• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟೆಕ್ಕಿ ಮೇಲೆ ಅತ್ಯಾಚಾರ: ಸಿಇಒ ಅರೆಸ್ಟ್

By Srinath
|

ನೋಯ್ಡಾ, ಅ.4: ಮಾಹಿತಿ ತಂತ್ರಜ್ಞಾನ ಕಂಪನಿಯೊಂದರ ಮಾಲೀಕನನ್ನು ಅತ್ಯಾಚಾರ ಆರೋಪದಡಿ ಪೊಲೀಸರು ಬುಧವಾರ ಬಂಧಿಸಿದ್ದಾರೆ. ನೋಯ್ಡಾದಲ್ಲಿರುವ Auric Solutions Private Limited ಎಂಬ ಕಂಪನಿಯ ಸಿಇಒ ತನ್ನದೇ ಕಂಪನಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿರುವ ಟೆಕ್ಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

CEO ಆಶೀಷ್ ಪಾಂಡೆ ತನ್ನ ಕೈಕೆಳಗಿನ ಮಹಿಳಾ ಅಸಿಸ್ಟೆಂಟ್ ಮ್ಯಾನೇಜರ್ ಅವರನ್ನು ಲಖ್ನೋ ಮತ್ತು ಚಂಡೀಗಢಕ್ಕೆ ಬಿಸಿನೆಸ್ ಟ್ರಿಪ್ ಗೆ ಕರೆದುಕೊಂಡು ಹೋಗಿದ್ದ. ಪ್ರವಾಸದಲ್ಲಿರುವಾಗ ಲಖ್ನೋದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಕಳೆದ ಭಾನುವಾರ ಟ್ರಿಪ್ ನಲ್ಲಿದ್ದಾಗ ಹೋಟೆಲೊಂದರಲ್ಲಿ ಮತ್ತು ಬರಿಸುವ ಪಾನೀಯ ಕುಡಿಸಿ, ಪ್ರಜ್ಞೆ ತಪ್ಪಿಸಿದ್ದಾನೆ. ಆನಂತರ ನನ್ನ ಮೇಲೆ ಲೈಂಗಿಕವಾಗಿ ಆಕ್ರಮಣ ನಡೆಸಿದ್ದಾನೆ. ಅದನ್ನು MMS ಮಾಡಿರುವುದಾಗಿಯೂ ಹೇಳಿದ್ದಾನೆ. ಮತ್ತು ಅದನ್ನೇ ನೆಪವಾಗಿಟ್ಟುಕೊಂಡು ನನ್ನನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಸದರಿ ಮಹಿಳಾ ಅಸಿಸ್ಟೆಂಟ್ ಮ್ಯಾನೇಜರ್ ಪೊಲೀಸರ ಮುಂದೆ ಅಲವತ್ತುಕೊಂಡಿದ್ದಾರೆ.

ಮೂಲತಃ ಲೂಧಿಯಾನಾದವರಾದ ಬಾಧಿತೆ ಅಸಿಸ್ಟೆಂಟ್ ಮ್ಯಾನೇಜರ್, ನಾಲ್ಕು ತಿಂಗಳ ಹಿಂದೆ ಆಶೀಷ್ ಪಾಂಡೆ ಮಾಲೀಕತ್ವದ Auric Solutions Private Limited ಸೇರಿಕೊಂಡಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The CEO of Auric Solutions, an IT company in Noida Sector-63, Ashish Pandey was arrested on Wednesday after a woman employee of the firm complained to police that she was raped by him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more