ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಫ್ ಸಿಯಲ್ಲಿ ಚಿಕನ್ ಜೊತೆ ಹುಳ ಫ್ರೀ!

By Mahesh
|
Google Oneindia Kannada News

KFC chicken
ತಿರುವನಂತಪುರಂ, ಅ.9: ಇನ್ಮುಂದೆ ಕೆಎಫ್ ಸಿಯಲ್ಲಿ ಚಿಕನ್ ತಿನ್ನುವ ಮೊದಲು ಎರಡು ಬಾರಿ ಪರೀಕ್ಷೆ ಮಾಡಿ ತಿನ್ನಿ. ಫ್ರೈಡ್ ಚಿಕನ್ ತುಂಡಗಳ ಜೊತೆ ಹುಳ ಹುಪ್ಪಟ್ಟ ಸಿಕ್ಕಿರೂ ಸಿಗಬಹುದು. ಇಲ್ಲಿನ ಕೆಎಫ್ ಸಿಯಲ್ಲಿ ಕೇರಳದ ಕುಟುಂಬವೊಂದಕ್ಕೆ ಇದೇ ರೀತಿ ಆಗಿದೆ.

ತಿರುವನಂತಪುರಂನ ಕೆಂಟುಕಿ ಫ್ರೈಂಡ್ ಚಿಕನ್ (KFC) ಮಳಿಗೆಯಲ್ಲಿ ಫ್ರೈಡ್ ಚಿಕನ್ ಗೆ ಆರ್ಡರ್ ಮಾಡಿ ಬಾಯಲ್ಲಿ ನೀರೂರುಸುತ್ತಾ ಕುಳಿತ್ತಿದ್ದವರಿಗೆ ಚಿಕನ್ ಜೊತೆ ಹುಳುಗಳು ಕಾಣಿಸಿಕೊಂಡಿದ್ದನ್ನು ನೋಡಿ ಹೌಹಾರಿದ್ದಾರೆ.

ತಕ್ಷಣವೇ ಕೆಎಫ್ ಸಿ ಮಳಿಗೆ ವಿರುದ್ಧ ದೂರು ದಾಖಲಿಸಲಾಗಿದೆ. ಆಹಾರ ಸುರಕ್ಷತೆ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರೀಶಿಲನೆ ನಡೆಸಿದಾಗ ಕೆಎಫ್ ಸಿನಲ್ಲಿ ಯಾವುದೇ ಶುಚಿತ್ವ ನಿಯಮ ಪಾಲಿಸುತ್ತಿಲ್ಲ ಎಂಬುದು ಗಮನಕ್ಕೆ ಬಂದಿದೆ.

ಪರೀಕ್ಷೆ ನಂತರ ಕೆಎಫ್ ಸಿಯಲ್ಲಿ ಸುಮಾರು 5 ತಿಂಗಳಿಗೂ ಹಳೆಯದಾದ ಚಿಕನ್ ಬಳಸಿದ್ದಾರೆ ಎಂದು ತಿಳಿದು ಬಂದಿದೆ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ತಿರುವನಂತಪುರಂನ ಕೆಎಫ್ ಸಿ ಮಳಿಗೆಯನ್ನು ಬಂದ್ ಮಾಡಲಾಗಿದೆ. ಹಾಗೂ ನಗರದಲ್ಲಿರುವ ಇತರೆ ಮಳಿಗೆಯತ್ತ ಆಹಾರ ಪ್ರಾಧಿಕಾರದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

'ಕೆಎಫ್ ಸಿ ಯಲ್ಲಿ ಫ್ರೈಡ್ ಚಿಕನ್ ಜೊತೆ ಹುಳ ಕಾಣಿಸಿಕೊಂಡಿದೆ ಎಂದು ಗ್ರಾಹಕರೊಬ್ಬರು ಕರೆ ಮಾಡಿ ದೂರು ನೀಡಿದ ಮೇಲೆ ಮಳಿಗೆಗಳ ಮೇಲೆ ದಾಳಿ ನಡೆಸಲಾಗಿದೆ. ಆರೋಪ ಸಾಬೀತಾಗಿದೆ. ಉಳಿದ ಕೆಎಫ್ ಸಿ ಮಳಿಗೆಗಳ ಮೇಲೂ ದಾಳಿ ಮುಂದುವರೆದಿದೆ ಎಂದು ತಿರುವನಂತಪುರ ಜಿಲ್ಲಾ ಆಹಾರ ಸುರಕ್ಷತಾ ಪ್ರಾಧಿಕಾರ ಅಧಿಕಾರಿ ಶಿವಕುಮಾರ್ ಹೇಳಿದ್ದಾರೆ.

ಅನಿವಾಸಿ ಭಾರತೀಯ ಶೈಜೂ ಅವರು ಅಮೆರಿಕದಲ್ಲಿ ಜನಪ್ರಿಯತೆ ಗಳಿಸಿರುವ ಫ್ರೈಡ್ ಚಿಕನ್ ರುಚಿಯನ್ನು ತನ್ನ ಕುಟುಂಬಕ್ಕೆ ಪರಿಚಯಿಸಲು ಕೆಎಫ್ ಸಿಗೆ ತನ್ನ ಕುಟುಂಬವನ್ನು ಕರೆ ತಂದಿದ್ದರು. ಭಾರತೀಯ ಶೈಲಿ ಮಸಾಲೆ ಭರಿತ ಚಿಕನ್ ಬದಲು ಕೆಎಫ್ ಸಿ ಯ ಚಿಕನ್ ರುಚಿ ನೋಡಲು ಬಂದವರಿಗೆ ಆಘಾತವಾಗಿದೆ.

ಪತ್ನಿ, ಪುತ್ರ ಹಾಗೂ ಇಬ್ಬರು ಸಂಬಂಧಿಕರೊಡನೆ ಶೈಜೂ ಮಳಿಗೆಗೆ ಬಂದಿದ್ದರು. ಚಿಕನ್ ನಲ್ಲಿ ಸತ್ತ ಹುಳ ನೋಡಿದೊಡನೆ ವಾಂತಿ ಮಾಡಿಕೊಂಡಿದ್ದಾರೆ. ನಂತರ ಆಹಾರ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

English summary
Beware! Next time you want to enjoy fried chicken. Check before you eat the mouth-watering fried chicken pieces. Your food might be served along with worms. That is what has happened to a family in Kerala.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X