ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಏರಿಕೆ

By Mahesh
|
Google Oneindia Kannada News

Central government employees, pensioners get 7% DA hike
ನವದೆಹಲಿ, ಸೆ.24 : ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ dearness allowance (DA) ಏರಿಕೆ ಮಾಡುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಸೋಮವಾರ (ಸೆ.24) ಅಸ್ತು ಎಂದಿದೆ. ಇದರಿಂದ ಸುಮಾರು 80 ಲಕ್ಷ ಸರ್ಕಾರಿ ನೌಕರರಿಗೆ ಸರ್ಕಾರ ಸೋಮವಾರ ಸಂಜೆ ಸಿಹಿ ಸುದ್ದಿ ನೀಡಿದೆ.

ಡೀಸೆಲ್ ಬೆಲೆ ಏರಿಕೆ, ಬಹುಬ್ರ್ಯಾಂಡ್ ಚಿಲ್ಲರೆ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳ ಹೂಡಿಕೆ, ಅತಿಯಾದ ಹಣದುಬ್ಬರದ ನಡುವೆ ತತ್ತರಿಸಿರುವ ನೌಕರ ವರ್ಗವನ್ನು ಓಲೈಸಿಕೊಳ್ಳಲು ಕೇಂದ್ರದ ಯುಪಿಎ ಸರ್ಕಾರ ಮುಂದಾಗಿದೆ ಎಂದು ವಿಪಕ್ಷಗಳು ಆರೋಪಿಸಿದರೂ ನೌಕರರ ವರ್ಗ ಸರ್ಕಾರದ ಕ್ರಮವನ್ನು ಸ್ವಾಗತಿಸಿದೆ.

ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಘೋಷಿಸಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಜುಲೈ 2012 ರಿಂದ ಫೆಬ್ರವರಿ 2013 ರ ಅವಧಿಯಲ್ಲಿ ಸುಮಾರು 5,000 ಕೋಟಿ ಹೆಚ್ಚಿನ ಹೊರೆ ಬೀಳಲಿದೆ. ಹಾಗೂ ಪೂರ್ಣ ಆರ್ಥಿಕ ವರ್ಷದ ಅವಧಿಯಲ್ಲಿ 7,400 ಕೋಟಿ ರು ಹೆಚ್ಚಿನ ಹೊರೆ ಸರ್ಕಾರಕ್ಕೆ ಭರಿಸಬೇಕಾಗುತ್ತದೆ.

ಶೇ 65 ರಿಂದ ಶೇ 72ಕ್ಕೆ ತುಟ್ಟಿಭತ್ಯೆ ಹೆಚ್ಚಿಸಲಾಗಿದ್ದು, ಶೇ 7ರಷ್ಟು ಡಿಎ ಏರಿಕೆಯಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ 50 ಲಕ್ಷ ಉದ್ಯೋಗಿಗಳಿಗೆ ಹಾಗೂ 30 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ.

ಪರಿಷ್ಕೃತ ತುಟ್ಟಿಭತ್ಯೆ ಲೆಕ್ಕಾಚಾರ ಜು.1, 2012ರಂತೆ ಅನ್ವಯವಾಗಲಿದೆ. ಕಳೆದ ಮಾರ್ಚ್ ನಲ್ಲಿ ತುಟ್ಟಿಭತ್ಯೆ ಶೇ 6ರಷ್ಟು ಹೆಚ್ಚಳ ಮಾಡಲಾಗಿತ್ತು. ಡಿಎ ದರ ವನ್ನು ಜನವರಿ 1, 2012ಕ್ಕೆ ಅನ್ವಯವಾಗುವಂತೆ ಶೇ 58 ರಿಂದ ಶೇ 65 ಕ್ಕೆ ಏರಿಸಿತ್ತು.

ಕೈಗಾರಿಕಾ ನೌಕರರಿಗೆ ಹೊಂದಿಕೊಂಡಂತೆ ಗ್ರಾಹಕ ದರ ಸೂಚಿ ನೋಡಿಕೊಂಡು ಆಗಾಗ್ಗೆ ಡಿಎ ಏರಿಸುವುದು ಸರ್ಕಾರದ ಪರಿಪಾಠವಾಗಿದೆ. ರೀಟೈಲ್ ದರ ಆಧಾರದ ಮೇಲೆ ಗ್ರಾಹಕ ದರ ಸೂಚಿ ಅಗಸ್ಟ್ ನಲ್ಲಿ 10.03% ನಷ್ಟಿತ್ತು.

ಡೀಸೆಲ್ ಬೆಲೆ ಏರಿಕೆ, ಬಹುಬ್ರ್ಯಾಂಡ್ ಚಿಲ್ಲರೆ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳ ಹೂಡಿಕೆ ವಿರುದ್ಧ ಬಿಜೆಪಿ ನೇತೃತದ ಎನ್ ಡಿಎ ಕರೆ ನೀಡಿದ್ದ ಭಾರತ್ ಬಂದ್ ಬಹುತೇಕ ಯಶಸ್ವಿಯಾದ ಬೆನ್ನಲ್ಲೇ ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಏರಿಕೆ ಮಾಡುವ ಸುದ್ದಿ ಬಂದಿತ್ತು.

ತುಟ್ಟಿ ಭತ್ಯೆ(dearness allowance): ಭಾರತದಲ್ಲಿ, ತುಟ್ಟಿಭತ್ಯೆಯು ಒಬ್ಬ ವ್ಯಕ್ತಿಯ ಸಂಬಳದ ಭಾಗವಾಗಿದೆ ತುಟ್ಟಿಭತ್ಯೆಯನ್ನು ಮೂಲ ಸಂಬಳದ ಶೇಕಡಾವಾರು ಲೆಕ್ಕವಾಗಿ ಲೆಕ್ಕಮಾಡಲಾಗುತ್ತದೆ.

ನಂತರ, ಈ ಮೊತ್ತವನ್ನು ಮನೆ ಬಾಡಿಗೆ ಭತ್ಯೆಯ ಜೊತೆಗೆ ಮೂಲ ಸಂಬಳಕ್ಕೆ ಸೇರಿಸಿ ಒಟ್ಟು ಸಂಬಳವನ್ನು ಪಡೆಯಲಾಗುತ್ತದೆ. ದರಗಳು ಗ್ರಾಮೀಣ/ನಗರ ಪ್ರದೇಶಗಳ ಪ್ರಕಾರ ಬದಲಾಗುತ್ತವೆ.

English summary
Reeling under the impact of diesel price hike and high inflation, the 80 lakh central government employees and pensioners will get seven percent increase in dearness allowance (DA) as per the decision taken by union cabinet today(Sep.24)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X