ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಗತ್ ಸಿಂಗ್ ಭಾವಚಿತ್ರದ 5ರೂಪಾಯಿಯ ಹೊಸ ನಾಣ್ಯ

|
Google Oneindia Kannada News

RBI to issue new Rs. 5 coin in memory of Bhagat Singh
ಮುಂಬೈ, ಸೆ 24: ಮಹಾನ್ ಕ್ರಾಂತಿಕಾರ ಮತ್ತು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಶಹೀದ್ ಭಗತ್ ಸಿಂಗ್ ಸ್ಮರಣಾರ್ಥ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅವರ ಭಾವಚಿತ್ರವಿರುವ ಐದು ರೂಪಾಯಿಯ ಹೊಸ ನಾಣ್ಯ ಬಿಡುಗಡೆ ಮಾಡಲಿದೆ.

ನಾಣ್ಯದ ಒಂದು ಭಾಗದಲ್ಲಿ ಭಗತ್ ಸಿಂಗ್ ಅವರ ಭಾವಚಿತ್ರ ಮತ್ತು " Shahid Bhagat Singh Birth Centenary " ಎಂದು ಬರೆಯಲಾಗಿದೆ. ಮತ್ತು ಇದರ ಕೆಳಗೆ ಇಸವಿ 1907 -2007 ಎಂದು ನಮೂದಿಸಲಾಗಿವೆ.

23 ಎಂಎಂ ದಪ್ಪವಿರುವ ಈ ನಾಣ್ಯವನ್ನು ಕಬ್ಬಿಣ ಮತ್ತು ಹಳದಿ ಬಣ್ಣದ ಲೋಹದಿಂದ ತಯಾರಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಮಾರ್ಚ್ 23, 1931 ರಂದು ಭಗತ್ ಸಿಂಗ್ ಅವರನ್ನು ಗಲ್ಲಿಗೇರಿಸಲಾಗಿತ್ತು.

ಲಾಹೋರ್ ಷಡ್ಯಂತ್ರದ ಕೇಸ್ ನಲ್ಲಿ ಭಗತ್ ಸಿಂಗ್, ರಾಜ್ ಗುರು ಹಾಗೂ ಸುಖದೇವ್ ಅವರಿಗೆ ಸರ್ಕಾರ ಗಲ್ಲು ಶಿಕ್ಷೆ ಘೋಷಿಸಿತ್ತು. ಮಾ.24ರಂದು ಮೂವರಿಗೆ ಗಲ್ಲು ಎಂದು ಪ್ರಕಟಿಸಲಾಗಿತ್ತು. ಆದರೆ ಒಂದು ದಿನ ಮೊದಲೇ ಭಗತ್ ಸಿಂಗ್ ಹುತಾತ್ಮರಾದರು.

English summary
Reserve bank of India will soon bring out Rs 5 coin to commemorate freedom fighter and martyr Shahid Bhagat Singh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X