ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧ್ಯಕ್ಷ ಸ್ಥಾನದಿಂದ ಸದ್ಯದಲ್ಲೇ ನಿರ್ಗಮಿಸುವೆ, ಈಶ್ವರಪ್ಪ

|
Google Oneindia Kannada News

 I will quit the state president post very shortly, Eswarappa
ಬೆಂಗಳೂರು, ಸೆ 26: ನೂತನ ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಹೈಕಮಾಂಡ್ ಮಟ್ಟದಲ್ಲಿ ಈಗಾಗಲೇ ಆರಂಭವಾಗಿದೆ. ನೂತನ ಅಧ್ಯಕ್ಷರ ನೇಮಕವಾದೊಡನೆ ಯಾವುದೇ ತಕರಾರಿಲ್ಲದೆ ಆ ಸ್ಥಾನದಿಂದ ನಿರ್ಗಮಿಸುವೆ ಎಂದು ಉಪ ಮುಖ್ಯಮಂತ್ರಿ ಮತ್ತು ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

ತಮ್ಮ ಪಕ್ಷದಲ್ಲಿ ಒಬ್ಬರಿಗೆ ಒಂದು ಹುದ್ದೆ ಮಾತ್ರ ಮೀಸಲು. ಆದರೆ ಕಾರಣಾಂತರದಿಂದ ಎರಡು ಹುದ್ದೆ ನಿಭಾಯಿಸಬೇಕಾಗಿ ಬಂತು.

ಹೊಸ ಅಧ್ಯಕ್ಷರ ಘೋಷಣೆ ಆದ ಕೂಡಲೇ ಆ ಸ್ಥಾನಕ್ಕೆ ರಾಜೀನಾಮೆ ನೀಡಿ ಉಪ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವೆ ಎಂದು ಈಶ್ವರಪ್ಪ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಬುಧವಾರ (ಸೆ 26) ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಅವರ ಜಯಂತಿ ಸಂದರ್ಭದಲ್ಲಿ ಮಾತನಾಡುತ್ತಿದ್ದ ಈಶ್ವರಪ್ಪ, ನಾಳೆಯಿಂದ ಹರ್ಯಾಣದ ಸೂರಜ್ ಕುಂದ್ ನಲ್ಲಿ ಆರಂಭವಾಗುವ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಅಧ್ಯಕ್ಷ ಸ್ಥಾನಕ್ಕೆ ಹೆಸರನ್ನು ಅಂತಿಮ ಗೊಳಿಸಲಾಗುವುದು ಎಂದಿದ್ದಾರೆ.

ಆಯನೂರು ಮಂಜುನಾಥ್ ಮತ್ತು ಧನಂಜಯ ಕುಮಾರ್ ಅವರನ್ನು ಆ ಹುದ್ದೆಯಿಂದ ವಜಾಗೊಳಿಸಿರುವ ಬಗ್ಗೆ ಪದೇ ಪದೇ ಮಾತನಾಡುವ ಅಗತ್ಯವಿಲ್ಲ.

ಇದು ಪಕ್ಷದ ಆಂತರಿಕ ವಿಚಾರ ಈ ವಿಷದಯದ ಬಗ್ಗೆ ಅನಾವಶ್ಯಕ ಚರ್ಚೆ ಬೇಡ ಎಂದು ಈಶ್ವರಪ್ಪ ಕಾರ್ಯಕ್ರಮದಲ್ಲಿ ಹೇಳಿದರು.

English summary
State BJP president and DCM K S Eswarappa said, he will quit the state president post as soon as party finalize for this post and I will continue as Deputy Chief Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X