ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೀಬಾಕ್ 870 ಕೋ ವಂಚನೆ ಪ್ರಕರಣ, ಆರೋಪಿ ಸೆರೆ

By Mahesh
|
Google Oneindia Kannada News

Reebok's ex-MD, COO among five arrested for fraud
ಗುರ್ ಗಾಂವ್, ಸೆ.21: ಸುಮಾರು 870 ಕೋಟಿ ರು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸಿದ್ಧ ಶೂ ಹಾಗೂ ಕ್ರೀಡಾ ಉತ್ಪನ್ನ ಮಾರಾಟ ಸಂಸ್ಥೆ ರೀಬಾಕ್ ನ ಮಾಜಿ ಸಿಒಒ ಹಾಗೂ ವ್ಯವಸ್ಥಾಪಕ ನಿರ್ದೇಶಕರನ್ನು ಗುರ್ ಗಾವ್ ಪೊಲೀಸರು ಬಂಧಿಸಿ, ಕೋರ್ಟಿಗೆ ಹಾಜರು ಪಡಿಸಿದ್ದಾರೆ.

ವಂಚನೆ, ಕಂಪನಿ ನಿಯಮ ಉಲ್ಲಂಘನೆ,ಫೋರ್ಜರಿ ಆರೋಪದ ಮೇಲೆ ಮಾಜಿ ಎಂಡಿ ಸುಭಿಂದರ್ ಸಿಂಗ್ ಪ್ರೇಮ್, ಮಾಜಿ ಸಿಒಒ ವಿಷ್ಣು ಭಗತ್ ಅವರ ಮೇಲೆ ಆರೋಪ ಹೊರೆಸಲಾಗಿತ್ತು. ನಂತರ ಗುರ್ ಗಾಂವ್ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದರು. ಮಾ.26, 2012ಕ್ಕೆ ಈ ಇಬ್ಬರು ಸಂಸ್ಥೆಯನ್ನು ತೊರೆದಿದ್ದರು.

ಮಾಜಿ ವ್ಯವಸ್ಥಾಪಕ ನಿರ್ದೇಶಕ ಸುಭಿಂಧರ್ ಸಿಂಗ್, ಮಾಜಿ ಸಿಒಒ ವಿಷ್ನು ಭಗತ್, ಸಂಜಯ್ ಮಿಶ್ರಾ, ಪ್ರಶಾಂತ್ ಭಟ್ನಾಗರ್ ಹಾಗೂ ಸುರಕ್ಷಿತ್ ಭರ್ ಅವರನ್ನು ಬಂಧಿಸಲಾಗಿದೆ ಎಂದು ಎಸಿಪಿ ಭೂಪಿಂಧರ್ ಸಿಂಗ್ ಹೇಳಿದ್ದಾರೆ.

ಸುಮಾರು 16 ವರ್ಷಗಳ ರಿಬಾಕ್ ಸಂಸ್ಥೆಯಲ್ಲಿದ್ದ ಈ ಇಬ್ಬರು ಆರೋಪಿಗಳು ಗುಪ್ತವಾಗಿ ನಾಲ್ಕು ವೇರ್ ಹೌಸ್ ಗಳನ್ನು ನಡೆಸುತ್ತಿದ್ದರು. ರಿಬಾಕ್ ಸಂಸ್ಥೆಯ ಷೇರುಗಳ ಮೊತ್ತ ಕದ್ದಿರಿಸಲು ಈ ವೇರ್ ಹೌಸ್ ಗಳನ್ನು ಬಳಸುತ್ತಿದ್ದರು.

ರೀಬಾಕ್ ಹಾಗೂ ಅಡಿಡಾಸ್ ಸಮೂಹ ಸುಮಾರು 40,000 ಜನರ ಉದ್ಯೋಗದ ಮೇಲೆ ನೇರ ಅಥವಾ ಪರೋಕ್ಷವಾಗಿ ಈ ವಂಚನೆ ಪ್ರಭಾವ ಬೀರಲಿದೆ ಎಂದು ಸಂಸ್ಥೆಯ ಆರ್ಥಿಕ ನಿರ್ದೇಶಕ ಶಮೀಂ ಪಡತ್ ದೂರು ನೀಡಿದ್ದರು.

ಈ ಇಬ್ಬರು ಮಾಜಿ ಉದ್ಯೋಗಿಗಳ ಮೇಲೆ ಐಪಿಸಿ ಸೆಕ್ಷನ್ 406/408, 467/468, 477A ಹಾಗೂ 120B ಅನ್ವಯ ಪ್ರಕರಣ ದಾಖಲಾಗಿತ್ತು.

ಪೊಲೀಸ್ FIR ಕಾಪಿ ನೋಡಿದ ಆರೋಪಿಗಳು ಹೆಚ್ಚುವರಿ ಸೊನ್ನೆ ಸೇರಿರುವುದನ್ನು ನೋಡಿ ಸ್ವತಃ ಆರೋಪಿಗಳು ಹೌಹಾರಿದ್ದರು.

ನಂತರ ಪೊಲೀಸರು ಕೂಡಾ ಮತ್ತೊಮ್ಮೆ FIR ಕಾಪಿ ಪರೀಶಿಲಿಸಿ ಅವ್ಯವಹಾರದ ಮೊತ್ತ 8700 ಕೋಟಿ ರು ಅಲ್ಲ 870 ಕೋಟಿ ರು ಎಂದು ತಿದ್ದಿದ್ದರು. ಇದು typographical error ಸರಿಯಾದ ಮೊತ್ತವನ್ನು ದಾಖಲಿಸಲಾಗಿದೆ ಎಂದು ಗುರ್ ಗಾಂವ್ ವಿಶೇಷ ತನಿಖಾ ದಳ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

English summary
Reebok India's sacked MD Subhinder Singh and former COO Vishnu Bhagat were arrested along with three others for their alleged involvement in a Rs 870-crore fraud in the company.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X