ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೀನ ಜಿಂದಾಲ್ ಸಂಬಳ 73,42,00,000

|
Google Oneindia Kannada News

Naveen Jindal tops executive pay chart with Rs 73.4cr package
ನವದೆಹಲಿ, ಸೆ 25: ಜಿಂದಾಲ್ ಸ್ಟೀಲ್ & ಪವರ್ ಲಿಮಿಟೆಡ್ ಸಂಸ್ಥೆಯ ಎಂಡಿ ನವೀನ್ ಜಿಂದಾಲ್ ಸತತವಾಗಿ ಎರಡನೇ ವರ್ಷವೂ ಅತಿ ಹೆಚ್ಚು ಸಂಬಳ ಪಡೆಯುವವರ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿ ವಿರಾಜಮಾನರಾಗಿದ್ದಾರೆ.

2011-12ರ ಆರ್ಥಿಕ ವರ್ಷದಲ್ಲಿ ನವೀನ್ ಜಿಂದಾಲ್ ಅವರ ವಾರ್ಷಿಕ ಸಂಬಳ 73 ಕೋಟಿ 42 ಲಕ್ಷ. ಇದರಲ್ಲಿ ವೇತನ, ಇತರ ಸೌಲಭ್ಯ ಭತ್ಯೆಗಳು, ಲಾಭದಲ್ಲಿ ನೀಡುವ ಲಾಭಾಂಶ ಮೊತ್ತಗಳು ಸೇರಿವೆ. 2010-11ರ ಆರ್ಥಿಕ ವರ್ಷಕ್ಕಿಂತ ಜಿಂದಾಲ್ ಅವರ ವೇತನದಲ್ಲಿ ವಾರ್ಷಿಕ ಆರು ಕೋಟಿ ರೂಪಾಯಿ ಹೆಚ್ಚಾಗಿದೆ.

ಕಳೆದ ಎರಡು ವರ್ಷಗಳಿಂದ ಅತ್ಯಂತ ಹೆಚ್ಚು ಸಂಬಳ ಪಡೆಯುವರಲ್ಲಿ ಜಿಂದಾಲ್ ಮೊದಲ ಸ್ಥಾನದಲ್ಲಿದ್ದಾರೆ. ಈ ಹಿಂದೆ ಮೊದಲ ಸ್ಥಾನದಲ್ಲಿದ್ದ ಸನ್ ಟಿವಿ ಗ್ರೂಪಿನ ಮಾಲೀಕ ಕಲಾನಿಧಿ ಮಾರನ್ ಅವರನ್ನು ಹಿಂದಿಕ್ಕಿ ಜಿಂದಾಲ್ ಮೊದಲನೇ ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಅತಿ ಹೆಚ್ಚು ವೇತನ ಪಡೆಯುತ್ತಿರುವವರ ಪಟ್ಟಿ ಇಂತಿದೆ:

ನವೀನ್ ಜಿಂದಾಲ್ - 73 ಕೋಟಿ 42 ಲಕ್ಷ (ಜಿಂದಾಲ್ ಸ್ಟೀಲ್ & ಪವರ್ ಲಿಮಿಟೆಡ್ )
ಕಲಾನಿಧಿ ಮಾರನ್ ಮತ್ತು ಕಾವೇರಿ ಮಾರನ್ - ತಲಾ 57 ಕೋಟಿ ಒಂದು ಲಕ್ಷ (ಸನ್ ಟಿವಿ ನೆಟ್ವರ್ಕ್)
ಪವನ್ ಮುಂಜಾಲ್ - 34 ಕೋಟಿ 47 ಲಕ್ಷ ( ಹೀರೋ ಮೋಟಾರ್ ಕ್ರಾಪ್)
ಬ್ರಿಜ್ ಮೋಹನ್ ಲಾಲ್ ಮುಂಜಾಲ್ - 34 ಕೋಟಿ 44 ಲಕ್ಷ ( ಹೀರೋ ಮೋಟಾರ್ ಕ್ರಾಪ್)
ಪಿಆರ್ಆರ್ ರಜಾ - 29 ಕೋಟಿ 34 ಲಕ್ಷ (ಮದ್ರಾಸ್ ಸಿಮೆಂಟ್)
ಶಿನೋ ನಕಾನಿಶಿ - 28 ಕೋಟಿ 14 ಲಕ್ಷ (ಮಾರುತಿ ಸುಜುಕಿ)
ಬಿ ಜಿ ರಘುಪತಿ - 25 ಕೋಟಿ 98 ಲಕ್ಷ ( ಬಿಜಿಆರ್ ಎನರ್ಜಿ)
ಕಾರ್ಲ್ ಪೀಟರ್ ಫೋರ್ಸ್ಟರ್ - 23 ಕೋಟಿ 97 ಲಕ್ಷ ( ಟಾಟಾ ಮೋಟರ್ಸ್)
ಮುರಳಿ ಕೆ ದಿವಿ - 23 ಕೋಟಿ 15 ಲಕ್ಷ ( ದಿವಿ ಲ್ಯಾಬ್ )

image courtesy: www.naveenjindal.com

English summary
Chairman and Managing Director of Jindal Steel and Power Limited Mr. Naveen Jindal has remained top-paid executive for the second consecutive year. Jindal tops the executive pay charts for listed companies in the country with a package of Rs 73.42 crore for the last fiscal 2011-12, which grew by over Rs six crore from previous year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X