ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ: ಪ್ರಧಾನಿ ಸಿಂಗ್ ನಿಲುವಿಗೆ ದೇವೇಗೌಡ ಕಿಡಿಕಿಡಿ

By Srinath
|
Google Oneindia Kannada News

hd-deve-gowda-criticises-pm-singh-cauvery-formula
ಬೆಂಗಳೂರು, ಸೆ.21: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡಿ ಎಂದಿರುವ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರನ್ನು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ನೀರು ಹಂಚಿಕೆಗೆ ಸಂಬಂಧಿಸಿದಂತೆ ವಾಸ್ತವವನ್ನು ವಿವರಿಸಿ ಪ್ರಧಾನಿಯವರಿಗೆ ತಾನು ಕ್ಷಣವೇ ಪತ್ರ ಬರೆಯುವುದಾಗಿ ದೇವೇಗೌಡರು ತಿಳಿಸಿದ್ದಾರೆ.

ಶುಕ್ರವಾರ ಬೆಳಗ್ಗೆ ಪಕ್ಷದ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೇವೇಗೌಡ, ವಸ್ತುಸ್ಥಿತಿ ಅರಿಯದೆ ಪ್ರಧಾನಿ ಸಿಂಗ್ ಇಂತಹ ತಪ್ಪು ನಿರ್ಧಾರ ತೆಗೆದುಕೊಂಡಿದ್ದಾರೆ. ಪ್ರಧಾನಿ ಮನಮೋಹನ್ ಸಿಂಗ್ ಪ್ರಕಟಿಸಿರುವ 'ರಾಜಕೀಯ ನಿರ್ಧಾರವನ್ನು' ಸರ್ವಥಾ ಒಪ್ಪಲಾಗದು ಎಂದು ದೇವೇಗೌಡ ಸ್ಪಷ್ಟ ನುಡಿಗಳಲ್ಲಿ ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ ಮೂರು ಬೆಳೆ ಬೆಳೆಯಲಾಗುತ್ತದೆ. ಆದರೆ ಕರ್ನಾಟಕದಲ್ಲಿ ಎರಡು ಬೆಳೆ ಬೆಳೆಯಲಾಗುತ್ತದೆ. ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಪರಿಸ್ಥಿತಿಯ ಅವಲೋಕನಕ್ಕೆ ಎರಡು ರಾಜ್ಯಗಳಿಗೂ ಸಮಿತಿಯನ್ನು ಕಳುಹಿಸಬೇಕಿತ್ತು.

ಈ ಬಗ್ಗೆ ಪ್ರಧಾನಿ ಸಿಂಗ್ ವಾಸ್ತವಾಂಶ ತಿಳಿಯಬೇಕಿತ್ತು. ಆದರೆ ದಿಲ್ಲಿಯಲ್ಲಿ ನಡೆದ ಪ್ರಾಧಿಕಾರದ ಸಭೆಯಲ್ಲಿ ವಾಸ್ತವವನ್ನು ಪರಿಗಣಿಸಿಲ್ಲ. ವಾಸ್ತವ ತಿಳಿದಿದ್ದರೆ ಪ್ರಧಾನಿ ಈ ನಿರ್ಧಾರ ಪ್ರಕಟಿಸುತ್ತಿರಲಿಲ್ಲ ಎಂದು ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಜಲಾಶಯಗಳಲ್ಲಿನ ನೀರಿನ ಮಟ್ಟ ಅವಲೋಕಿಸಿದರೆ ಪ್ರಧಾನಿಯ ನಿರ್ಧಾರಕ್ಕೆ ಮಣೆಹಾಕಲು ಸಾಧ್ಯವಾಗದು. ಕಳೆದ 40 ವರ್ಷಗಳಲ್ಲಿ ಕರ್ನಾಟಕ ಇಂತಹ ಭೀಕರ ಬರವನ್ನು ಎದುರಿಸಿರಲಿಲ್ಲ. 155 ತಾಲೂಕುಗಳು ಭೀಕರ ಬರದಿಂದ ತತ್ತರಿಸಿವೆ. ಬೆಂಗಳೂರು, ಮೈಸೂರು, ಮಂಡ್ಯ ಮತ್ತು ಹಾಸನ ಜಿಲ್ಲೆಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ. ಅಂತಹುದರಲ್ಲಿ ಪ್ರಧಾನಿಯ ನ್ಯಾಯಸಮ್ಮತವಲ್ಲದ ನಿರ್ದೇಶನವನ್ನು ಪರಿಗಣಿಸುವುದಾದರೂ ಹೇಗೆ? ಎಂದು ಅವರು ಕಿಡಿಕಾರಿದರು.

ಎಲ್ಲ ಕನ್ನಡ ಪರ ಸಂಘಟನೆಗಳು ಚಳವಳಿಗೆ ಕೈಜೋಡಿಸಬೇಕು:
ಈ ಮಧ್ಯೆ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿಎ ನಾರಾಯಣ ಗೌಡರು 'ಪ್ರಧಾನಿಯ ಕಾವೇರಿ ನದಿ ನೀರು ಹಂಚಿಕೆ ನೀತಿ'ಯನ್ನು ಬಲವಾಗಿ ಖಂಡಿಸಿದ್ದಾರೆ. ಇದು ರಾಜ್ಯದ ಜನತೆಗೆ ಪ್ರಧಾನಿ ಎಸಗಿದ ದ್ರೋಹ. ಈ ಅನ್ಯಾಯವನ್ನು ಖಂಡಿಸಿ ಚಳವಳಿ ಹಮ್ಮಿಕೊಳ್ಳಲಾಗುವುದು. ಇದರ ವ್ಯಾಪ್ತಿಯನ್ನು ವಿಸ್ತರಿಸಿ, ಇಡೀ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದಿದ್ದಾರೆ.

ಈ ನಿಟ್ಟಿನಲ್ಲಿ, ಎಲ್ಲ ಕನ್ನಡ ಪರ ಸಂಘಟನೆಗಳು ಚಳವಳಿಗೆ ಕೈಜೋಡಿಸಬೇಕು ಎಂದು ಕರವೇ ಅಧ್ಯಕ್ಷ ಟಿಎ ನಾರಾಯಣ ಗೌಡರು ಕರೆ ನೀಡಿದ್ದಾರೆ.

English summary
JDS Supremo and Ex PM HD Deve Gowda criticised the PM Singh's Cauvery formula in a press meet today (Sept 21) at Bangalore. He said he will write a letter PM Singh describing the realistic scenario of the Cauvery issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X