ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಲಿಸುತ್ತಿದ್ದ ಕಾರಿಂದ ಪತ್ನಿಯನ್ನು ರಸ್ತೆಗೆ ನೂಕಿದ ಟೆಕ್ಕಿ

By Srinath
|
Google Oneindia Kannada News

couple-rage-chennai-techie-push-wife-out-of-moving-car
ಚೆನ್ನೈ, ಅ.5: ಇಲ್ಲಿನ ಪಾಂಡಿ ಬಜಾರಿನಲ್ಲಿ ಪತ್ನಿಯೊಂದಿಗೆ ಕಾರಿಂದ ಹೋಗುತ್ತಿದ್ದ ಟೆಕ್ಕಿಯೊಬ್ಬ ಆಕೆಯನ್ನು ರಸ್ತೆಯ ಮೇಲೆ ನೂಕಿದ ಘಟನೆ ಬುಧವಾರ ಸಂಜೆ ನಡೆದಿದೆ.

ಈ ಸಂಬಂಧ ಶಾಸ್ತ್ರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ 29 ವರ್ಷದ ಬಾಧಿತ ಮಹಿಳೆಯ ತಲೆಗೆ ತೀವ್ರ ಗಾಯಗಳಾಗಿರುವುದು ಕಂಡುಬಂದಿದೆ.

ಬಾಧಿತ ಮಹಿಳೆಯು ಚೂಳೈಮೇಡುನಲ್ಲಿ ಕಾರು ಕಂಪನಿಯೊಂದರಲ್ಲಿ ಮಾನವ ಸಂಪನ್ಮೂಲ ವ್ಯವಸ್ಥಾಪಕಿಯಾಗಿರುವ ಏಂಜಲೀನಾ ಪುನೀತಾ ಎಂದು ಪೊಲೀಸರು ಹೇಳಿದ್ದಾರೆ. ಈಕೆಯ ಪತಿ 32 ವರ್ಷದ ರಾಜ್ ಕುಮಾರ್ ವಡಪಳನಿ ಎಂಬಲ್ಲಿ ಸಾಫ್ಟ್ ವೇರ್ ಕಂಪನಿಯಲ್ಲಿದ್ದಾರೆ.

ದಂಪತಿ ಕಾರಿನಲ್ಲಿ ಇಲ್ಲಿಯಾಟ್ಸ್ ಬೀಚ್ ನಿಂದ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ. ಸಣ್ಣ ವಿಷಯಕ್ಕೆ ಆರಂಭವಾದ ದಂಪತಿ ನಡುವಣ ಜಗಳ ವಿಕೋಪಕ್ಕೆ ಹೋಗಿ ಪತ್ನಿ ಬೀದಿಗೆ ಬಿದ್ದಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ಆರೋಪಿ ರಾಜ್ ಕುಮಾರ್ ಮೊದಲು ಕಾರಿನಲ್ಲೇ ಪತ್ನಿಯ ಮೇಲೆ ಹಲ್ಲೆ ಮಾಡಿದ್ದಾನೆ. ಅದಕ್ಕೆ ಏಂಜಲೀನಾ ಪುನೀತಾ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದ್ದಾಳೆ. ಆ ವೇಳೆ ವ್ಯಘ್ರಗೊಂಡ ರಾಜ್ ಕುಮಾರ್ ಕಾರಿನಿಂದ ಪತ್ನಿಯನ್ನು ಹೊರಕ್ಕೆ ತಳ್ಳಿಬಿಟ್ಟಿದ್ದಾನೆ. ಇದರಿಂದ ರಸ್ತೆಗುರುಳಿದ ಏಂಜಲೀನಾಗೆ ಬಾರಿ ಗಾಯಗಳಾಗಿವೆ. ಆದರೆ ಅಸಾಮಿ ಪತಿರಾಯ ಕಾರನ್ನು ನಿಲ್ಲಿಸದೆ ಹಾಗೆ ಹೊರಟುಹೋಗಿದ್ದಾನೆ.

ಆರೋಪಿ ರಾಜ್ ಕುಮಾರ್ ಇನ್ನೂ ನಾಪತ್ತೆಯಾಗಿದ್ದಾನೆ. ಮಹಿಳೆಯೊಬ್ಬರು ಕಾರಿನಿಂದ ಕೆಳಗೆ ಬಿದ್ದಿದ್ದನ್ನು ನೋಡಿದ ಸೆಕ್ಯುರಿಟಿ ಗಾರ್ಡ್ ಒಬ್ಬ ತಕ್ಷಣ ಆಕೆಯ ಸಹಾಯಕ್ಕೆ ಧಾವಿಸಿ, ಆಸ್ಪತ್ರೆಗೆ ದಾಖಲಿಸಿದ್ದಾನೆ.

ಮೂರು ವರ್ಷದಿಂದ ನನ್ನ ಪತಿರಾಯ ನನ್ನ ಮೇಲೆ ದೌರ್ಜನ್ಯ ಎಸಗುತ್ತಿದ್ದಾನೆ. ಹೊಡೆದೂ ಬಡಿದೂ ಮಾಡುತ್ತಿದ್ದಾನೆ ಎಂದು ಬಾಧಿತ ಮಹಿಳೆ ಏಂಜಲೀನಾ ಪುನೀತಾ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ರಾಜ್ ಕುಮಾರನ ಪತ್ತೆಗೆ ಬಲೆ ಬೀಸಿದ್ದಾರೆ.

English summary
Couple rage- Chennai techie pushes wife out of moving car. A 29-year-old woman, Angelin Punitha, a HR professional from Choolaimedu, has complained to police that she was pushed out of a moving car by her husband Raj Kumar (32), also a HR professional with a software firm in Vadapalani on Wednesday evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X