ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿಂಗ್ ಫಿಷರ್ ಉದ್ಯೋಗಿ ಪತ್ನಿ ಸಾವು, ಮಲ್ಯಗೆ ಕುತ್ತು

By Mahesh
|
Google Oneindia Kannada News

Vijay Mallya
ನವದೆಹಲಿ, ಅ.8: ತೀವ್ರ ಅರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕಿಂಗ್ ಫಿಷರ್ ಉದ್ಯೋಗಿ ಪತ್ನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಈಗ ಸಂಸ್ಥೆ ಒಡೆಯ ಮಲ್ಯರಿಗೆ ಕುತ್ತುಂಟು ಮಾಡುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆ ಒಡೆಯ ವಿಜಯ್ ಮಲ್ಯ ಅವರ ವಿರುದ್ಧ ತನಿಖೆ ನಡೆಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸೋಮವಾರ(ಅ.8) ಆದೇಶ ಹೊರಡಿಸಿದೆ.

ವಿಜಯ್ ಮಲ್ಯ ಒಡೆತನದ ಕಿಂಗ್ ಫಿಷರ್ ಸಂಸ್ಥೆ ತನ್ನ ಉದ್ಯೋಗಿಗಳಿಗೆ ಹಲವು ತಿಂಗಳುಗಳಿಂದ ಸಂಬಳ ಕೊಡುವುದನ್ನು ನಿಲ್ಲಿಸಿದೆ. ಇದರಿಂದ ಉದ್ಯೋಗಿಗಳ ಜೀವನೋಪಾಯಕ್ಕೆ ಕಷ್ಟವಾಗಿದೆ. ಕಿಂಗ್ ಫಿಷರ್ ಇಂಜಿನಿಯರ್ ಪತ್ನಿ ಸಾವಿಗೂ ಸಂಸ್ಥೆ ಕಾರಣ. ಹೀಗಾಗಿ ಸಂಸ್ಥೆ ಮಾಲೀಕರ ಮೇಲೆ ಕ್ರಮ ಜರುಗಿಸಬೇಕು ಎಂದು ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಲಾಗಿತ್ತು.

ದೆಹಲಿಯ ಮಂಗಳಪುರಿ ಪ್ರದೇಶದ ನಿವಾಸಿ 45 ವರ್ಷದ ಸುಶ್ಮಿತಾ ಚಕ್ರವರ್ತಿ ಅವರು ತಮ್ಮ ನಿವಾಸದಲ್ಲಿ ಗುರುವಾರ (ಅ.4) ಮಧ್ಯಾಹ್ನ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

'ನನ್ನ ಪತಿ ಹಾಗೂ ಪುತ್ರನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಆದರೆ, ಕಳೆದ ಆರು ತಿಂಗಳಿನಿಂದ ನನ್ನ ಪತಿ ಸಂಬಳವಿಲ್ಲದೆ ಮನೆ ನಡೆಸಲು ಆಗದೆ ಪಟ್ಟ ಕಷ್ಟ ನೆನೆದಾಗ ನನ್ನ ನಿರ್ಧಾರ ಸರಿ ಎನಿಸುತ್ತದೆ. ತೀವ್ರವಾದ ಆರ್ಥಿಕ ಸಂಕಷ್ಟದಲ್ಲಿ ನರಳಿ ನರಳಿ ಬದುಕುವುದಕ್ಕಿಂತ ಸಾಯುವುದೇ ಮೇಲು ಎಂದು ಆತ್ಮಹತ್ಯೆ ನಿರ್ಧಾರ ಕೈಗೊಂಡಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದರು.

ಸುಶ್ಮಿತಾ ಅವರ ಪತಿ ಮನಸ್ ಚಕ್ರವರ್ತಿ ಅವರು ಕಿಂಗ್ ಫಿಷಶ್ ಏರ್ ಲೈನ್ಸ್ ನಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದಾರೆ. ಆರ್ಥಿಕ ಸಂಕಷ್ಟದ ಸುಳಿಯಲ್ಲಿರುವ ಕಿಂಗ್ ಫಿಷರ್ ನ ಸುಮಾರು 270 ಇಂಜಿನಿಯರ್ ಗಳ ಜೊತೆ ಮನಸ್ ಚಕ್ರವರ್ತಿ ಕೂಡಾ ಮುಷ್ಕರದಲ್ಲಿ ಪಾಲ್ಗೊಂಡಿದ್ದರು.

ಕಿಂಗ್ ಫಿಷರ್ ವಿಮಾನಯಾನ ಸಂಸ್ಥೆ ತನ್ನ 4000 ಉದ್ಯೋಗಿಗಳ ಪೈಕಿ 2000 ಉದ್ಯೋಗಿಗಳಿಗೆ ಈ ವರ್ಷದ ಮಾರ್ಚ್ ತಿಂಗಳಿನ ತನಕ ಸಂಬಳ ನೀಡಿದೆ. ನಂತರ ಯಾರೊಬ್ಬರಿಗೂ ಸಂಬಳ ನೀಡುವಲ್ಲಿ ವಿಫಲವಾಗಿದೆ.

English summary
A plea against Mr Mallya has been granted by National Human Rights Commission (NHRC) on Monday, Oct 8. The plea urged the NHRC panel to start a case against the 56-year-old chairman of the UB Group.45-year-old Sushmita, wife of Kingfisher store manager Manas Chakravarti committed suicide on Thursday, Oct 4
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X