ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸಕರಿಗೆ ತಿಂಗಳಿಗೆ 28 ಸಾವಿರ ಗೃಹ ಭತ್ಯೆ ಸಾಕಲ್ವ?

By Mahesh
|
Google Oneindia Kannada News

Nitish Kumar
ಪಾಟ್ನಾ, ಅ.8: ಬಿಹಾರದ ಶಾಸಕರಿಗೆ ಅಲ್ಲಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಂಪರ್ ಕೊಡುಗೆ ನೀಡುತ್ತಿದ್ದಾರೆ. ತಮ್ಮ ಶಾಸಕರಿಗೆ ಪ್ರತಿ ತಿಂಗಳಿಗೆ 28,500 ರು ನಂತೆ ಮನೆ ಬಾಡಿಗೆ ಭತ್ಯೆ ನೀಡುತ್ತಿದ್ದಾರೆ. ಇದು ತಾತ್ಕಾಲಿಕವಾಗಿದ್ದು, ಎಲ್ಲಾ ಶಾಸಕರಿಗೆ ಶೀಘ್ರದಲ್ಲೇ ಡುಪ್ಲೆಕ್ಸ್ ಬಂಗಲೆಗಳು ಸಿಗಲಿದೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

ಸದ್ಯ ಶಾಸಕರು ಬಳಸುತ್ತಿರುವ ಕ್ವಾಟರ್ಸ್ ಮನೆಗಳನ್ನು ಇನ್ನೆರಡು ತಿಂಗಳಲ್ಲಿ ಖಾಲಿ ಮಾಡಬೇಕು ಹಾಗೂ ಪಾಟ್ನದಲ್ಲಿ ಖಾಸಗಿ ವಸತಿ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಕಲ್ಪಿಸಲಾಗುವುದು. ಹೊಸ ಬಂಗಲೆಗಳು ಸಿದ್ಧವಾದ ಮೇಲೆ ಎಲ್ಲರೂ ಗೃಹ ಪ್ರವೇಶ ಮಾಡಬಹುದು.

ಅಲ್ಲಿ ತನಕ ತಿಂಗಳಿಗೆ 28,500 ರು ನೀಡಲಾಗುವುದು. ಇದರಲ್ಲಿ 22,500 ರು ಬಾಡಿಗೆ ಹಾಗೂ 6,000 ರು ವಿದ್ಯುತ್ ಮತ್ತು ನೀರು ಬಳಕೆ ಖರ್ಚಿಗೆ ಬಳಸತಕ್ಕದ್ದು ಎಂದು ನಿತೀಶ್ ಸರ್ಕಾರ ಆದೇಶ ಹೊರಡಿಸಿದೆ.

ಆದರೆ, ಬಿಹಾರ ಅಸೆಂಬ್ಲೆ ಕಾರ್ಯದರ್ಶಿಗಳಿಂದ ಹೊರಡಿರುವ ಈ ಆದೇಶ ಪತ್ರಕ್ಕೆ ಇನ್ನೂ ಕ್ಯಾಬಿನೆಟ್ ಒಪ್ಪಿಗೆ ನೀಡಿಲ್ಲ. ಸದನದಲ್ಲೂ ಒಪ್ಪಿಗೆ ಪಡೆದಿಲ್ಲ ಎನ್ನಲಾಗಿದೆ.

ಮೂಲಗಳ ಪ್ರಕಾರ ಪ್ರತಿ ತಿಂಗಳಿಗೆ 35,000 ರು ನಂತೆ ಬಾಡಿಗೆ ಭತ್ಯೆ ನೀಡುವಂತೆ ಬೇಡಿಕೆ ಬಂದಿದೆಯಂತೆ. ಆದರೆ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈ ಮೊತ್ತವನ್ನು 28,500 ರು.ಗೆ ಇಳಿಸಿದ್ದಾರೆ.

ಬಿಹಾರದಲ್ಲಿ ಸುಮಾರು 243 ಎಂಎಲ್ ಎಗಳು ಹಾಗೂ 75 ಜನ ಎಂಎಲ್ಸಿಗಳಿದ್ದಾರೆ. ಹೊಸ ಬಂಗಲೆ ನಿರ್ಮಾಣ ಕಾರ್ಯ ಆರಂಭವಾದರೂ 2 ವರ್ಷಗಳ ಕಾಲದವರೆಗೂ ಕಾಮಗಾರಿ ಪೂರ್ಣಗೊಳ್ಳುವುದಿಲ್ಲ. ಅಲ್ಲಿ ತನಕ ಶಾಸಕರಿಗೆ ಸೂಕ್ತ ವಸತಿ ವ್ಯವಸ್ಥೆ ಒದಗಿಸಲೇಬೇಕು ಎಂದು ವಸತಿ ಸಚಿವ ದಾವೋದರ್ ರೌತ್ ಹೇಳಿದ್ದಾರೆ.

ಸುಮಾರು 307.73 ಕೋಟಿ ರು ವೆಚ್ಚದಲ್ಲಿ ಸುಸಜ್ಜಿತ 325 ಡುಪ್ಲೆಕ್ಸ್ ಬಂಗಲೆಗಳನ್ನು ಶಾಸಕರ ವಸತಿಗಾಗಿ ನಿರ್ಮಿಸಲು ಕ್ಯಾಬಿನೆಟ್ ಈಗಾಗಲೇ ಒಪ್ಪಿಗೆ ನೀಡಿದೆ. ಮನೆ ಕಟ್ಟಿದ ಮೇಲೆ ಬಿಹಾರದ ಶಾಸಕರು ಗೃಹ ಪ್ರವೇಶ ಮಾಡುವುದೊಂದೇ ಬಾಕಿ.

English summary
The Nitish Kumar government in Bihar has decided to dole out a sum of Rs.28,500 per month as house rent to state legislators whose quarters will be razed shortly to make way for swanky duplex bungalows.reports India Today
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X