ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಂಟಿಸಿ, ಕೆಎಸ್ಸಾರ್ಟಿಸಿ ಪ್ರಯಾಣ ದರ ಏರಿಕೆಗೆ ಸಜ್ಜು

By Srinath
|
Google Oneindia Kannada News

diesel-hike-effect-ksrtc-bmtc-bus-fares-to-go-up
ಬೆಂಗಳೂರು, ಸೆ. 22: ಒಂದೇ ಸಮನೆ ಬೆಲೆ ಏರಿಕೆಗೆ ಸಿಕ್ಕಿ ನಜ್ಜುಗುಜ್ಜಾಗಿರುವ ಜನರಿಗೆ ಈ ಬಾರಿ ಬಸ್ ಪ್ರಯಾಣ ದರ ಏರಿಕೆ ಬಿಸಿ ಮುಟ್ಟಿಸಲು ಸರಕಾರ ಸಿದ್ಧವಾಗಿದೆ. ಡೀಸೆಲ್ ಬೆಲೆ ಏರಿಕೆ, ಮೊನ್ನೆ ನೌಕರರ ಮುಷ್ಕರದಿಂದಾಗಿ ಸಂಸ್ಥೆಯ ಮೇಲೆ ಸಾಕಷ್ಟು ಹೊರೆ ಬಿದ್ದಿದೆ.

ಇದರಿಂದ ಬಚಾವಾಗಲು ಪ್ರಯಾಣ ದರ ಏರಿಕೆ ಅನಿವಾರ್ಯ. ಆದ್ದರಿಂದ ಪ್ರಯಾಣ ದರ ಏರಿಸಿ ಎಂದು ಬಿಎಂಟಿಸಿ, ಕೆಎಸ್ಸಾರ್ಟಿಸಿ ಸಂಸ್ಥೆಗಳು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಕಳೆದ ಬಾರಿ 2011ರ ಜೂನ್ ತಿಂಗಳಲ್ಲಿ ಡೀಸೆಲ್ ಬೆಲೆ ಏರಿದಾಗ ಬಿಎಂಟಿಸಿ ಕನಿಷ್ಠ 2 ರೂ. ಮತ್ತು ಕೆಎಸ್ಸಾರ್ಟಿಸಿ ಕನಿಷ್ಠ ಶೇ. 5-8 ಪ್ರಮಾಣದಲ್ಲಿ ಪ್ರಯಾಣ ದರ ಏರಿಸಿತ್ತು.

ದುರ್ಭಿಕ್ಷದಲ್ಲಿ ಅಧಿಕ ಮಾಸ: ಮುಖ್ಯವಾಗಿ ಡೀಸೆಲ್ ಬೆಲೆ ಏರಿಕೆ, ಮೊನ್ನೆ ನೌಕರರ ಮುಷ್ಕರದಿಂದಾದ ಲುಕ್ಸಾನು, ನೌಕರರ ಭತ್ಯೆ ಹೆಚ್ಚಳದ ಹೊರೆ ಸಂಸ್ಥೆಯ ಲಾಭವನ್ನು ಸಾಕಷ್ಟು ಕುಗ್ಗಿಸಲಿದೆ. ನೌಕರರ ಸಂಬಳ ಬೇಡಿಕೆಗೆ ಅಸ್ತು ಎಂದಿರುವುದರಿಂದ ತಕ್ಷಣಕ್ಕೆ ಸಾರಿಗೆ ಸಂಸ್ಥೆಗೆ 2,600 ಕೋಟಿ ರೂ. ಹೆಚ್ಚುವರಿ ಹಣ ಬೇಕಾಗಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಸರಕಾರ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಆದರೆ ಸರಕಾರ ಇದರ ಬಗ್ಗೆ ಯಾವುದೇ ಭರವಸೆ ನೀಡಿಲ್ಲ.

ಡೀಸೆಲ್ ಬೆಲೆ ಹೆಚ್ಚಾದಾಗಲೆಲ್ಲ ಬಸ್ ದರ ಏರಿಸುವುದು ವಾಡಿಕೆ:
ಆದ್ದರಿಂದ ಪ್ರಯಾಣ ದರ ಏರಿಕೆ ಅನಿವಾರ್ಯ ಎಂದು ಸಾರಿಗೆ ಸಂಸ್ಥೆಗಳು ಅಲವತ್ತುಕೊಂಡಿವೆ. ಆದ್ದರಿಂದ ಪ್ರಯಾಣ ದರ ಏರಿಕೆ ಬಗ್ಗೆ ಸರಕಾರ ಅನಿವಾರ್ಯವಾಗಿ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಹೇಳುತ್ತಾರೆ.

ಗಮನಾರ್ಹವೆಂದರೆ, ಕೇಂದ್ರವು ಡೀಸೆಲ್ ದರವನ್ನು ಹೆಚ್ಚಿಸದಾಗಲೆಲ್ಲ ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾಪವನ್ನು ಸಾರಿಗೆ ಸಂಸ್ಥೆಗಳು ಅನಿವಾರ್ಯವಾಗಿ ಸರಕಾರಕ್ಕೆ ಕಳಿಸಿಕೊಟ್ಟಿವೆ. ಮತ್ತು ಸರಕಾರ ಅದಕ್ಕೆ ತಕ್ಷಣ ಅಸ್ತು ಎನ್ನುವುದು ವಾಡಿಕೆ. ಇದನ್ನೆಲ್ಲ ನೋಡಿದಾಗ ಸಾರಿಗೆ ಸಚಿವ ಆರ್. ಅಶೋಕ್ ಅವರು ಯಾವುದೇ ಕಾರಣಕ್ಕೂ ಪ್ರಯಾಣ ದರ ಏರಿಸುವುದಿಲ್ಲ ಎಂದಿರುವುದು ಕೇವಲ ರಾಜಕೀಯ ಹೇಳಿಕೆಯಾಗಿದೆ ಎನಿಸುತ್ತಿದೆ.

ಮೊನ್ನೆ ಕೇಂದ್ರ ಸರಕಾರ ಡೀಸೆಲ್ ಬೆಲೆ (5 ರೂ) ಹೆಚ್ಚಿಸಿರುವುದರಿಂದ ಕೆಎಸ್ಸಾರ್ಟಿಸಿಗೆ ವಾರ್ಷಿಕ 100 ಕೋಟಿ ರೂ. ಹೊರೆ ಬೀಳಲಿದೆ. ಇದರ ಜತೆಗೆ ದುರ್ಭಿಕ್ಷದಲ್ಲಿ ಅಧಿಕ ಮಾಸವೆಂಬಂತೆ ನೌಕರರು ಮುಷ್ಕರ ನಡೆಸಿ, ನಿಗಮಕ್ಕೆ 10 ಕೋಟಿ ರೂ. ನಷ್ಟವನ್ನುಂಟುಮಾಡಿದ್ದಾರೆ.

English summary
Recent diesel price hike by Union Govt effects an increase in KSRTC and BMTC bus fares hike in Karnataka. A GO regadoing this may coime out any moment. Both KSRTC and BMTC have sent proposals to the State government seeking a fare revision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X