ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಟಾಪ್ 10 ಮೆಡಿಕಲ್ ಕಾಲೇಜುಗಳು

By Mahesh
|
Google Oneindia Kannada News

ಇಂಜಿನಿಯರಿಂಗ್ ವಿಷಯಕ್ಕೆ ಬೇಡಿಕೆ ಇತ್ತೀಚೆಗೆ ಹೆಚ್ಚಾಗಿದ್ದರೂ ವೈದ್ಯಕೀಯ ಶಿಕ್ಷಣದ ಮಹತ್ವ ಇನ್ನೂ ಕುಗ್ಗಿಲ್ಲ.

ಆರೋಗ್ಯ ಕ್ಷೇತ್ರಗಳಲ್ಲಿ ಪ್ರತಿ ದಿನ್ಯ ಆಗುತ್ತಿರುವ ಬೆಳವಣಿಗೆಗೆ ತಕ್ಕಂತೆ ಮೆಡಿಕಲ್ ಕಾಲೇಜುಗಳಲ್ಲಿ ಉನ್ನತ ತಂತ್ರಜ್ಞಾನಯುಕ್ತ ಪಠ್ಯಕ್ರಮ ಇಂದಿನ ಯುವಪೀಳಿಗೆಯನ್ನು ಆಕರ್ಷಿಸುತ್ತಿದೆ.

ಆದರೆ, ಮೆಡಿಕಲ್ ಕಾಲೇಜುಗಳಲ್ಲಿ ಬೋಧನೆ ಗುಣಮಟ್ಟ, ಅತಿಯಾದ ಶುಲ್ಕದ ನಡುವೆಯೂ ಭಾರತದಲ್ಲಿ ವೈದ್ಯಕೀಯ ಶಿಕ್ಷಣ ತನ್ನ ಘನತೆ ಉಳಿಸಿಕೊಂಡಿದ್ದು, ಇದಕ್ಕೆ ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ವೈದ್ಯರುಗಳೇ ಸಾಕ್ಷಿ ಎನ್ನಬಹುದು.

ಆದರೆ, ಇಂದಿಗೂ ವೈದ್ಯನಾಗುವುದು ಹಲವರ ಚಿಕ್ಕಂದಿನ ಕನಸಾಗಿದೆ. ಶ್ರೇಷ್ಠ ವೃತ್ತಿಗಳಲ್ಲಿ ಒಂದಾದ ಭಾರತದಲ್ಲಿ 'ವೈದ್ಯೋ ನಾರಾಯಣೋ ಹರಿ:'. ಡಾಕ್ಟರ್ ಗಳನ್ನು ದೇವರಂತೆ ಕಾಣುವ ದೇಶದಲ್ಲಿ ವೈದ್ಯರನ್ನು ತಯಾರಿಸುವ ಮೆಡಿಕಲ್ ಕಾಲೇಜುಗಳತ್ತ ಒಂದು ಕಣ್ಣೋಟ [ಟಾಪ್ 10 ಇಂಜಿನಿಯರಿಂಗ್ ಕಾಲೇಜು ಪಟ್ಟಿ]

2012ರಲ್ಲಿ ಭಾರತದ ಟಾಪ್ 10 ಮೆಡಿಕಲ್ ಕಾಲೇಜುಗಳ ಪಟ್ಟಿ ಈ ಕೆಳಗಿನಂತಿದೆ:

AIIMS, ದೆಹಲಿ

AIIMS, ದೆಹಲಿ

ಭಾರತದಲ್ಲಿ ವೈದ್ಯಕೀಯ ಶಿಕ್ಷಣದ ಅಭಿವೃದ್ಧಿಗಾಗಿ ಕಾಯಿದೆ ಜಾರಿಗೊಳಿಸಿ ಆಲ್ ಇಂಡಿಯಾ ಇನ್ಸ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ಸ್ಥಾಪಿಸಲಾಯಿತು.

ಪದವಿ ಪೂರ್ವ ಹಾಗೂ ಸ್ನಾತಕೋತ್ತರ ಪದವಿ ವಿಷಯಗಳಲ್ಲಿ ಅಗತ್ಯವಾದ ಪಠ್ಯಕ್ರಮವನ್ನು ಅಳವಡಿಸಿ ಎಲ್ಲಾ ವಿಭಾಗಗಳಲ್ಲೂ ಉನ್ನತವಾದ ಶಿಕ್ಷಣ ಲಭ್ಯವಾಗಲಿದೆ ಎಂಬುದನ್ನು ದೃಢಪಡಿಸಿಕೊಳ್ಳಲಾಯಿತು. ಏಮ್ಸ್ ದೆಹಲಿ ಇತರೆ ವೈದ್ಯಕೀಯ ಕಾಲೇಜುಗಳಿಗೆ ಮಾದರಿಯಾಗಿದೆ.

ಸ್ಥಳ: ದೆಹಲಿ, ಭಾರತ
ಶ್ರೇಯಾಂಕ : 1

CMC, ವೆಲ್ಲೂರು

CMC, ವೆಲ್ಲೂರು

ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ವೆಲ್ಲೂರಿನಲ್ಲಿ ಅಷ್ಟೇ ಅಲ್ಲ ಭಾರತದ ಅತಿದೊಡ್ಡ ವೈದ್ಯಕೀಯ ಸಂಸ್ಥೆಗಳಲ್ಲಿ ಒಂದು ಎನಿಸಿದೆ.

ದೆಹಲಿಯ ಏಮ್ಸ್ ನಂತರದ ಸ್ಥಾನದಲ್ಲಿ ವೆಲ್ಲೂರಿನ ಸಿಎಂಸಿ ನಿಲ್ಲುತ್ತದೆ. ಶತಮಾನಕ್ಕೂ ಹಳೆಯದಾದ ಕ್ರಿಶ್ಚಿಯನ್ ಇನ್ಸ್ಸ್ಟಿಟ್ಯೂಟ್ ಇಡಾ ಎಸ್ ಸ್ಕುಡರ್ ಅವರಿಂದ ಸ್ಥಾಪಿಸಲ್ಪಟ್ಟಿತು.

ಸ್ಥಳ: ವೆಲ್ಲೂರು, ತಮಿಳುನಾಡು
ಶ್ರೇಯಾಂಕ : 2

AFMC, ಮಹಾರಾಷ್ಟ್ರ

AFMC, ಮಹಾರಾಷ್ಟ್ರ

ಆರ್ಮ್ಡ್ ಫೋರ್ಸಸ್ ಮೆಡಿಕಲ್ ಕಾಲೇಜು- ಭಾರತದ ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ ವಿಷಯದಲ್ಲಿ ಅಧ್ಯಯನ ಮಾಡಲು ಇರುವ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾಗಿದೆ.

ಪದವಿ ಪೂರ್ವ, ಸ್ನಾತಕೋತ್ತರ ಪದವಿ ವಿಷಯಗಳು ಹಾಗೂ ನರ್ಸಿಂಗ್ ವಿಭಾಗದಲ್ಲಿ ವ್ಯಾಸಂಗ ಮಾಡಬಹುದಾಗಿದ್ದು, ನಂತರ ಸೈನ್ಯದಲ್ಲಿ ಸೇವೆ ಸಲ್ಲಿಸಲು ಅವಕಾಶ ಪಡೆಯಬಹುದಾಗಿದೆ.

ಸೇನಾ ವಿಭಾಗಕ್ಕೆ ವೈದ್ಯಕೀಯ ಶಿಕ್ಷಣದ ಮಹತ್ವ ಕಂಡು ಬಿಸಿ ರಾಯ್ ಸಮಿತಿ ನೀಡಿದ ಶಿಫಾರಸಿನ ಮೇರೆಗೆ 01 ಮೇ 1948ರಲ್ಲಿ ಎ ಎಫ್ ಎಂಸಿ ಸ್ಥಾಪನೆಯಾಯಿತು.

ಸ್ಥಳ : ಪುಣೆ, ಮಹಾರಾಷ್ಟ್ರ
ಶ್ರೇಯಾಂಕ: 3

ಕೆಎಂಸಿ, ಮಂಗಳೂರು

ಕೆಎಂಸಿ, ಮಂಗಳೂರು

ಜನವರಿ 1955 ರಲ್ಲಿ ಮಂಗಳೂರಿನಲ್ಲಿ ಆರಂಭವಾದ ಕಸ್ತೂರ್ಬಾ ಮೆಡಿಕಲ್ ಕಾಲೇಜು(ಕೆಎಂಸಿ) ಆರಂಭದ ದಿನಗಳಲ್ಲಿ ಕ್ಲಿನಿಕಲ್ ತರಬೇತಿ ನೀಡುವುದರಲ್ಲಿ ಜನಪ್ರಿಯತೆ ಗಳಿಸಿತ್ತು. ಮಣಿಪಾಲ್ ವಿಶ್ವವಿದ್ಯಾಲಯಕ್ಕೆ ಸೇರಿರುವ ಕೆಎಂಸಿ ಕಾಲೇಜಿನಿಂದ ಈಗ 44 ವಿವಿಧ ದೇಶಗಳಿಗೆ ಸೇರಿದ ವಿದ್ಯಾರ್ಥಿಗಳು ಪದವಿ ಪಡೆಯುತ್ತಿದ್ದಾರೆ. ವಿಶ್ವದಾದ್ಯಂತ ಇಲ್ಲಿ ಪಡೆಯುವ ಪದವಿಗೆ ಮಾನ್ಯತೆ ದೊರೆತಿದೆ.

ಸ್ಥಳ:
ಮಂಗಳೂರು, ಕರ್ನಾಟಕ
ಶ್ರೇಯಾಂಕ : 4

ಕಸ್ತೂರ್ಬಾ ಮೆಡಿಕಲ್ ಕಾಲೇಜು(ಕೆಎಂಸಿ), ಸಿಕ್ಕಿಂ

ಕಸ್ತೂರ್ಬಾ ಮೆಡಿಕಲ್ ಕಾಲೇಜು(ಕೆಎಂಸಿ), ಸಿಕ್ಕಿಂ

ಜೂನ್ 30, 1953 ರಲ್ಲಿ ದಿವಂಗತ ಟಿ.ಎಂ.ಎ ಪೈ ಅವರು ಆರಂಭಿಸಿದ ಕಸ್ತೂರ್ಬಾ ಮೆಡಿಕಲ್ ಕಾಲೇಜು (ಕೆಎಂಸಿ) ಆರಂಭದ ದಿನಗಳಲ್ಲಿ ಕ್ಲಿನಿಕಲ್ ತರಬೇತಿ ನೀಡುವುದರಲ್ಲಿ ಜನಪ್ರಿಯತೆ ಗಳಿಸಿತ್ತು. ಮಣಿಪಾಲ್ ವಿಶ್ವವಿದ್ಯಾಲಯಕ್ಕೆ ಸೇರಿರುವ ಕೆಎಂಸಿ ಕಾಲೇಜಿನ ಸಿಕ್ಕಿಂ ವಿಭಾಗವೂ ಸ್ವಯುತ್ತ ಸಂಸ್ಥೆಯಾಗಿ ಬೆಳೆದಿದೆ.

ಸ್ಥಳ: ಸಿಕ್ಕಿಂ
ಶ್ರೇಯಾಂಕ : 5
JIPMER, ಪುದುಚೇರಿ,ತಮಿಳುನಾಡು

JIPMER, ಪುದುಚೇರಿ,ತಮಿಳುನಾಡು

ಜವಹರಲಾಲ್ ಇನ್ಸ್ ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜ್ಯುಯೇಟ್ ಮೆಡಿಕಲ್ ಎಜುಕೇಷನ್ ಹಾಗೂ ರಿಸರ್ಚ್ ಸಂಸ್ಥೆ 1956ರಿಂದ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಸುಮಾರು 195 ಎಕರೆ ವಿಸ್ತೀರ್ಣದ ಕ್ಯಾಂಪಸ್ ಹೊಂದಿರುವ ಈ ಕಾಲೇಜು ಚೆನ್ನೈನಿಂದ ಸುಮಾರು 170 ಕಿ.ಮೀ ದೂರವಿರುವ ಪುದುಚೇರಿ(ಈ ಮುಂಚಿನ ಪಾಂಡಿಚೇರಿ)ಯಲ್ಲಿದೆ.

ಸ್ಥಳ: ಪುದುಚೇರಿ, ತಮಿಳುನಾಡು
ಶ್ರೇಯಾಂಕ: 6

MAMC, ನವದೆಹಲಿ

MAMC, ನವದೆಹಲಿ

This institution is named after the great patriot and educationist, Maulana Abdul Kalam Azad and has been in existence since 1959. The primary aim of this institution is to produce competent basic doctors, specialists, and super specialists. It has endeavored to promote all facilities conducive to learning and furtherance of knowledge

ಸ್ಥಳ : ನವದೆಹಲಿ, ಭಾರತ
ಶ್ರೇಯಾಂಕ: 7
ಎಂಎಂಸಿ, ಚೆನ್ನೈ

ಎಂಎಂಸಿ, ಚೆನ್ನೈ

Madras Medical College, In 1857, gained affiliation to the University of Madras. After the affiliation in 1857 the College moved to be a center of excellence imparting training in all the specialities in the field of medicine and surgery and it is now one of the premier institutions in the country with under graduate, post graduate and super speciality courses.

ಸ್ಥಳ : ಚೆನ್ನೈ, ತಮಿಳುನಾಡು
ಶ್ರೇಯಾಂಕ: 8

ಲೇಡಿ ಹರ್ಡಿಂಗೆ ಮೆಡಿಕಲ್ ಕಾಲೇಜು

ಲೇಡಿ ಹರ್ಡಿಂಗೆ ಮೆಡಿಕಲ್ ಕಾಲೇಜು

The Lady Hardinge Medical College for women was founded in 1914 to commemorate the visit of Her Majesty Queen Mary in 1911-12. Lady Hardinge the wife of the then viceroy was the first to take initiative for starting a medical college for women, as the lack of separate medical college for women made it almost impossible for Indian women to study medicine.

ಸ್ಥಳ: ನವದೆಹಲಿ, ಭಾರತ
ಶ್ರೇಯಾಂಕ : 9

ಸಿಎಸ್ಎಂ ಮೆಡಿಕಲ್ ವಿವಿ

ಸಿಎಸ್ಎಂ ಮೆಡಿಕಲ್ ವಿವಿ

ಕಿಂಗ್ ಜಾರ್ಜ್ಸ್ ಮೆಡಿಕಲ್ ವಿಶ್ವವಿದ್ಯಾಲಯ ಎಂದೇ ಹೆಸರಾಗಿದ್ದ ಛತ್ರಪತಿ ಷಹುಜಿ ಮಹಾರಾಜ್ ಮೆಡಿಕಲ್ ವಿಶ್ವವಿದ್ಯಾಲಯ ಉತ್ತರಪ್ರದೇಶದ ಲಖ್ನೋದಲ್ಲಿದೆ.2002 ಸೆಪ್ಟೆಂಬರ್ 16 ರಂದು ಕಾಯಿದೆ ಜಾರಿಗೊಳಿಸಿ ಕಿಂಗ್ ಜಾರ್ಜ್ಸ್ ಕಾಲೇಜಿನಿಂದ ಷಹುಜಿ ಮಹಾರಾಜ್ ಕಾಲೇಜು ಎಂದು ಬದಲಾಯಿಸಲಾಯಿತು. ಕಿಂಗ್ ಜಾರ್ಜ್ಸ್ ಕಾಲೇಜ್ 1911ರಲ್ಲಿ ಸ್ಥಾಪನೆಯಾಗಿದೆ.

ಸ್ಥಳ: ಲಖ್ನೋ, ಉತ್ತರ ಪ್ರದೇಶ
ಶ್ರೇಯಾಂಕ : 10

English summary
Medical Education In India is the most opted professional education, which is also the most expensive and longest in duration. Perhaps, a distinctive feature of medical education is that a very large part of it occurs in practice situations. List of the Top 10 Best Medical Colleges of India in 2012
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X