ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀರು ಸಾಲುತ್ತಿಲ್ಲ ತಂಜಾವೂರಲ್ಲಿ ತಮಿಳರ ಆಕ್ರೋಶ

By Mahesh
|
Google Oneindia Kannada News

Protest in TN demanding 2 tmc Cauvery water
ತಂಜಾವೂರು, ಅ.5: ಕರ್ನಾಟಕದ ಕೃಷ್ಣರಾಜಸಾಗರ ಅಣೆಕಟ್ಟಿನಿಂದ ಕೇಳಿದ್ದಕ್ಕಿಂತ ಹೆಚ್ಚು ಕಾವೇರಿ ನೀರು ಹರಿಸಿದ್ದರೂ ತಮಿಳರ ಕ್ಯಾತೆ ಮುಂದುವರೆದಿದೆ. ಕರ್ನಾಟಕದಿಂದ ಬರುತ್ತಿರುವ ನೀರು ನಮ್ಮ ಬೆಳೆಗೆ ಸಾಲುತ್ತಿಲ್ಲ ಎಂದು ತಂಜಾವೂರಿನ ರೈತ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಜೋರಾಗಿ ಪ್ರತಿಭಟನೆ ನಡೆಸಿದ್ದಾರೆ.

9 ಸಾವಿರ ಕ್ಯೂಸೆಕ್ಸ್ (cubic feet per second) ಯಾವ ಮೂಲೆಗೂ ಸಾಲುವುದಿಲ್ಲ 2 ಟಿಎಂಸಿ (thousand million cubic feet) ನೀರು ಹರಿಸಬೇಕು ಎಂದು ವಿವಿಧ ಸಂಘಟನೆಗಳು ಆಗ್ರಹಿಸಿದೆ.

ಎಂಡಿಎಂಕೆ,, ವಿಡುದಲೈ ಸಿರುಥೈಗಳ್ ಅಮೈಪ್ಪು ಹಾಗೂ ನಾಮ್ ತಮಿಳರ್ ಇಯಾಕ್ಕಮ್ ಮುಂತಾದ ಸಂಘಟನೆಗಳು ತಂಜಾವೂರು, ತಿರುವರೂರು, ಕುಂಭಕೋಣಂ, ನಾಗಪಟ್ಟಣ್ಣಂ ಹಾಗೂ ಇನ್ನಿತರ ಕಾವೇರಿ ಜಲಾನಯನ ಪ್ರದೇಶದ ಹತ್ತಿರ ಪ್ರತಿಭಟನೆ ನಡೆಸಿದ್ದಾರೆ.

ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಕರ್ನಾಟಕ ಕಾವೇರಿ ನೀರನ್ನು ಹರಿಸಿರುವುದರಿಂದ ಮೆಟ್ಟೂರು ಅಣೆಕಟ್ಟಿನಲ್ಲಿ ಒಳ ಹರಿವು ಹೆಚ್ಚಿರುವುದು ಒಳ್ಳೆ ಸಂಗತಿ ಅದರೆ, ನದಿ ಪಾತ್ರಗಳಲ್ಲಿ ಮರಳು ಗಣಿಗಾರಿಕೆ ಅಧಿಕವಾಗಿರುವ ಹಿನ್ನೆಲೆಯಲ್ಲಿ ಕಾಲುವೆಗಳಿಗೆ ಇನ್ನೂ ನೀರು ಹರಿದು ಬಂದಿಲ್ಲ.

ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಒಳಹರಿವು ಬಂದರೆ ಎಲ್ಲೆಡೆ ರೈತರು ತಮ್ಮ ಚಟುವಟಿಕೆ ಆರಂಭಿಸಬಹುದು ಇಲ್ಲದಿದ್ದರೆ ಕಷ್ಟ. ಸುಮಾರು 15 ಲಕ್ಷ ಎಕರೆ ಭೂಮಿಗೆ ನೀರು ಬೇಕಾಗಿದೆ ಎಂದು ಸಂಘಟನೆಗಳು ಹೇಳಿದೆ.

ತಂಜಾವೂರಿನಲ್ಲಿ ಮರಳು ಗಣಿಗಾರಿಕೆ ಮಾಫಿಯಾದಿಂದ ಅನೇಕ ಕಡೆ ನೀರು ಸರಿಯಾಗಿ ಹರಿಯದೆ ತೊಂದರೆ ಉಂಟಾಗಿರುವುದನ್ನು ಜಲಮಂಡಳಿ ಅಧಿಕಾರಿಗಳು ಕೂಡಾ ಒಪ್ಪಿಕೊಂಡಿದ್ದಾರೆ.

ಸುಪ್ರೀಂಕೋರ್ಟ್ ನಿರ್ದೇಶನದಂತೆ ತಮಿಳುನಾಡಿಗೆ ನೀರು ಬಿಡಲಾಗಿದೆ. ಆದರೆ ಕಾವೇರಿ ನೀರು ಆ ಭಾಗದ ರೈತರ ಉಪಯೋಗಕ್ಕೆ ಇನ್ನೂ ಬಂದಿಲ್ಲ ಎಂದು ವರದಿಯಾಗಿದೆ
.
ಅಕ್ರಮ ಮರಳು ಗಣಿಗಾರಿಕೆಯಿಂದಾಗಿ ಮುಖ್ಯ ನಾಲೆಗಳು ಗುಂಡಿ ಬಿದ್ದಿವೆ. ಮುಖ್ಯ ನಾಲೆಗಳ ಮಟ್ಟ ಎರಡರಿಂದ ಮೂರು ಅಡಿಗಳಷ್ಟು ಆಳಕ್ಕೆ ಕುಸಿದಿದೆ.

ಪರಿಣಾಮವಾಗಿ ಮುಖ್ಯ ನಾಲೆಯಲ್ಲಿ ಎರಡು ಅಡಿ ಕೆಳಗೆ ನೀರು ಹರಿಯುತ್ತಿರುವುದರಿಂದ ಅದು ನೀರಾವರಿ ನಾಲೆಗಳಿಗೆ ತಲುಪುತ್ತಿಲ್ಲ. ನೀರು ಪೋಲಾಗುತ್ತಿರುವುದರಿಂದ ರೈತರೂ ಕಂಗಾಲಾಗಿದ್ದಾರೆ. ಎಂದು ಡಿಎಂಕೆ ಮುಖಂಡ ಕರುಣಾನಿಧಿ ಕೂಡಾ ಕಳವಳ ವ್ಯಕ್ತಪಡಿಸಿದ್ದಾರೆ.

English summary
Farmers and members of various political outfits blocked trains at various areas in Southern districts on Thursday, demanding release of two tmc (thousand million cubic feet) Cauvery water for delta areas as against 9,000 cusecs (cubic feet per second) released by Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X