ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಚ್ಎಸ್ ಬಿಸಿ ಬೋರ್ಡಿಗೆ ಎನ್ನಾರೆನ್ ಗುಡ್ ಬೈ

By Mahesh
|
Google Oneindia Kannada News

Narayana Murthy to exit HSBC board
ಬೆಂಗಳೂರು, ಸೆ.30: ಜಾಗತಿಕ ಮಟ್ಟದಲ್ಲಿ ಪ್ರಮುಖ ಬ್ಯಾಂಕ್ ಆಗಿ ಗುರುತಿಸಿಕೊಂಡಿರುವ ಎಚ್ ಎಸ್ ಬಿಸಿ ಸಂಸ್ಥೆ ಬೋರ್ಡ್ ನಿಂದ ಇನ್ಫೋಸಿಸ್ ಸಹ ಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರು ಹೊರಬೀಳಲಿದ್ದಾರೆ ಎಂದು ಸಂಸ್ಥೆ ಹೇಳಿದೆ. 2012ರ ಅಂತ್ಯಕ್ಕೆ ಎಚ್ ಎಸ್ ಬಿಸಿ ಮಂಡಳಿ ನಿರ್ದೇಶಕ ಸ್ಥಾನದಿಂದ ನಿವೃತ್ತಿ ಪಡೆಯಲು ಇನ್ಫಿ ಮೂರ್ತಿ ಬಯಸಿದ್ದಾರೆ ಎಂದು ತಿಳಿದು ಬಂದಿದೆ.

ಎಚ್ಎಸ್ ಬಿಸಿ ಹೋಲ್ಡಿಂಗ್ ಸಂಸ್ಥೆ ಕ್ರೆಡಿಟ್ ಸುಸೈ ಸಮೂಹದ ಮಾಹಿ ಮುಖ್ಯ ಆರ್ಥಿಕ ಅಧಿಕಾರಿ ರೆನಟೊ ಫಾಸ್ಸೊಬಿಂಡ್ ಅವರನ್ನು ನಿರ್ದೇಶಕನ ಸ್ಥಾನಕ್ಕೆ ಜನವರಿ 1, 2013ರಿಂದ ನೇಮಿಸಿಕೊಳ್ಳುವ ಮಾಹಿತಿ ಹೊರಬಿದ್ದಿದೆ. ಎಚ್ ಎಸ್ ಬಿಸಿ ನಿರ್ದೇಶಕರಾಗಿ ಡಿಸೆಂಬರ್ 31ಕ್ಕೆ ಇನ್ಫಿ ಮೂರ್ತಿ ಅವರ ಅವಧಿ ಮುಕ್ತಾಯವಾಗಲಿದೆ.

ಎನ್ ಆರ್ ನಾರಾಯಣ ಮೂರ್ತಿ ಅವರು ನಿವೃತ್ತಿ ಬಯಸುತ್ತಿರುವುದಕ್ಕೆ ಸರಿಯಾದ ಕಾರಣಗಳು ಇನ್ನೂ ಸ್ಪಷ್ಟವಾಗಿಲ್ಲ. ಅವರ ಅಧಿಕಾರ ಅವಧಿ ಮುಕ್ತಾಯವಾಗಿದ್ದರೂ ಮುಂದಿನ ಅವಧಿಗೂ ಮುಂದುವರೆಯಬಹುದಾಗಿತ್ತು. ಅದರೆ, ಇತ್ತೀಚಿಗೆ ಎಚ್ಎಸ್ ಬಿಸಿ ಸಂಸ್ಥೆಯಲ್ಲಿ ಅದ ಬೆಳವಣಿಗೆಗಳು ಆರೋಪಗಳು ಮುಂತಾದವು ಎನ್ನಾರೆನ್ ಅವರನ್ನು ಬಾಧಿಸಿತ್ತು ಎನ್ನಲಾಗಿದೆ.

ಎಚ್ ಎಸ್ ಬಿಸಿ ಬ್ಯಾಂಕ್ ಇತ್ತೀಚಿಗೆ ಖಾಸಗಿ ವಲಯದ ಕರ್ನಾಟಕ ಬ್ಯಾಂಕಿನಲ್ಲಿದ್ದ ತನ್ನ ಪಾಲನ್ನು ಹಿಂದಕ್ಕೆ ಪಡೆಯುವುದಾಗಿ ಹೇಳಿಕೆ ನೀಡಿತ್ತು. ಏಕ್ಸಿಸ್ ಬ್ಯಾಂಕ್, ಯಸ್ ಬ್ಯಾಂಕ್ ಹಾಗೂ ಫೆಡರಲ್ ಬ್ಯಾಂಕ್ ನಲ್ಲಿದ್ದ ತನ್ನ ಪಾಲಿನ ಷೇರುಗಳನ್ನು ಮಾರಾಟ ಮಾಡಿದ್ದ ಎಚ್ ಎಸ್ ಬಿಸಿ ಈಗ ಕರ್ನಾಟಕ ಬ್ಯಾಂಕಿನಲ್ಲಿರುವ ಶೇ 4.46 ರಷ್ಟು ಪಾಲು ಅಂದರೆ 83.99 ಲಕ್ಷ ಷೇರುಗಳ ಮಾರಾಟಕ್ಕೆ ಮುಂದಾಗಿತ್ತು.

ಬ್ಯಾಂಕ್ ಮೇಲಿನ ಆರೋಪಗಳು: ಅಕ್ರಮ ಹಣ ರವಾನೆ, ಅಕ್ರಮ ಔಷಧಿ ಸಾಗಾಟಕ್ಕೆ ಎಚ್ಎಸ್ ಬಿಸಿ ಬ್ಯಾಂಕ್ ಬಳಕೆಯಾಗಿದೆ. ಉಗ್ರರ ಮನಿ ಲಾಂಡ್ರಿಂಗ್ ಚಟುವಟಿಕೆ ಹತ್ತಿಕ್ಕುವಲ್ಲಿ ಪ್ರತಿಷ್ಠಿತ ಬ್ಯಾಂಕ್ ಎಚ್ಎಸ್ ಬಿಸಿ ಸಂಪೂರ್ಣ ವಿಫಲವಾಗಿದೆ.

ಆಮೆರಿಕ ಮತ್ತು ಭಾರತ ಸೇರಿದಂತೆ ಜಗತ್ತಿನೆಲ್ಲೆಡೆ ಉಗ್ರರ ವ್ಯಾಪಕ ಜಾಲಕ್ಕೆ ಅಕ್ರಮ ಹಣ ವರ್ಗಾವಣೆ ಆಧಾರವಾಗಿದೆ. ಅಲ್ ಖೈದಾ ಉಗ್ರ ಸಂಘಟನೆಯ ಜಾಲದ ವ್ಯಕ್ತಿ ಸ್ಥಾಪಿತ ಸೌದಿ ಅರೇಬಿಯಾದ ಅಲ್ ರಝಿ ಬ್ಯಾಂಕ್(Al Rajhi Bank) ಜೊತೆ ಎಚ್ ಎಸ್ ಬಿಸಿ ವ್ಯವಹಾರ ಇಟ್ಟುಕೊಂಡಿದೆ.

ಸೌದಿ ಅರೇಬಿಯಾ, ಬಾಂಗ್ಲಾದೇಶ, ಸಿರಿಯಾ, ಕ್ಯೂಬಾ, ಮೆಕ್ಸಿಕೋ, ಇರಾನ್, ಉತ್ತರ ಕೊರಿಯಾ, ಬರ್ಮಾ, ಕೇಮ್ಯಾನ್ ಐಲ್ಯಾಂಡ್ಸ್, ಜಪಾನ್ ಮತ್ತು ರಷ್ಯಾದ ವಿವಿಧ ಸಂಸ್ಥೆಗಳ ಜತೆ ಈ ಬ್ಯಾಂಕ್ ಹಲವಾರು ಪ್ರಶ್ನಾರ್ಹ ಹಣಕಾಸಿನ ವ್ಯವಹಾರ ನಡೆಸಿದೆ.

ಭಯೋತ್ಪಾದಕರಿಗೆ ಹಣಕಾಸು ನೀಡುತ್ತಿರುವ ಸೌದಿ ಅರೇಬಿಯಾ ಮತ್ತು ಬಾಂಗ್ಲಾದೇಶದ ಕೆಲವು ಬ್ಯಾಂಕುಗಳಿಗೆ ಎಚ್ಎಸ್.ಬಿಸಿ ಬ್ಯಾಂಕ್ ಮೂಲಕ ಭಾರಿ ಮೊತ್ತದ ಅಮೆರಿಕನ್ ಡಾಲರ್ ಗಳನ್ನು ವರ್ಗಾಯಿಸಿರುವುದು ಕಂಡುಬಂದಿದೆ.

ಹಣಕಾಸು ಭಯೋತ್ಪಾದನೆ ನಡೆಸುತ್ತಿರುವ ಸೌದಿ ಅರೇಬಿಯಾದ ಅಲ್ ರಝಿ ಬ್ಯಾಂಕಿಗೆ ಭಾರತದ ರೂಪಾಯಿಯನ್ನು ಪೂರೈಸಲು 2009ರಲ್ಲಿ ಎಚ್.ಎಸ್.ಬಿ.ಸಿ ತನ್ನ ಭಾರತೀಯ ಸಹವರ್ತಿ ಬ್ಯಾಂಕಿಗೆ ಅಧಿಕಾರ ನೀಡಿತ್ತು. 2007ರಿಂದ 2010ರ ನಡುವೆ ಅಮೆರಿಕದ ಎಚ್.ಎಸ್.ಬಿ.ಸಿ ಬ್ಯಾಂಕು ತನ್ನ ಲಂಡನ್ ಶಾಖೆಯ ಮೂಲಕ ಸೌದಿ ಅರೇಬಿಯಾದ ಅಲ್ ರಝಿ ಬ್ಯಾಂಕಿಗೆ ಲಕ್ಷಾಂತರ ಡಾಲರ್ ಗಳನ್ನು ಪೂರೈಸಿದೆ.

ಅಷ್ಟೇ ಅಲ್ಲದೆ ಅಲ್ ರಝಿ ಬ್ಯಾಂಕಿನ ಕೋರಿಕೆ ಮೇರೆಗೆ, ಥಾಯ್ಲೆಂಡಿನ ಬ್ಯಾಟ್, ಭಾರತದ ರೂಪಾಯಿ ಮತ್ತು ಹಾಂಕಾಂಗ್ ಡಾಲರ್ ಸೇರಿದಂತೆ ಇತರ ದೇಶಗಳ ಕರೆನ್ಸಿಗಳನ್ನು ಅಲ್ ರಝಿ ಬ್ಯಾಂಕಿಗೆ ಪೂರೈಸಲು ಎಚ್.ಬಿಯುಎಸ್ ತನ್ನ ಹಾಂಕಾಂಗ್ ಶಾಖೆಗೆ ಅಧಿಕಾರ ನೀಡಿತ್ತು ಎಂದು ವರದಿ ಹೇಳಿದೆ.

English summary
UK-based global banking giant HSBC Holdings Plc today said N.R. Narayana Murthy, co-founder of IT giant Infosys and the only Indian on its board, would retire as its director at the end of 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X