• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪರಲೋಕದ ರಂಗಪ್ರವೇಶ ಮಾಡಿದ ನಾಗರತ್ನಮ್ಮ

By Mahesh
|
Google Oneindia Kannada News
ಬೆಂಗಳೂರು, ಅ.7: ಹಿರಿಯ ರಂಗಭೂಮಿ ಕಲಾವಿದೆ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಆರ್. ನಾಗರತ್ನಮ್ಮ ಇಹಲೋಕದ ನಾಟಕ ಮುಗಿಸಿದ್ದಾರೆ. ಕೆಲಕಾಲದಿಂದ ಅಸ್ವಸ್ಥತೆಯ ಬಳಿಕ ರಾಜಾಜಿನಗರದಲ್ಲಿನ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.

ಪುರುಷರಿಗೆ ಸರಿಸಮಾನರಾಗಿ ನಾಟಕಸಂಸ್ಥೆ ಕಟ್ಟಿ ಮಹಿಳೆಯರಿಂದಲೇ ನಾಟಕ ಮಾಡಿಸಿ ಪುರುಷ ಪಾತ್ರಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡಿದ್ದ ನಾಗರತ್ನಮ್ಮ ಅವರು 'ಭೀಮನ ಪಾತ್ರಧಾರಿ ನಾಗರತ್ನಮ್ಮ' ಎಂದೇ ಹೆಸರುವಾಸಿಯಾಗಿದ್ದರು.

ಇದಲ್ಲದೆ ನಾಗರತ್ನಮ್ಮನವರು "ಶ್ರೀ ಕೃಷ್ಣ ಗಾರುಡಿ" ನಾಟಕದಲ್ಲಿ ಮಾಡುತ್ತಿದ್ದ ಭೀಷ್ಮ, "ಶ್ರೀ ಕೃಷ್ಣ ಲೀಲೆ" ನಾಟಕದಲ್ಲಿ ಮಾಡುತ್ತಿದ್ದ ಕಂಸ,"ರಾಮಾಯಣ" ನಾಟಕದಲ್ಲಿ ಮಾಡುತ್ತಿದ್ದ ದಶರಥ ಮತ್ತು ರಾವಣ, "ದಾನಶೂರ ಕರ್ಣ" ನಾಟಕದಲ್ಲಿ ಮಾಡುತ್ತಿದ್ದ ದುರ್ಯೋಧನನ ಪಾತ್ರ ಬಹಳ ಜನಪ್ರಿಯವಾಗಿದೆ.

ಈ ವರ್ಷದ ಏಪ್ರಿಲ್‌ನಲ್ಲಿ ಆಗಿನ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಂದ ಪದ್ಮಶ್ರೀ ಪ್ರಶಸ್ತಿಯನ್ನು ನಾಗರತ್ನಮ್ಮ ಸ್ವೀಕರಿಸಿದ್ದರು.

1958ರಲ್ಲಿ ಸ್ತ್ರೀ ನಾಟಕ ಮಂಡಳಿ ಎಂಬ ಹೊಸ ಪರಿಕಲ್ಪನೆಯಾಂದಿಗೆ ನಾಗರತ್ನಮ್ಮ ಅವರು ಸಂಪೂರ್ಣ ಮಹಿಳೆಯರೇ ನಿರ್ವಹಿಸುವ, ಅಭಿನಯಿಸುವ ನಾಟಕ ತಂಡವನ್ನು ಕಟ್ಟಿ ಆ ಮೂಲಕ ಕರ್ನಾಟಕ ರಂಗಭೂಮಿಯಲ್ಲಿ ಒಂದು ದಾಖಲೆಯನ್ನು ಸ್ಥಾಪಿಸಿದವರು.

ನಾಗರತ್ನಮ್ಮ ಅವ ರಮೊದಲ ನಾಟಕ ಸಂಸಾರ ನೌಕಾ. 15-20 ವರ್ಷಕಾಲ ನಿರ್ವಹಿಸಿದ್ದು ಮಹಿಳಾ ಪಾತ್ರಗಳು. ರಾಜಕುಮಾರ್‌ ಮುಂತಾದ ದಿಗ್ಗಜರೊಡನೆಯೂ ಅಭಿನಯ. ಮಂಜುನಾಥ ಕೃಪಾಪೋಷಿತ ನಾಟಕ ಸಂಸ್ಥೆ, ಚಾಮುಂಡೇಶ್ವರಿ ನಾಟಕ ಸಂಸ್ಥೆ, ಹಿರಣ್ಣಯ್ಯ ಮಿತ್ರ ಮಂಡಲಿ, ಎಂ.ವಿ. ಸುಬ್ಬಯ್ಯನಾಯ್ಡು ಅವರ ಕಂಪನಿ, ಹೀಗೆ ಹಲವಾರು ಕಂಪನಿಗಳಲ್ಲಿ ಅಭಿನಯಿಸಿದ್ದಾರೆ.

ಕೃಷ್ಣಗಾರುಡಿ ನಾಟಕದಲ್ಲಿ ಭೀಮ, ಶ್ರೀ ಕೃಷ್ಣಲೀಲೆಯಲ್ಲಿ ಕಂಸ, ರಾಮಾಯಣದಲ್ಲಿ ದಶರಥ ಮತ್ತು ರಾವಣ, ದಾನಶೂರ ಕರ್ಣದಲ್ಲಿ ದುರ್ಯೋಧನ ಮತ್ತು ಇನ್ನಿತರ ನಾಟಕದಲ್ಲಿ ನಟಿಸಿರುವ ನಾಗರತ್ನಮ್ಮನವರ ಅಭಿನಯ ಇಂದಿಗೂ ಜನಪ್ರಿಯವಾಗಿದೆ.

ದೇಶದ ಇತರೆ ನಗರಗಳಲ್ಲೂ ನಾಟಕಗಳನ್ನು ಪ್ರದರ್ಶಿಸಿರುವ ಅವರಿಗೆ ಪದ್ಮಶ್ರೀ, ಕೇಂದ್ರ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ, ಗುಬ್ಬಿ ವೀರಣ್ಣ ನಾಟಕ ಅಕಾಡೆಮಿ ಪ್ರಶಸ್ತಿ, ರವೀಂದ್ರ ರತ್ನ ನಾಟಕ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಲಭಿಸಿವೆ.

English summary
Vetern Theater person R Nagarathnamma passed away today(Oct.7) in Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X