಞರೇನು? ಶಾಸನ ರಚಿಸುವ ಕಾರ್ಯಕ್ಕೆ ಇವರೇಕೆ ಕೈ ಹಾಕುತ್ತಿದ್ದಾರೆ? ನಾನೇನಾದರೂ ಕಾನೂನು ಮಂತ್ರಿಯಾಗಿದ್ದರೆ ಅರವಿಂದ್ ಕೇಜ್ರಿವಾಲ್ ಅಂಥವರಿಗೆ ಯಾವುದೇ ಕಾನೂನು ರಚಿಸಲು ಅವಕಾಶವನ್ನೇ ನೀಡುತ್ತಿರಲಿಲ್ಲ" ಎಂದು ಅವರು ಕೇಜ್ರಿವಾಲ್ ಅವರನ್ನು ಹಂಸರಾಜ್ ಭಾರದ್ವಾಜ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.

ಮತ್ತಷ್ಟು ಆರೋಪ : ರಾಬರ್ಟ್ ವದ್ರಾ ಅವರ ಮೇಲೆ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಮತ್ತಷ್ಟು ಆರೋಪಗಳನ್ನು ಹೊರಿಸಿ, ಇನ್ನಷ್ಟು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ವಧ್ರಾ ಅವರಿಗೆ ಡಿಎಲ್ಎಫ್ ರಿಯಲ್ ಎಸ್ಟೇಟ್ ಸಂಸ್ಥೆ ಬಡ್ಡಿರಹಿತ ಸಾಲ ನೀಡಿದೆ ಎಂದು ಆರೋಪಿಸಿರುವ ಅವರು, ಈ ಹಗರಣಕ್ಕೆ ಸಂಬಂಧಿಸಿದಂತೆ ಶ್ವೇತಪತ್ರ ಹೊರಡಿಸಬೇಕೆಂದು ಆಗ್ರಹಿಸಿದ್ದಾರೆ.

ಈ ಹಗರಣದಲ್ಲಿ ಕಾಂಗ್ರೆಸ್ ನಾಯಕರ ನೇರ ಕೈವಾಡ ಇರದಿದ್ದರೆ, ಕಂಡಕಂಡ ಕಾಂಗ್ರೆಸ್ ನಾಯಕರೆಲ್ಲ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಬರ್ಟ್ ವದ್ರಾ ಅವರನ್ನು ಬೆಂಬಲಿಸಿ ಹೇಳಿಕೆಗಳೇಕೆ ನೀಡುತ್ತಿದ್ದಾರೆ ಎಂದು ಕೇಜ್ರಿವಾಲ್ ಕಿಡಿ ಕಾರಿದ್ದಾರೆ. ಇಬ್ಬರು ಖಾಸಗಿ ವ್ಯಕ್ತಿಗಳ ನಡುವಿನ ಈ ಪ್ರಕರಣದ ತನಿಖೆ ನಡೆಸಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಅವರು ಹೇಳಿದ್ದಕ್ಕೆ ಪ್ರತಿಕ್ರಿಯಿಸಿರುವ ಕೇಜ್ರಿವಾಲ್, ಚಿದಂಬರಂ ಅವರು ರಾಬರ್ಟ್ ವದ್ರಾ ಅವರ ಆದಾಯ ತೆರಿಗೆ ಅಸೆಸ್ಮೆಂಟ್ ಅಧಿಕಾರಿಯೆ ಎಂದು ಪ್ರಶ್ನಿಸಿದ್ದಾರೆ.

English summary
Karnataka governor has raked up another controversy by saying Sonia Gandhi's son-in-law Robert Vadra is clean and has not involved in any land scam, as alleged by RTI and Indian Against Corruption activist Arvind Kejriwal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X