ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುರ್ಖಾ ನಿಷೇಧಕ್ಕೆ ದ.ಕ ಜಿಲ್ಲಾಧಿಕಾರಿ ತಡೆ

By Mahesh
|
Google Oneindia Kannada News

Dakshina Kannada DC Squashes Burqa Ban
ಮಂಗಳೂರು, ಅ.3: ಬುರ್ಖಾ ಧರಿಸಿಕೊಂಡು ಕಾಲೇಜು ಆವರಣದೊಳಗೆ ಪ್ರವೇಶಿಸಬಾರದು ಎಂದು ಕುಕ್ಕೆ ಸುಬ್ರಮಣೇಶ್ವರ ಕಾಲೇಜು
ಆಡಳಿತ ಸಮಿತಿ ನೀಡಿದ ಆದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿದಿಕಾರಿ ಚನ್ನಪ್ಪ ಗೌಡ ತಡೆ ಹೇರಿದ್ದಾರೆ.

ಕುಕ್ಕೆ ಸುಬ್ರಮಣ್ಯ ಯಥಾಸ್ಥಿತಿ ಕಾಪಾಡಿಕೊಂಡು ಬರುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಹೀಗಾಗಿ ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಖಾ ಧರಿಸಲು ಅಡ್ಡಿಯಿಲ್ಲ.

ಕಾಲೇಜಿನ ಆಡಳಿತ ಸಮಿತಿ ಸೆ.22 ರಂದು ಕಾಲೇಜು ಆವರಣದೊಳಗಡೆ ಏಕಾಏಕಿ ಮುಸ್ಲಿಂ ಬುರ್ಖಾ ಧಾರಣೆಗೆ ನಿರ್ಬಂಧ ಹೇರಿತು. ಬುರ್ಖಾ ಧರಿಸಿಕೊಂಡು ಬಂದರೂ ಅದನ್ನು ಕಾಲೇಜು ಆವರಣ ಪ್ರವೇಶಿಸುವ ಮುನ್ನ (ಹೊರಗಡೆ) ತೆಗೆದಿಟ್ಟು ಬರಬೇಕು' ಎಂದು ವಿದ್ಯಾರ್ಥಿನಿಯರಿಗೆ
ಸೂಚನೆ ನೀಡಲಾಗಿತ್ತು .

ಇದಕ್ಕೆ ಕಾಲೇಜಿನಲ್ಲಿ ಕಲಿಯುತ್ತಿರುವ ಮುಸ್ಲಿಂ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕಾಲೇಜು ದೇವಸ್ಥಾನದ ಆಡಳಿತ ಸಮಿತಿ ಮೂಲಕ
ಚಾಲನೆಯಲ್ಲಿರುವುದರಿಂದ ಸಮಿತಿ ಆದೇಶ ಪಾಲಿಸಬೇಕಾಗುತ್ತದೆ. ನಾವೇನೂ ಮಾಡುವಂತಿಲ್ಲ. ಎಲ್ಲ 15 ಮುಸ್ಲಿಂವಿದ್ಯಾರ್ಥಿನಿಯರನ್ನು
ಚೇಂಬರಿಗೆ ಕರೆಸಿ, ಸಮಿತಿ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ತಿಳಿಸಲಾಗಿದೆ' ಎಂದು ಕಾಲೇಜು ಪ್ರಾಂಶುಪಾಲ ವಿವರಿಸಿದ್ದರು.

ಬುರ್ಖಾ ತೆಗೆದು ಕಾಲೇಜು ಆವರಣದೊಳಗೆ ಪವೇಶಿಸುವ ಬದಲಾಗಿ ಕಾಲೇಜಿನೊಳಗೆ ಬುರ್ಖಾ ತೆಗಯಲು ಕೊಠಡಿಯೊಂದು
ಗೊತ್ತುಪಡಿಸಬೇಕು ಎಂದು ಮುಸ್ಲಿಂ ವಿದ್ಯಾರ್ಥಿನಿಯರು ಕೇಳಿಕೊಂಡಿದ್ದರು. ಇದೇ ಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲೆಯ ಇತರೆ ಕಾಲೇಜು, ಶಾಲೆಗಳಲ್ಲೂ ಅನುಸರಿಸಲಾಗುತ್ತಿದೆ. ಆದರೆ, ಸಮಿತಿ ಅಧ್ಯಕ್ಷೆ ಕೃಷ್ಣಪ್ರಸಾದ್ ಮಡ್ತಿಲ ಅವರು ನಿರಾಕರಿಸಿದ್ದರು.

ಸಂಘ ಪರಿವಾರದವರಿಗೆ ಒತ್ತು, ವಿದ್ಯಾಸಂಸ್ಥೆಯ ಆವರಣದೊಳಗೆ ಬುರ್ಖಾ ನಿಷೇಧ ಇವುಗಳು ದೇಶದ ಸಾರ್ವತ್ರಿಕ ಶಿಕ್ಷಣ ನೀತಿಗೆ ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಮುಖಂಡರು ಖಂಡಿಸಿದ್ದರು.

ಕಾಲೇಜಿನ ನಿರ್ಧಾರದ ಹಿಂದೆ ವಿಎಚ್‌ಪಿ, ಬಜರಂಗ ದಳ ಮತ್ತು ಹಿಂದೂ ಜಾಗರಣ ವೇದಿಕೆಯ ಕುಮ್ಮಕ್ಕು ಇದೆ' ಎಂದು ಆರೋಪಿಸಿ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದರು.

English summary
The Dakshina Kannada District administration has directed the Kukke Shri Subrahmanyeshwara (KSS) College of Sri Kukke Subrahmanya Temple administration not to implement ban on burqa on its campus
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X