ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಮಶೇಖರ ರೆಡ್ಡಿಗೆ ಜಾಮೀನು; ಶ್ರೀಲಕ್ಷ್ಮಿ ಆಸ್ಪತ್ರೆಗೆ

By Srinath
|
Google Oneindia Kannada News

bailgate-soma-reddy-judge-pattabhi-gets-bail-ap-hc
ಹೈದರಾಬಾದ್, ಸೆ. 25: ಅಕ್ರಮ ಗಣಿ ಪ್ರಕರಣದಲ್ಲಿ ಜನಾರ್ದನ ರೆಡ್ಡಿಗೆ ಜಾಮೀನು ಕಲ್ಪಿಸಲು ಲಂಚ ನೀಡಿದ್ದ ಪ್ರಕರಣದಲ್ಲಿ ಚೆರ್ಲಪಲ್ಲಿ ಜೈಲುಪಾಲಾಗಿದ್ದ ಕೆಎಂಎಫ್ ಸೋಮಶೇಖರ ರೆಡ್ಡಿ ಮತ್ತು ಸಿಬಿಐ ಕೋರ್ಟಿನ ಮಾಜಿ ಜಡ್ಜ್ ಪಟ್ಟಾಭಿ, ಲಕ್ಷ್ಮಿ ನರಸಿಂಹರಾವ್ ಅವರಿಗೆ ಆಂಧ್ರ ಹೈಕೋರ್ಟ್ ಇಂದು ಷರತ್ತುಬದ್ಧ ಜಾಮೀನು ನೀಡಿದೆ.

ಇದೇ ವೇಳೆ ಅಪ್ಪನ ಆರೋಗ್ಯ ಸರಿಯಿಲ್ಲವೆಂದು ಅಲವತ್ತುಕೊಂಡ ಪ್ರಕರಣದ ಮಧ್ಯಸ್ಥಿಕೆದಾರ/ ರೌಡಿಶೀಟರ್ ಯಾದಗಿರಿ ರಾವ್ ಗೆ ಸಹ ಹೈಕೋರ್ಟ್ ಜಾಮೀನು ನೀಡಿದೆ. ಈ ಮಧ್ಯೆ OMC ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಹಿರಿಯ IAS ಅಧಿಕಾರಿ ಶ್ರೀಲಕ್ಷ್ಮಿ ಅವರು ತೀವ್ರ ಅನಾರೋಗ್ಯಕ್ಕೆ ತುತ್ತಾದ ಕಾರಣ ಅವರನ್ನು ಇಂದು ಬೆಳಗ್ಗೆ ನಿಜಾಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಮಶೇಖರ ರೆಡ್ಡಿ ಹೈದರಾಬಾದ್ ಬಿಡುವಂತಿಲ್ಲ- ಕಂಪ್ಲಿ ಬಾಬುಗೆ ಜಾಮೀನು ಇಲ್ಲ:
ಈ ಮಧ್ಯೆ, ಆಂಧ್ರದ ಭ್ರಷ್ಟಾಚಾರ ನಿಗ್ರಹ ದಳವು (ACB) ಎರಡನೆಯ ಆರೋಪಪಟ್ಟಿ ದಾಖಲಿಸಿದೆ. ಹಾಗಾಗಿ ಜಾಮೀನು ಪಡೆದಿರುವ ಆರೋಪಿಗಳೆಲ್ಲ ಕಾಲಕಾಲಕ್ಕೆ ACB ವಿಚಾರಣೆಗೆ ಹಾಜರಾಗುತ್ತಿರಬೇಕು. ಆರೋಪಿಗಳು ತಮ್ಮ ಪಾಸ್ ಪೋರ್ಟುಗಳನ್ನು ಕೋರ್ಟಿಗೆ ಒಪ್ಪಿಸಬೇಕು.

ಅಷ್ಟೇ ಅಲ್ಲ. ಬಳ್ಳಾರಿ ಶಾಸಕರಾಗಿದ್ದರೂ ಸೋಮಶೇಖರ ರೆಡ್ಡಿ ಸೇರಿದಂತೆ ಯಾವೊಬ್ಬ ಆರೋಪಿಯೂ ಹೈದರಾಬಾದ್ ಬಿಟ್ಟು ಹೋಗಬಾರದು ಎಂದು ಕೋರ್ಟ್ ಷರತ್ತುಗಳನ್ನು ವಿಧಿಸಿದೆ. ಕುತೂಹಲದ ಸಂಗತಿಯೆಂದರೆ ಕಂಪ್ಲಿ ಶಾಸಕ ಸುರೇಶ್ ಬಾಬುಗೆ ಜಾಮೀನು ಮಂಜೂರಾಗಿಲ್ಲ.

ಸೋಮಶೇಖರ ರೆಡ್ಡಿ ಮತ್ತು ಜಡ್ಜ್ ಪಟ್ಟಾಭಿ ಅವರು ತಮ್ಮ ವಿರುದ್ಧ ACB ದೂರು ದಾಖಲಿಸಿರುವುದರ (ಮೊದಲ FIR) ಸಂಬಂಧ ACB ಕೋರ್ಟಿನಲ್ಲಿ ಜಾಮೀನು ಕೋರಿದ್ದರು. ಆದರೆ ಅಲ್ಲಿ ತಿರಸ್ಕರಿಸಲಾಗಿತ್ತು. ತದನಂತರ ಆರೋಪಿಗಳಿಬ್ಬರೂ ಜಾಮೀನು ಮೊರೆ ಹೋಗಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲೀಗ ಅರ್ಧ ಯಶಸ್ಸು ಲಭಿಸಿದ್ದು, ಎರಡನೆಯ FIR ಸಂಬಂಧ ಜಾಮೀನು ಅರ್ಜಿ ವಿಚಾರಣೆ ನಡೆಯಬೇಕಾಗಿದೆ.

ಇಂದು ಜನಾ ರೆಡ್ಡಿ ವಿಚಾರಣೆ: ಈ ಮಧ್ಯೆ, ACB ಪೊಲೀಸರು ಜನಾರ್ದನ ರೆಡ್ಡಿ ಅವರನ್ನು ಹೆಸರಿಸಿ, ಜಾಮೀನಿಗಾಗಿ ಲಂಚ ಪ್ರಕರಣದಲ್ಲಿ 2ನೆಯ FIR ದಾಖಲಿಸಿದ್ದಾರೆ. ಅದರ ವಿಚಾರಣೆ ಇಂದು ಚೆರ್ಲಪಲ್ಲಿರುವ ACB ಕೋರ್ಟಿನಲ್ಲಿ ವಿಚಾರಣೆ ನಡೆಯಲಿದೆ.

English summary
Illegal Mining Bailgate -Somashekhar Reddy Judge Pattabhi gets bail in AP HC today (Sept 25) regarding First FIR filed by ACB. In the meanwhile Janardhan Reddy will face trial today in the same case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X