• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಯುಎಸ್ ವೀಸಾ ವಿತರಣೆ ಇನ್ಮುಂದೆ ವಿಳಂಬ

|

ಕೋಲ್ಕತ್ತಾ, ಸೆ 28: ಭಾರತದಲ್ಲಿರುವ ಅಮೆರಿಕಾ ದೂತಾವಾಸ ಕಚೇರಿ ತನ್ನ ವೀಸಾ ನೀತಿಯನ್ನು ಕೊಂಚ ಪರಿಷ್ಕರಿಸಿದೆ. ವೀಸಾಗಾಗಿ ಕನ್ಸುಲೇಟ್ ಕೆಚೇರಿಗೆ ತೆರಳುವರು ತಮ್ಮ ಸಂದರ್ಶನ ಮತ್ತು ಇತರ ವೀಸಾ ಪ್ರಕ್ರಿಯೆಯನ್ನು ಮುಗಿಸಲು ಇನ್ನು ಮುಂದೆ ಎರಡು ದಿನ ಕಾಯಬೇಕಿದೆ.

ಒಂದು ದಿನದಲ್ಲಿ ಮುಗಿಯುತ್ತಿದ್ದ ವೀಸಾ ಪ್ರಕ್ರಿಯೆಗಳನ್ನು ಇನ್ನು ಎರಡು ದಿನದಲ್ಲಿ ಸಂಪೂರ್ಣ ಗೊಳಿಸಲಾಗುವುದು. ವೀಸಾ ವಿತರಣೆ ಪ್ರಕ್ರಿಯೆ ಕ್ರಮಬದ್ದವಾಗಿ ಮತ್ತು ಸರಳೀಕರಣವಾಗಿರಲು ಈ ಬದಲಾವಣೆಯನ್ನು ಬುಧವಾರದಿಂದ (ಸೆ 26) ಜಾರಿಗೆ ತರಲಾಗಿದೆ ಎಂದು ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.

ರಾಯಭಾರಿ ಕಚೇರಿಗೆ ಹಾಜರಾಗಲು ನಿಗದಿಯಾದ ಮೊದಲ ದಿನದಂದು ಫೋಟೋಗ್ರಾಫ್ ಮತ್ತು ಫಿಂಗರ್ ಪ್ರಿಂಟ್ ತೆಗೆಯಲಾಗುವುದು. ಎರಡನೇ ದಿನ ಸಂದರ್ಶನ ಪ್ರಕ್ರಿಯೆ ನಡೆಯಲಿದೆ ಎಂದು ದೂತಾವಾಸ ಕಚೇರಿಯ ಲೌರೆನ್ ಆರ್ಮಿನ್ಸಿ ಹೇಳಿಕೆ ನೀಡಿದ್ದಾರೆ.

ಎರಡು ದಿನ ವಿಸ್ತರಿಸುವುದರಿಂದ ವೀಸಾ ಆಸಕ್ತರಿಗೆ ಅನುಕೂಲವಾಗಾಲಿದೆ. ಈ ಎರಡು ದಿನಗಳಲ್ಲಿ ದಿನಾ ಕೇವಲ ಒಂದು ಗಂಟೆ ಕೆಲಸ ಮಾತ್ರವಿರುತ್ತದೆ. ಈ ಹಿಂದೆ ಇಡೀ ದಿನ ಕಾಯಬೇಕಿತ್ತು. ವೀಸಾ ಆಸಕ್ತರು ಇನ್ನು ಮುಂದೆ ಕಾಲ್ ಸೆಂಟರ್ ಗೆ ಕರೆ ಮಾಡಿ ಕಚೇರಿಗೆ ಹಾಜರಾಗಲು ದಿನ ನಿಗದಿ ಪಡಿಸಿಕೊಳ್ಳಬಹುದು.

ಹೈದರಾಬಾದ್ ನಗರದ ಜೊತೆ ನೋಯ್ಡಾ ನಗರದಲ್ಲೂ ಕಾಲ್ ಸೆಂಟರ್ ತೆರೆಯಲಾಗಿದೆ. ಹಿಂದಿ, ಇಂಗ್ಲಿಷ್, ಪಂಜಾಬಿ, ಗುಜರಾತಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ವ್ಯವಹರಿಸಬಹುದು. ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 8 ರಿಂದ ರಾತ್ರಿ ಎಂಟರವರೆಗೆ ಮತ್ತು ಭಾನುವಾರದಂದು ಬೆಳಗ್ಗೆ 9 ರಿಂದ ಸಂಜೆ 6ರ ವರೆಗೆ ಕಾಲ್ ಸೆಂಟರ್ ತೆರೆದಿರುತ್ತದೆ ಎಂದು ಲೌರೆನ್ ಆರ್ಮಿನ್ಸಿ ಹೇಳಿಕೆ ನೀಡಿದ್ದಾರೆ.

ಕಾಲ್ ಸೆಂಟರ್ ನಂಬರ್ (ಭಾರತ) : 91 -120 -660 -2222 ಮತ್ತು 91 -22 -6720 -9400

ಭಾರತದಲ್ಲಿರುವ ಅಮೇರಿಕಾ ದೂತಾವಾಸ ಕಚೇರಿಯ ದೂರವಾಣಿ ಸಂಖ್ಯೆ:

ನವದೆಹಲಿ: 011-91-11-2347 2000

ಕೋಲ್ಕತ್ತಾ: 011-91-33-3984 2400

ಚೆನ್ನೈ: 011-91-44-2857 4000

ಮುಂಬೈ: 011-91-22-2672 4000

ಹೈದರಾಬಾದ್: 011-91-40-4033 8300

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
US consulate said, US visa process will now be a two-day affair in India instead of just one, spreading out the process over two days would make it smoother and faster.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more