ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಂಚ: ಇನ್ಸ್ ಪೆಕ್ಟರ್ ಹನುಮಂತಯ್ಯಗೆ ನ್ಯಾಯಾಂಗ ಬಂಧನ

By Srinath
|
Google Oneindia Kannada News

bribe-lokayukta-arrest-rajarajeshwari-nagar-inspector
ಬೆಂಗಳೂರು, ಸೆ.26: ಯಾಕೋ ರಾಜಧಾನಿಯ ಕೆಲ ಪೊಲೀಸ್ ಇನ್ಸ್‌ಪೆಕ್ಟರುಗಳು ಲಂಚಕ್ಕೆ ಬಾಯ್ಬಿಡುವುದು ವಿಪರೀತವಾಗುತ್ತಿದೆ. ಹಾಗೇ ಅವರಿಗೆ ತಕ್ಕ ಶಾಸ್ತಿಯೂ ಆಗುತ್ತಿದೆ. ಆದರೂ ಈ ಖದೀಮರಿಗೆ ಬುದ್ಧಿಬಂದಿಲ್ಲವೆಂದರೆ, ಏನು ಹೇಳೋಣ?

ಇಂದು ಬೆಳಗ್ಗೆ ಏನಾಗಿದೆಯೆಂದರೆ ನಗರದ ದಕ್ಷಿಣ ಹೊರವಲಯದಲ್ಲಿರುವ ರಾಜರಾಜೇಶ್ವರಿ ನಗರದಲ್ಲಿ ಎಚ್. ಹನುಮಂತಯ್ಯ ಎಂಬ ಇನ್ಸ್‌ಪೆಕ್ಟರ್ ಮಹಾಶಯ ಬರೋಬ್ಬರಿ 2 ಲಕ್ಷ ರೂಪಾಯಿ ಲಂಚಕ್ಕೆ ಕೈಯೊಡ್ಡಿದ್ದಾನೆ. ಅದೆಲ್ಲಿ ಹೊಂಚುಹಾಕುತ್ತಿದ್ದರೋ ಲೋಕಾಯುಕ್ತ ಪೊಲೀಸರು ಗಬಕ್ಕಂತ ಹನುಮಂತಯ್ಯನನ್ನು ರೆಡ್ ಹ್ಯಾಂಡ್ ಆಗಿ ಸೆರೆ ಹಿಡಿದಿದ್ದಾರೆ.

ಲೋಕಾಯುಕ್ತಕ್ಕೆ ಫೋನ್ ಮಾಡಿ ಸಾಕು: ಡಿವೈಎಸ್ಪಿ ಪ್ರಸನ್ನ ವಿ ರಾಜು ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸರು ಈ ಕಾರ್ಯಾಚರಣೆ ನಡೆಸಿ, ನಗರದ ಇತರೆ ಕಳ್ಳ ಪೊಲೀಸರಿಗೆ ನಡುಕವನ್ನುಂಟುಮಾಡಿದ್ದಾರೆ. 'ಯಾರೇ ಆಗಲಿ ಪೊಲೀಸಪ್ಪ ಲಂಚಕ್ಕೆ ಕೈಯೊಡ್ಡಿದರೆ ಸೀದಾ ನಮಗೆ ತಿಳಿಸಿ' ಎಂದೂ ಲೋಕಾಯುಕ್ತ ಪೊಲೀಸರು ಪ್ರಜೆಗಳಿಗೆ ಕಿವಿಮಾತು ಹೇಳಿದ್ದಾರೆ. ಇದೀಗ ಬಂದ ಸುದ್ದಿ : ಇನ್ಸ್ ಪೆಕ್ಟರ್ ಹನುಮಂತಪ್ಪ ಅವರಿಗೆ ಅಕ್ಟೋಬರ್ 1 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

English summary
Corruption- Bangalore Lokayukta Police arrested Rajarajeshwari Nagar police Inspector Hanumanthaiah while he was taking Rs 2 lakh bribe today (Sept 26)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X