ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಈಗೇನು ಮಾಡುತ್ತಿದ್ದಾರೆ?

By ಸಾಧು ಶ್ರೀನಾಥ್
|
Google Oneindia Kannada News

ನವದೆಹಲಿ, ಅ.9: ರಾಷ್ಟ್ರದ 14ನೆಯ ಪ್ರಥಮ ಪ್ರಜೆಯಾಗಿ ಮೂರು ತಿಂಗಳ ಹಿಂದೆ ಚುನಾಯಿತರಾದ ಶ್ರೀ ಪ್ರಣಬ್ ಮುಖರ್ಜಿ ಅವರು ಅಂದಿನಿಂದ ಏನೆಲ್ಲ ಮಾಡುತ್ತಿದ್ದಾರೆ ಎಂಬ ಕುತೂಹಲ ಸಾಮಾನ್ಯ ಪ್ರಜೆಯಲ್ಲಿ ಸಹಜವಾಗಿಯೇ ಮೂಡುತ್ತದೆ. ಈ ಕುತೂಹಲವನ್ನು ತಣಿಸುವ ಪ್ರಯತ್ನವಾಗಿ ಒನ್ ಇಂಡಿಯಾ ಕನ್ನಡ ಒಂದಷ್ಟು ಸಚಿತ್ರ ಮಾಲಿಕೆಯನ್ನು ಇಲ್ಲಿ ಪ್ರಸ್ತುತ ಪಡಿಸಿದೆ. ಇದೋ ನಿಮಗಾಗಿ ಪ್ರಣಬ್ ದಾ ಅವರ ಜೀವನಚರಿ...

ಅದಕ್ಕೂ ಮುನ್ನ, ನಾಳಿದ್ದು ಗುರುವಾರ (ಅಕ್ಟೋಬರ್ 11) ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿ ಅವರು ಬೆಳಗಾವಿಯಲ್ಲಿ 'ಸುವರ್ಣ ವಿಧಾನಸೌಧ' ಉದ್ಘಾಟನೆಗೆ ಬರುತ್ತಿದ್ದಾರೆ. ಹಾಗಾಗಿ, ನಮ್ಮ ರಾಷ್ಟ್ರಪತಿಗಳ ಕಿರುಪರಿಚಯ ಇಲ್ಲಿದೆ. ನಿರೀಕ್ಷಿಸಿ: ಬೆಳಗಾವಿಯಲ್ಲಿ 'ಸುವರ್ಣ ವಿಧಾನಸೌಧ' ಉದ್ಘಾಟನೆ ಸಂದರ್ಭದಲ್ಲಿ ರಾಷ್ಟ್ರಪತಿ ಮುಖರ್ಜಿ ಅವರ ಚಿತ್ರಗಳನ್ನೂ ಹೀಗೆ ನಿಮಗಾಗಿ ಕಟ್ಟಿಕೊಡುತ್ತೇವೆ.

ಬ್ರಿಟೀಷರು ಬಿಟ್ಟು ಹೋಗಿದ್ದ ವಾಡಿಕೆಯೊಂದಕ್ಕೆ ಮೊನ್ನೆಯಷ್ಟೇ ಕಡಿವಾಣ ಹಾಕಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ತಮ್ಮ ಹೆಸರಿನ ಮುಂದೆ His Excellency, Honourable ವಿಶೇಷಣಗಳು ಬೇಡವೆಂದು ಗಮನ ಸೆಳೆದಿದ್ದರು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ರಾಜಕೀಯೇತರ ವ್ಯಕ್ತಿಯಾಗಿ ಏನೆಲ್ಲ ಮಾಡುತ್ತಿದ್ದಾರೆ. ಅವರ ದಿನಚರಿ ಏನೇನು? ಬನ್ನಿ ಪ್ರಣಬ್ ಅವರನ್ನು ಹಿಂಬಾಲಿಸೋಣ...

ಪಾಟ್ನಾ ವಿಮಾನ ನಿಲ್ದಾಣದಲ್ಲಿ ಗೌರವ ವಂದನೆ

ಪಾಟ್ನಾ ವಿಮಾನ ನಿಲ್ದಾಣದಲ್ಲಿ ಗೌರವ ವಂದನೆ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಕ್ಟೋಬರ್ 3ರಂದು ಪಾಟ್ನಾ ವಿಮಾನ ನಿಲ್ದಾಣದಲ್ಲಿ ಕಾಲಿಡುತ್ತಿದ್ದಂತೆ ಮೂರೂ ರಕ್ಷಣಾ ಪಡೆಗಳು ಗೌರವ ವಂದನೆ ಸಲ್ಲಿಸಿದವು. ಈ ಸಂದರ್ಭದಲ್ಲಿ ರಾಜ್ಯಪಾಲ ದೇವಾನಂದ ಕೌರ್ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಉಪಸ್ಥಿತರಿದ್ದರು.

ಲಲಿತ್ ಮಿಥಿಲಾ ವಿವಿ ಘಟಿಕೋತ್ಸವದಲ್ಲಿ ರಾಷ್ಟ್ರಪತಿ

ಲಲಿತ್ ಮಿಥಿಲಾ ವಿವಿ ಘಟಿಕೋತ್ಸವದಲ್ಲಿ ರಾಷ್ಟ್ರಪತಿ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಕ್ಟೋಬರ್ 3ರಂದು ಬಿಹಾರದ ದರಭಂಗಾದಲ್ಲಿರುವ ಲಲಿತ್ ಮಿಥಿಲಾ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು. ಅದಕ್ಕೂ ಮುನ್ನ ದೇಶದ ಎಲ್ಲ ವಿಶ್ವವಿದ್ಯಾಲಯಗಳ ಮುಖ್ಯಸ್ಥರೂ ಆದ ರಾಷ್ಟ್ರಪತಿಗೆ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಆತ್ಮೀಯ ಸ್ವಾಗತ ಕೋರಿತು.

ದಾಲ್ ಸರೋವರದಲ್ಲಿ ಸ್ವಚ್ಛಂದ ವಿಹಾರ

ದಾಲ್ ಸರೋವರದಲ್ಲಿ ಸ್ವಚ್ಛಂದ ವಿಹಾರ

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸೆಪ್ಟೆಂಬರ್ 27ರಂದು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ರಾಜ್ಯಪಾಲ ಎನ್ಎನ್ ವೋರಾ ಮತ್ತು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಜತೆಗೂಡಿ ಶ್ರೀನಗರದಲ್ಲಿರುವ ದಾಲ್ ಸರೋವರದಲ್ಲಿ ಸ್ವಚ್ಛಂದ ವಿಹಾರ ಮಾಡಿದರು.

ನಿಶಾತ್ ತೋಟದಲ್ಲಿ ಹೆಜ್ಜೆ ಹಾಕಿದ ಪ್ರಣಬ್ ದಾ

ನಿಶಾತ್ ತೋಟದಲ್ಲಿ ಹೆಜ್ಜೆ ಹಾಕಿದ ಪ್ರಣಬ್ ದಾ

ಸೆಪ್ಟೆಂಬರ್ 27ರಂದು ದಾಲ್ ಸರೋವರದ ಸನಿಹದಲ್ಲೇ ಇರುವ ನಿಶಾತ್ ಬಾಗ್ ಎಂಬ ಮೊಘಲ್ ಗಾರ್ಡನ್ನಿನಲ್ಲಿ ಒಂದು ಸುತ್ತು ಹಾಕಿದರು. ರಾಜ್ಯಪಾಲ ವೋರಾ ಮತ್ತು ಮುಖ್ಯಮಂತ್ರಿ ಒಮರ್ ಜತೆಗೂಡಿ ಶ್ರೀನಗರದಲ್ಲಿರುವ ದಾಲ್ ಸರೋವರದಲ್ಲಿ ಸ್ವಚ್ಛಂದ ವಿಹಾರ ಮಾಡಿದರು.

ಶ್ರೀನಗರದಲ್ಲಿ ರಾಷ್ಟ್ರದ ಪ್ರಥಮ ಪ್ರಜೆ ಪ್ರಣಬ್ ದಾ

ಶ್ರೀನಗರದಲ್ಲಿ ರಾಷ್ಟ್ರದ ಪ್ರಥಮ ಪ್ರಜೆ ಪ್ರಣಬ್ ದಾ

ಸೆಪ್ಟೆಂಬರ್ 26ರಂದು ರಾಷ್ಟ್ರದ ಪ್ರಥಮ ಪ್ರಜೆ ಪ್ರಣಬ್ ದಾ ಅವರು ಶ್ರೀನಗರಕ್ಕೆ ಆಗಮಸಿದ ವೇಳೆ ಗೌರವ ವಂದನೆ ನೀಡಲಾಯಿತು.

ಶ್ರೀಲಂಕಾ ರಾಷ್ಟ್ರಪತಿ ಮಹಿಂದಾ ರಾಜಪಕ್ಷೆ ಜತೆ ಭೇಟಿ

ಶ್ರೀಲಂಕಾ ರಾಷ್ಟ್ರಪತಿ ಮಹಿಂದಾ ರಾಜಪಕ್ಷೆ ಜತೆ ಭೇಟಿ

ಸೆಪ್ಟೆಂಬರ್ 20ರಂದು ಭಾರತಕ್ಕೆ ಭೇಟಿ ನೀಡಿದ ಶ್ರೀಲಂಕಾ ರಾಷ್ಟ್ರಪತಿ ಮಹಿಂದಾ ರಾಜಪಕ್ಷೆ ಅವರು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿದರು.

ತವರೂರು ಕೋಲ್ಕೊತ್ತಾಗೆ ಪ್ರಣಬ್ ಭೇಟಿ

ತವರೂರು ಕೋಲ್ಕೊತ್ತಾಗೆ ಪ್ರಣಬ್ ಭೇಟಿ

ಸೆಪ್ಟೆಂಬರ್ 15ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನೇತಾಜಿ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ರಾಜ್ಯಪಾಲ ಎಂಕೆ ನಾರಾಯಣನ್ ಜತೆ ನೀಡಿದ್ದರು.

ಅಸ್ಸಾಂ ವಿದ್ಯಾರ್ಥಿ ಸಮೂಹಕ್ಕೆ ರಾಷ್ಟ್ರಪತಿ ಹಿತವಚನ

ಅಸ್ಸಾಂ ವಿದ್ಯಾರ್ಥಿ ಸಮೂಹಕ್ಕೆ ರಾಷ್ಟ್ರಪತಿ ಹಿತವಚನ

ಸೆಪ್ಟೆಂಬರ್ 1ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಸ್ಸಾಂ ರಾಜ್ಯದ ಚಿರಾಂಗ್ ಮತ್ತು ಕೋಕಾಝಾಡ್ ಜಿಲ್ಲೆಯಿಂದ ಬಂದಿದ್ದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹಿತವಚನ ನುಡಿದರು.

ಕೋಲ್ಕೊತ್ತಾ ವಿಮಾನ ನಿಲ್ದಾಣದಲ್ಲಿ ಗೌರವ

ಕೋಲ್ಕೊತ್ತಾ ವಿಮಾನ ನಿಲ್ದಾಣದಲ್ಲಿ ಗೌರವ

ಸೆಪ್ಟೆಂಬರ್ 15ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಅವರನ್ನು ಗೌರವಾದರದೊಂದಿಗೆ ಬರ ಮಾಡಿಕೊಳ್ಳಲಾಯಿತು.

ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಪ್ರಣಬ್ ಮುಖರ್ಜಿ

ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಪ್ರಣಬ್ ಮುಖರ್ಜಿ

ಸೆಪ್ಟೆಂಬರ್ 9ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ತಿರುಪತಿ ವೆಂಕಟರಮಣನ ಸನ್ನಿಧಿಯಲ್ಲಿ ಮೇಧಾವಿ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿದರು.

ಸ್ವಾತಂತ್ರ್ಯದ ಸವಿಯಲ್ಲಿ ರಾಷ್ಟ್ರಪತಿ ಪ್ರಣಬ್

ಸ್ವಾತಂತ್ರ್ಯದ ಸವಿಯಲ್ಲಿ ರಾಷ್ಟ್ರಪತಿ ಪ್ರಣಬ್

ರಾಷ್ಟ್ರದ 66ನೇ ಸ್ವಾತಂತ್ರ್ಯೋತ್ಸವದಂದು ಕಾರ್ಯಕ್ರಮವೊಂದರಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ.

ಅಮರ್ ಜವಾನ್ ಸ್ಮರಣಾರ್ಥ

ಅಮರ್ ಜವಾನ್ ಸ್ಮರಣಾರ್ಥ

ರಾಷ್ಟ್ರದ 66ನೇ ಸ್ವಾತಂತ್ರ್ಯೋತ್ಸವದಂದು ಅಮರ ಸೈನಿಕರ ಪುಣ್ಯಸ್ಮರಣೆಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ.

ಪ್ರತಿಭಾ ಪಾಟೀಲರಿಂದ ಅಧಿಕಾರ ಸ್ವೀಕರಿಸುವ ಮುನ್ನ

ಪ್ರತಿಭಾ ಪಾಟೀಲರಿಂದ ಅಧಿಕಾರ ಸ್ವೀಕರಿಸುವ ಮುನ್ನ

ಜುಲೈ 25ರಂದು ನಿಕಟಪೂರ್ವ ರಾಷ್ಟ್ರಪತಿ ಪ್ರತಿಭಾ ಪಾಟೀಲರಿಂದ ಅಧಿಕಾರ ಹಸ್ತಾಂತರಕ್ಕೆ ಕೆಲವೇ ಕ್ಷಣಗಳ ಮುನ್ನ.

ಪ್ರಥಮ ಪ್ರಜೆಗೆ ಪ್ರಥಮ ಗೌರವ ವಂದನೆ

ಪ್ರಥಮ ಪ್ರಜೆಗೆ ಪ್ರಥಮ ಗೌರವ ವಂದನೆ

ಪ್ರಮಾಣ ವಚನ ಸ್ವೀಕರಿಸಿದ ಬಳಿಕ ನೂತನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪ್ರಥಮ ಗೌರವ ವಂದನೆ ಸಲ್ಲಿಕೆ.

English summary
The Special Moments of Sri Pranab Mukherjee (77), the 13th President of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X