ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮೋದಿಗೆ ಇನ್ನು ರಾಷ್ಟ್ರ ಬಾವುಟ ಹಾರಿಸುವ ಅವಕಾಶವಿಲ್ಲ'

By Srinath
|
Google Oneindia Kannada News

modi-will-not-hoist-natnl-flag-republic-day-keshubhai
ಅಹಮದಾಬಾದ್, ಸೆ.28: ಗುಜರಾತಿನ ಹಾಲಿ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಮುಂದಿನ ಗಣರಾಜ್ಯೋತ್ಸವದ ವೇಳೆಗೆ ರಾಷ್ಟ್ರ ಬಾವುಟ ಹಾರಿಸುವ ಅವಕಾಶ ಕಳೆದುಕೊಳ್ಳಲಿದ್ದಾರೆ ಎಂದು ಕೇಶುಭಾಯಿ ಪಟೇಲ್ ಘೋಷಿಸಿದ್ದಾರೆ.

ಮೊನ್ನೆಯಷ್ಟೇ ಸಾಹಿತಿ ಅನಂತಮೂರ್ತಿ ಅವರಿಂದ ಕ್ರೂರಿ ಅನಿಸಿಕೊಂಡಿರುವ ನರೇಂದ್ರ ಮೋದಿ ಯಾಕೆ ಈ ಅವಕಾಶ ವಂಚಿತರಾಗುತ್ತಾರೆ ಅಂದರೆ 'ಡಿಸೆಂವರ್ ಚುನಾವಣೆಯಲ್ಲಿ ಮೋದಿ ಸೋಲು ಖಚಿತ. ಹಾಗಾಗಿ ಅವರಿಗೆ ಬಾವುಟ ಹಾರಿಸುವ ಛಾನ್ಸೇ ಇಲ್ಲ' ಎಂದು ಮೋದಿ ಕಟ್ಟಾ ವಿರೋಧಿ, ಗುಜರಾತ್ ಪರಿವರ್ತನ ಪಾರ್ಟಿಯ ಸ್ಥಾಪಕ ಅಧ್ಯಕ್ಷ ಕೇಶುಭಾಯಿ ಎದೆಮುಟ್ಟಿಕೊಂಡು ಹೇಳಿದ್ದಾರೆ.

ರಾಜಕೋಟ್ ವೀರಾಪುರದಲ್ಲಿ ಮಾತನಾಡಿದ ಹಿರಿಯ ನಾಯಕ ಕೇಶುಭಾಯಿ ಅವರು ಡಿಸೆಂಬರ್ ವೇಳೆಗೆ ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸಲಿದೆ. ಇಡೀ ಗುಜರಾತ್ ಹೇಳುತ್ತಿದೆ ಮುಂದಿನ ಗಣರಾಜ್ಯೋತ್ಸವ ದಿನದಂದು ಮೋದಿ ರಾಷ್ಟ್ರ ಬಾವುಟ ಹಾರಿಸುವುದಿಲ್ಲವೆಂದು ಎಂದು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರನ್ನುದ್ದೇಶಿಸಿ ಹೇಳಿದರು.

ಇದನ್ನು ಅರಿತಿರುವ ಮೋದಿ 'ಸುಳ್ಳುಗಳ ಯಾತ್ರೆ' ನಡೆಸುತ್ತಿದ್ದಾರೆ. ಹೋದಲ್ಲೆಲ್ಲ ಅವರು ಹಸೀ ಸುಳ್ಳುಗಳನ್ನು ಹೇಳುತ್ತಿದ್ದಾರೆ. 10 ಸಾವಿರ ಕೋಟಿ ರೂ. ಯೋಜನೆಗಳನ್ನು ಜಾರಿಗೆ ತರುವುದಾಗಿ ಹೇಳಿದರು. ಆದರೆ ಯಾವುದೂ ಆಗಿಲ್ಲ' ಎಂದು ಕೇಶುಭಾಯಿ ಕಿಡಿಕಾರಿದರು.

English summary
If Gujarat CM Narendra Modi will not be able to hoist national flag this Republic Day says Keshubhai
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X