ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಶ್ವರಪ್ಪ ರಿವರ್ಸ್ ಗೇರ್; ವೀರಶೈವರ ಪ್ರತಿಭಟನೆ

By Mahesh
|
Google Oneindia Kannada News

KS Eshwarappa defends Sacking Ayanur
ಬೆಂಗಳೂರು/ತುಮಕೂರು, ಸೆ.25: ಪಕ್ಷದ ವಕ್ತಾರರಾದ ಆಯನೂರು ಮಂಜುನಾತ್ ಹಾಗೂ ಧನಂಜಯ್ ಕುಮಾರ್ ಅವರ ವಜಾ ವಿಷಯಕ್ಕೆ ಸಂಬಂಧಿಸಿದಂತೆ 'ನಮ್ಮ ಪಕ್ಷ ನಮ್ಮ ನಿರ್ಧಾರ' ಎಂದು ಮಾಧ್ಯಮಗಳ ವಿರುದ್ಧ ಮುಂದೆ ಹರಿಹಾಯ್ದಿದ್ದ ಉಪ ಮುಖ್ಯಮಂತ್ರಿ ಈಶ್ವರಪ್ಪ ರಿವರ್ಸ್ ಗೇರ್ ಹಾಕಿದ್ದಾರೆ. ನಾನು ಯಡಿಯೂರಪ್ಪ ಸೋದರರಿದ್ದಂತೆ.ಇದು ನಮ್ಮ ಕುಟುಂಬದ ಸಮಸ್ಯೆ. ಏನೂ ಸಮಸ್ಯೆಯಿಲ್ಲದಿದ್ದರೆ ಕುಟುಂಬ ಹೇಗಾಗುತ್ತೆ ಎಂದು ವಾದ ಮಂಡಿಸಿದ್ದಾರೆ.

ನಾನು ಪಕ್ಷದಲ್ಲಿ ಕಿರಿಯ ಮಗನಿದ್ದ ಹಾಗೆ ಹಾಗಾಗಿ ಎಲ್ಲರೂ ನನ್ನ ಮೇಲೆ ಹೆಚ್ಚು ಪ್ರೀತಿ ತೋರಿಸುತ್ತಾರೆ. ನನಗೆ ಬಿಎಸ್‌ ಯಡಿಯೂರಪ್ಪ ಅವರ ಬಗ್ಗೆ ಯಾವುದೇ ದ್ವೇಷವಿಲ್ಲ. ಅವರ ಮೇಲೆ ತುಂಬ ಗೌರವವಿದೆ. ಯಡಿಯೂರಪ್ಪನವರೇ ನಮ್ಮ ನಾಯಕರು, ನಾವೆಲ್ಲ ಅವರ ಬೆಂಬಲಿಗರು ಎಂದು ರಾಜ್ಯಾಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸಾವಧಾನದಿಂದ ಮಾತನಾಡಿದ್ದಾರೆ.

ನಮ್ಮಲ್ಲಿ ಏನೇ ಘಟನೆ ನಡೆದರೂ ಅದು ನಮ್ಮ ಮನೆ ನಾವು ಸರಪಡಿಸಿಕೊಳ್ಳುತ್ತೇವೆ. ಈ ಚಿಕ್ಕ ವಿಚಾರವನ್ನು ಮಾದ್ಯಮದವರು ದೊಡ್ಡದಾಗಿ ಬಿಂಬಿಸುತ್ತಿದ್ದೀರಿ ಎಂದು ಸಮಧಾನ ವ್ಯಕ್ತಪಡಿಸಿದರು.

ಆಯನೂರು ಮಂಜುನಾಥ್ ಹಾಗೂ ಧನಂಜಯ್ ಕುಮಾರ್‌ರವರನ್ನು ಹುದ್ದೆಯಿಂದ ವಜಾ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಇನ್ನು 2-3 ದಿನಗಳಲ್ಲಿ ಪಕ್ಷದ ಸಭೆ ಕರೆದು ಈ ಬಗ್ಗೆ ಚರ್ಚಿಸಲಾಗುವುದು. ಯಾವುದೇ ದುರುದ್ದೇಶದಿಂದ ಈ ಕ್ರಮ ಕೈಗೊಂಡಿಲ್ಲ ಎಂದು ಸ್ಪಷ್ಟ ಪಡಿಸಿದರು.

ವೀರಶೈವರ ಪ್ರತಿಭಟನೆ: ಈ ನಡುವೆ ವೀರಶೈವ ಪರಿಷತ್ ಇತ್ತೀಚೆಗೆ ಕರೆ ನೀಡಿದಂತೆ ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಅವರ ವಿರುದ್ಧ ಬೆಂಗಳೂರಿನ ಆನಂದ್ ರಾವ್ ವೃತ್ತದಲ್ಲಿ ಮಂಗಳವಾರ (ಸೆ.25) ಪ್ರತಿಭಟನೆ ನಡೆಸಿದ್ದಾರೆ. ಪ್ರಮಾಣಿಕ ರಾಜಕಾರಣಿ ಅಯನೂರು ಮಂಜುನಾಥ್ ಅವರನ್ನು ವಿನಾಕಾರಣ ವಜಾಗೊಳಿಸಿರುವುದನ್ನು ವಿರೋಧಿಸಿ ಸೋಮವಾರ ಶಿವಮೊಗ್ಗದಲ್ಲಿ ಈಶ್ವರಪ್ಪ ಮನೆ ಮುಂದೆ ವೀರಶೈವ ಸಂಘಟನೆಗಳು ಪ್ರತಿಭಟನೆ ನಡೆಸಿತ್ತು.

ರಾಜ್ಯಾಧ್ಯಕ್ಷ ಸ್ಥಾನ: ನನಗೆ ರಾಜ್ಯಾಧ್ಯಕ್ಷ ಸ್ಥಾನವನ್ನು ಹೆಚ್ಚು ಕಾಲ ಹೊರಲು ಆಗುತ್ತಿಲ್ಲ. ಚುನಾವಣೆ ಹೊತ್ತಿಗೆ ಪಕ್ಷದ ಸಂಘಟನೆ ಮುಖ್ಯವಾಗುತ್ತದೆ ಎಂಬ ಅರಿವು ನನಗೂ ಇದೆ. ಈ ತಿಂಗಳ ಕೊನೆಯಲ್ಲಿ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಹರಿಯಾಣದಲ್ಲಿ ಪಕ್ಷದ ಕಾರ್ಯಕಾರಿಣಿ ಸಭೆ ನಡೆಯಲಿದ್ದು ನೂತನ ರಾಜ್ಯಾಧ್ಯಕ್ಷರ ನೇಮಕವಾಗಲಿದೆ ಎಂದರು.

ಬಿಎಸ್‌ವೈ ಬೆಂಬಲಿಗರನ್ನು ಕೈ ಬಿಟ್ಟರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಆಯನೂರು ಮಂಜುನಾಥ್ ನೀಡಿರುವ ಹೇಳಿಕೆ ಹಾಗೂ ಯಡಿಯೂರಪ್ಪ ಅವರು ಡಿಸಿಎಂ ಹುದ್ದೆಗೆ ರಾಜೀನಾಮೆ ನೀಡುವಂತೆ ಈಶ್ವರಪ್ಪ ಅವರಿಗೆ ಒತ್ತಾಯಿಸಿದ ಹೇಳಿಕೆಗಳಿಗೆ ಪ್ರತಿಕ್ರಿಯಿಸದ ಈಶ್ವರಪ್ಪ ಇದೆಲ್ಲವೂ ಹೈ ಕಮಾಂಡ್ ನಾಯಕರಿಗೆ ಗೊತ್ತಿದೆ ಅವರು ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದಷ್ಟೆ ಉತ್ತರಿಸಿದರು.

ಈ ನಡುವೆ ಗ್ರಾಮಾಂತರ ಪ್ರದೇಶಗಳಲ್ಲಿ ಎಲ್ಲಾ ಬಗೆಯ ಸೇವೆಗಳನ್ನು ಒದಗಿಸುವ ನೆಮ್ಮದಿ ಕೇಂದ್ರಗಳಿಗೆ 1400 ಇಂಜಿನಿಯರ್ ಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಹಾಗೂ ನಿವೃತ್ತ ಎಂಜಿನಿಯರ್‌ಗಳ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ನಿವೃತ ಇಂಜಿನಿಯರ್‌ಗಳಿಗೆ 20 ಸಾವಿರ ರೂ. ಸಂಬಳ ನೀಡಲಾಗುವುದು. 5,600 ಕಂಪ್ಯೂಟರ್ ಆಪರೇಟರ್ ಹುದ್ದೆಗಳಿಗೆ ಸಂದರ್ಶನ ನಡೆದಿದೆ ಎಂದರು.

English summary
There is no rift between me and BS Yeddyurappa we are like brothers and Sacking of Ayanur Manjunath and Dhananjay Kumar is purely party decision and State BJP President will be chosen in Haryana BJP working committee meet said KS Eshwarappa
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X