ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶಾಂಗ ಬೆಡಗಿ ಹೀನಾ ಉಡುಪು, ಎಸ್ಎಂ ಕೃಷ್ಣರ ವಿಗ್ಗೂ

By Srinath
|
Google Oneindia Kannada News

ಇಸ್ಲಾಮಾಬಾದ್, ಅ.6 : ಪಾಕಿಸ್ತಾನದ ಬೆಡಗಿ 'ಎಕ್ಸಟರ್ನಲ್ ಅಫೇರ್ಸ್ ರಾಣಿ' ಹೀನಾ ರಬ್ಬಾನಿ ಖಾರ್ ಮತ್ತು ನಮ್ಮ ಮಂಡ್ಯದ ಸಂಸದ ಎಸ್ ಎಂ ಕೃಷ್ಣ ಅವರ ಜೀವನಶೈಲಿ ಬಗ್ಗೆ ಪಾಕ್ ವಿದೇಶಾಂಗದ ಮಾಜಿ ಕಾರ್ಯದರ್ಶಿ ಶಂಷಾದ್ ಅಹ್ಮದ್ ಅವರು ಕಿಡಿಕಾರಿದ್ದಾರೆ.

ಗಮನಾರ್ಹವೆಂದರೆ ಇವರಿಬ್ಬರೂ ಪ್ರಸ್ತುತ ತಮ್ಮ ತಮ್ಮ ರಾಷ್ಟ್ರಗಳ ವರ್ಚಸ್ವಿ ವಿದೇಶಾಂಗ ಸಚಿವರು. ಹಾಗಾಗಿಯೇ ಈ ಮಾಜಿ ಕಾರ್ಯದರ್ಶಿ ಅವರಿಬ್ಬರ ವಿರುದ್ಧ ಅಸಮಾಧಾನಗೊಂಡಿರುವುದು.

hina-krishna-criticised-extravagant-lifestyle-shamshad

ವಿದೇಶಾಂಗ ಸಚಿವೆ ಹೀನಾ ರಬ್ಟಾನಿ ಖಾರ್‌ ಅವರದು ದುಂದುವೆಚ್ಚದ ಜೀವನಶೈಲಿ ಎಂದಿದ್ದರೆ ಭಾರತದ ವಿದೇಶಾಂಗ ಸಚಿವ ಎಸ್‌. ಎಂ. ಕೃಷ್ಣ ಅವರು ಪದೇ ಪದೇ ವಿಗ್‌ ಬಣ್ಣ ಬದಲಾಯಿಸುತ್ತಿರುವುದನ್ನು ವಿಗ್‌ ರಾಜತಾಂತ್ರಿಕತೆ (wig diplomacy) ಎಂದು ಶಂಷಾದ್ ಕರೆ (ಜರಿ)ದಿದ್ದಾರೆ.

ವಿದೇಶಾಂಗ ಸಚಿವರಂತಹ ಜವಾಬ್ದಾರಿಯುತ ಹುದ್ದೆಯಲ್ಲಿರುವ ಇವರಿಬ್ಬರೂ ತಮ್ಮ ಉಡುಪು, ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಾಗ ಇರಬೇಕಾದ ಗಾಂಭೀರ್ಯ, ನಡೆನುಡಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿಕೊಳ್ಳುವ ಅಗತ್ಯವಿದೆ ಎಂದು ಶಂಷಾದ್ ಅಹ್ಮದ್ 'ಉಚಿತ' ಸಲಹೆ ನೀಡಿದ್ದಾರೆ.

ಹೀನಾ ರಬ್ಟಾನಿ ಖಾರ್‌ ಅವರು ಅತ್ಯಾಧುನಿಕ ಫ್ಯಾಷನ್‌ ಉಡುಪುಗಳು, ಅವುಗಳ ಬಣ್ಣ, ವಿನ್ಯಾಸ, ಅವರು ಹಿಡಿದುಕೊಳ್ಳುವ ಬ್ಯಾಗ್‌, ಧರಿಸುವ ಚಪ್ಪಲಿ ಇತ್ಯಾದಿಗಳನ್ನೆಲ್ಲ ಅವರು ಜಾಲಾಡಿದ್ದಾರೆ. ಇಬ್ಬರಿಗೂ Foreign Service Academyಯಲ್ಲಿ ಅಲ್ಪಾವಧಿ ಶಿಷ್ಟಾಚಾರ ಪಾಠ ಹೇಳಿಕೊಡುವ ಅಗತ್ಯವಿದೆ ಎಂದಿದ್ದಾರೆ.

ಬಿಲಾವಲ್‌ ಜತೆಗಿನ ಪ್ರಣಯ ಸಂಬಂಧಗಳ ವದಂತಿಗಳಿಂದಾಗಿ ಚರ್ಚೆಯ ಕೇಂದ್ರ ಬಿಂದುವಾಗಿರುವ ಹೀನಾ ಈ ವದಂತಿ ಬಹಿರಂಗವಾದ ಬಳಿಕ ಮಾಧ್ಯಮದವರ ಕಣ್ಣಿಗೆ ಬಿದ್ದಿಲ್ಲ. ತುಂಟ ಬಿಲಾವಲ್‌ ಮತ್ತು ಅನುಭವಿ ಹೀನಾ ಜೋಡಿಯ ಬಗ್ಗೆ ವಿಶ್ವದಾದ್ಯಂತ ಪಡ್ಡೆಗಳು ಕುಹಕವಾಡುತ್ತಿದ್ದಾರೆ.

ಬಿಲಾವಲ್‌ ಮತ್ತು ಹೀನಾ ಜೋಡಿಯನ್ನು 'ಕೋಯಿ ಪತ್ತರ್ ಸೆ ಮಾರೋ' ಎನ್ನುತ್ತಾ ಸಾರ್ವಜನಿಕವಾಗಿ ಕಲ್ಲು ಹೊಡೆದು ಸಾಯಿಸಬೇಕು ಎಂದು ಇಸ್ಲಾಮಿಕ್ ಧಾರ್ಮಿಕ ಮುಖಂಡರು ಇತ್ತೀಚೆಗೆ ಹೇಳಿದ್ದಾರೆ.

English summary
Indo-Pak Foreign Ministers Hina Rabbani (for her glitzy colour or designer accessories ) and SM Krishna (for his wig diplomacy) lashed out for extravagant lifestyle by Former Pakistan foreign secretary Shamshad Ahmad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X