ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2013ರಿಂದ ರೋಮಿಂಗ್ ಉಚಿತ: ಕಪಿಲ್ ಸಿಬಲ್

By Mahesh
|
Google Oneindia Kannada News

Kapil Sibal
ನವದೆಹಲಿ, ಸೆ.24: ಕಳೆದ ಮೇ ತಿಂಗಳಿನಲ್ಲಿ ಭಾರತ್ ಬಂದ್ ಆಚರಣೆಯಾದ ತಕ್ಷಣವೇ ಹೊಸ ದೂರಸಂಪರ್ಕ ನೀತಿ-2012 ಯನ್ನು ಪ್ರಕಟಿಸಿ ಮೊಬೈಲ್, ಇಂಟರ್ನೆಟ್ ಬಳಕೆದಾರರಿಗೆ ಯುಪಿಎ ಸಿಹಿ ಸುದ್ದಿ ನೀಡಿತ್ತು. ಈಗ ಮತ್ತೊಮ್ಮೆ ಭಾರತ್ ಬಂದ್ ಆದ ಕೆಲ ದಿನಗಳಲ್ಲಿ ಮತ್ತೊಮ್ಮೆ ಉಚಿತ ರೋಮಿಂಗ್ ಸೌಲಭ್ಯದ ಬಗ್ಗೆ ಮಾನ್ಯ ಟೆಲಿಕಾಂ ಸಚಿವ ಕಪಿಲ್ ಸಿಬಲ್ ಭರವಸೆ ನೀಡಿದ್ದಾರೆ.

ರೋಮಿಂಗ್ ಸೇವೆಗೆ ಶುಲ್ಕದಿಂದ ವಿನಾಯ್ತಿ, 2 ಎಂಬಿಪಿಎಸ್ ತನಕ ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಸೇವೆ ಎಲ್ಲರಿಗೂ ದೊರೆಯಲಿದೆ ಎಂದು ಪ್ರಕಟಿಸಿದ್ದ ದೂರ ಸಂಪರ್ಕ ಇಲಾಖೆ ಪ್ರಕಟಣೆಯನ್ನು ಮತ್ತೊಮ್ಮೆ ಕಪಿಲ್ ಸಿಬಲ್ ಅವರು ಚಾಚೂ ತಪ್ಪದೆ ಪುನರುಚ್ಚರಿಸಿದ್ದಾರೆ.

ರೋಮಿಂಗ್ ಉಚಿತ : ದೇಶದ ಯಾವುದೇ ಭಾಗದಲ್ಲಿ ಸೇವಾ ಸಂಸ್ಥೆ ಬದಲಿಸಿದರೂ, ಮೊಬೈಲ್ ಸಂಖ್ಯೆ ಬದಲಿಸುವ ಅಗತ್ಯ ಇರದ (ಎಂಎನ್‌ಪಿ) ಸೌಲಭ್ಯ ಒದಗಿಸಲು ಕೇಂದ್ರದ ಯುಪಿಎ ಸರ್ಕಾರ ಉದ್ದೇಶಿಸಿದೆ.

ದೇಶವ್ಯಾಪಿ 'ಎಂಎನ್‌ಪಿ' ಸೌಲಭ್ಯ,'ಒಂದು ದೇಶ- ಒಂದು ಲೈಸೆನ್ಸ್', 'ಒಂದು ದೇಶ ಉಚಿತ ರೋಮಿಂಗ್' ಸೌಲಭ್ಯ ಜಾರಿಗೆ ತರಲಾಗುವುದು ಇದರಿಂದ ಎಸ್ ಟಿಡಿ ಕರೆಗಳ ಅಂತರ ಕಡಿಮೆಯಾಗಲಿದೆ. ಈ ನೀತಿ ಅಳವಡಿಕೆಗೆ ಕೆಲ ಕಾಲ ಬೇಕಾಗುತ್ತದೆ ಎಂದು ಸಚಿವ ಕಪಿಲ್ ಹೇಳಿದ್ದಾರೆ.

ಬ್ರಾಡ್‌ಬ್ಯಾಂಡ್ ಸೇವೆಗೆ ಬದ್ಧ: ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಎಲ್ಲ ನಾಗರಿಕರು ಬ್ರಾಡ್‌ಬ್ಯಾಂಡ್ ಸೌಲಭ್ಯವನ್ನು ಬೇಡಿಕೆ ಆಧಾರದ ಮೇಲೆ ಪಡೆಯಬಹುದು. ಕನಿಷ್ಠ 2 Mbps ಡೌನ್ ಲೋಡ್ ಸ್ಪೀಡ್ ಇರುವ ಇಂಟರ್ನೆಟ್ ಜಾಲ ದೇಶದ ಮೂಲೆ ಮೂಲೆಗೂ ಹಬ್ಬಲಿದೆ. ಈ ನೀತಿ ಎಲ್ಲೆಡೆ ತಕ್ಷಣಕ್ಕೆ ಜಾರಿಗೆ ಬರಲಿದೆ. ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಇದೆ ಎಂದರೆ 2mbps ಸ್ಪೀಡ್ ಇರಲೇಬೇಕು.

ಹೊಸ ದೂರಸಂಪರ್ಕ ನೀತಿ-2012ಯನ್ನು ಮುಂದಿನ ಆರ್ಥಿಕ ವರ್ಷದಿಂದ ಜಾರಿಗೊಳಿಸಲಾಗುತ್ತದೆ. ಎಂಎನ್ ಪಿ ಸೌಲಭ್ಯದ ಮೂಲಕ ರೋಮಿಂಗ್ ಶುಲ್ಕವಿಲ್ಲದೆ ನಿರಂತರವಾಗಿ ಸೇವೆ ಪಡೆಯಬಹುದು ಎಂದು ಟೆಲಿಕಾಂ ಕಾರ್ಯದರ್ಶಿ ಆರ್ ಚಂದ್ರಶೇಖರ್ ಹೇಳಿದ್ದಾರೆ.
ಯುಪಿಎ ಸರ್ಕಾರದ ಟೆಲಿಕಾಂ ನೀತಿ, ಯೋಜನೆಗಳ ಮುಖ್ಯಾಂಶ ಇಂತಿದೆ:

* ಗ್ರಾಮೀಣ ಭಾಗದಲ್ಲಿ ದೂರ ಸಂಪರ್ಕ ಸಾಂದ್ರತೆಯನ್ನು 2017ರೊಳಗೆ ಶೇ 39 ರಿಂದ 70ಕ್ಕೆ ಏರಿಸುವುದು
* ಒಂದೇ ತರಂಗಗುಚ್ಛದಲ್ಲಿದ್ದರೆ ಯಾವುದೇ ತಂತ್ರಜ್ಞಾನ, ಯಾವುದೇ ಸೇವೆ ಲಭ್ಯವಾಗುವಂತೆ ಮಾಡುವುದು.
* ಟೆಲಿಕಾಂ ಲೈಸನ್ಸ್, ಡೀಲಿಂಕಿಂಗ್ ಸ್ಪೆಕ್ಟಂ ಲೈಸನ್ಸ್, ಆನ್ ಲೈನ್ ಅರ್ಜಿ ಹಾಗೂ ನಿರ್ವಹಣೆ
* ಎಂಎನ್‌ಪಿ' ಸೌಲಭ್ಯ,'ಒಂದು ದೇಶ- ಒಂದು ಲೈಸೆನ್ಸ್', 'ಒಂದು ದೇಶ ಉಚಿತ ರೋಮಿಂಗ್' ಸೌಲಭ್ಯ
* Voice over Internet Protocol
* ಕ್ಲೌಡ್ ಕಂಪ್ಯೂಟಿಂಗ್, ಉನ್ನತ ತಂತ್ರಜ್ಞಾನ ಅಳವಡಿಕೆ, IPV6 ಜಾಲ ಬಳಕೆ.
2020 ಹೊತ್ತಿಗೆ ಶೇ 100ರಷ್ಟು ದೂರ ಸಂಪರ್ಕ ಜಾಲವನ್ನು ಗ್ರಾಮೀಣ ಭಾಗದಲ್ಲಿ ಹೊಂದುವುದು.
* ಮೊಬೈಲ್ ಫೋನ್ ಗಳನ್ನು ಆರ್ಥಿಕ, ಸಮಾಜಿಕ ಸಬಲೀಕರಣಕ್ಕೆ ಬಳಸುವುದು.
* ಎಲ್ಲರಿಗೂ ಬ್ರಾಡ್ ಬ್ಯಾಂಡ್ 2 ಎಂಬಿಪಿಎಸ್ ಕನಿಷ್ಠ ಡೌನ್ಲೋಡ್ ಮಿತಿ

ಮುಂತಾದ ಪ್ರಮುಖಾಂಶಗಳು ಹೊಸ ದೂರಸಂಪರ್ಕ ನೀತಿ-2012ಯಲ್ಲಿ ಹೇಳಲಾಗಿದೆ. ಇದರ ಅಳವಡಿಕೆಗೆ ಹರಾಜು ಪ್ರಕ್ರಿಯೆ ನಡೆಸಿ ಸ್ಪೆಕ್ಟ್ರಂ ಹಂಚಿಕೆ ಆದ ನಂತರ ಲೈಸನ್ಸ್ ನೀಡಲಾಗುವುದು ಎಂದು ಚಂದ್ರಶೇಖರ್ ಹೇಳಿದ್ದಾರೆ

English summary
Good news for mobile phone users in India. Telecom ministry has decided to remove roaming charges from 2013. Telecom Minister Kapil Sibal on Monday, Sep 23 stated that mobile phone subscribers will not have to pay extra charges while travelling or staying in a different state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X