ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಳು ನಗರಗಳಲ್ಲಿ ಟಿವಿಗೆ ಸೆಟ್ ಟಾಪ್ ಬಾಕ್ಸ್ ಕಡ್ಡಾಯ

|
Google Oneindia Kannada News

7 cities from analog to digital format effective from Nov 1, 2012
ನವದೆಹಲಿ, ಸೆ 24: ಕೇಂದ್ರ ಸರಕಾರದ ಹೊಸ ನೀತಿಯ ಅನ್ವಯ ಅನಲಾಗ್ ತಂತ್ರಜ್ಞಾನದಿಂದ ಪ್ರಸಾರವಾಗುತ್ತಿರುವ ಕೇಬಲ್ ಟಿವಿಗಳು ಡಿಜಿಟಲ್ ತಂತ್ರಜ್ಞಾನಕ್ಕೆ ವರ್ಗವಾಗುವುದನ್ನು ಕಡ್ಡಾಯಗೊಳಿಸಿದೆ.

ಹೀಗಾಗಿ ನವೆಂಬರ್ ಒಂದರೊಳಗೆ ಕೇಬಲ್ ಮೂಲಕ ಟಿವಿ ವೀಕ್ಷಕರು ತಮ್ಮತಮ್ಮ ಟಿವಿಗಳಿಗೆ ಸೆಟ್ ಟಾಪ್ ಬಾಕ್ಸ್ ಹಾಕಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಇದರ ಮೊದಲ ಹಂತವಾಗಿ ಕೇಂದ್ರ ಸರ್ಕಾರ ಒಟ್ಟು ಏಳು ನಗರಗಳಲ್ಲಿ ಸೆಟ್ ಟಾಪ್ ಬಾಕ್ಸ್ ಹಾಕಿಕೊಳ್ಳಲು ನವೆಂಬರ್ ಒಂದರ ಗಡುವು ನೀಡಿದೆ.

ದೇಶದ ನಾಲ್ಕು ಮಹಾನಗರಗಳಾದ ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ ಅಲ್ಲದೆ ದೆಹಲಿ ವ್ಯಾಪ್ತಿಗೆ ಬರುವ NCR ( National Capital Region) ಎಂದು ಕರೆಯಲ್ಪಡುವ ಫರಿದಾಬಾದ್, ಗುರಗಾಂವ್ ಮತ್ತು ನೋಯ್ಡಾ ನಗರಗಳಲ್ಲಿ ಕೂಡಾ ಈ ಹೊಸ ಪದ್ಧತಿ ಜಾರಿಗೆ ಬರಲಿವೆ.

ಈಗಾಗಲೇ ರಾಷ್ಟ್ರೀಯ ಚಾನೆಲ್ ಮತ್ತು ಕ್ರೀಡಾ ಚಾನೆಲ್ ಗಳು ಸೆಟ್ ಟಾಪ್ ಬಾಕ್ಸ್ ಕಡ್ಡಾಯದ ಬಗ್ಗೆ ಪ್ರಕಟಣೆ ಹೊರಡಿಸಿದೆ. ವೀಕ್ಷಕರು ತಮ್ಮತಮ್ಮ ಕೇಬಲ್ ಆಪರೇಟರ್ ಗಳನ್ನು ಸಂಪರ್ಕಿಸಲು ಕೋರಿವೆ.

ಡಿಸೆಂಬರ್ 31, 2014 ರೊಳಗೆ ದೇಶಾದ್ಯಂತ ಕೇಬಲ್ ಪ್ರಸಾರವನ್ನು ಡಿಜಿಟಲೀಕರಣ ಮಾಡಲು ಕೇಂದ್ರ ಸರಕಾರ ನಿರ್ಧರಿಸಿದೆ.

ಡಿಜಿಟಲ್ ತಂತ್ರಜ್ಞಾನ ಅನ್ವಯವಾದ ನಂತರ Conditional Access System (CAS) ಅನ್ನು ಕೇಬಲ್ ಟಿವಿ ಆಪರೇಟರ್ ಗಳು ಬಳಸಿಕೊಳ್ಳಬೇಕಾಗುತ್ತದೆ. ಹಾಗಾಗಿ ಆಪರೇಟರ್ ಗಳು ಪಾವತಿ ಮಾಡದ ಚಾನೆಲ್ ಗಳು ಪ್ರಸಾರವಾಗುವುದಿಲ್ಲ. ಕೇಬಲ್ ಟಿವಿ ಡಿಜಿಟಲೀಕರಣ ಗೊಳಿಸುವುದಕ್ಕೆ ಲೋಕಸಭೆಯಲ್ಲಿ ಮಸೂದೆ ಆಂಗೀಕರಿಸಲಾಗಿತ್ತು.

ಡಿಜಿಟಲ್ ಸೆಟ್ ಟಾಪ್ ಬಾಕ್ಸ್ ಬೆಲೆ ರೂಪಾಯಿ 900 ರಿಂದ 1200 ರವರೆಗಿದೆ.

English summary
The Central Government aims to switch the entire cable industry from analog to Digital format by the 31st of December, 2014. For the first phase government made compulsory in 7 cities put set top boxes within November 1, 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X