ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ಲಾಂ ವಿರೋಧಿ ವಿಡಿಯೋ ಯೂ ಟ್ಯೂಬ್ ನಿಷೇಧ

By Mahesh
|
Google Oneindia Kannada News

Pakistan
ಇಸ್ಲಾಮಾಬಾದ್, ಸೆ.18: ಪ್ರವಾದಿ ಮಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ವಿಡಿಯೋ ಹೊಂದಿದ್ದ ಸುಮಾರು 700 ಯೂ ಟ್ಯೂ ಬ್ ಲಿಂಕ್ ಗಳನ್ನು ಪಾಕಿಸ್ತಾನ ಸರ್ಕಾರ ನಿಷೇಧಿಸಿದೆ. ಇಲ್ಲಿನ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.

ವಿಡಿಯೋ ಚಿತ್ರ ಖಂಡಿಸಿ ಯುಎಸ್ ವಿರೋಧಿ ಪ್ರತಿಭಟನೆಗಳು ವಿಶ್ವದಾದ್ಯಂತ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ಪಾಕಿಸ್ತಾನ ಟೆಲಿಕಮ್ಯೂನಿಕೇಷನ್ ಅಥಾರಿಟಿಗೆ ವಿಡಿಯೋ ಪ್ರಸಾರ ನಿರ್ಬಂಧಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ಲಭ್ಯ ಮಾಹಿತಿ ಪ್ರಕಾರ ಪಿಟಿಎ ನೀಡಿದ ನಿರ್ದೇಶನಗಳನ್ನು ಯೂಟ್ಯೂಬ್ ತಿರಸ್ಕರಿಸಿತ್ತು, ಹಾಗೂ ವಿವಾದಿತ ವಿಡಿಯೋ ಪ್ರಸಾರ ಅಬಾಧಿತವಾಗಿ ನಡೆಯುತ್ತಿತ್ತು.

ಸುಪ್ರೀಂಕೋರ್ಟ್ ಆದೇಶದ ನಂತರ ಹೇಳಿಕೆ ನೀಡಿರುವ ಪಾಕಿಸ್ತಾನ ಸರ್ಕಾರ, ಇದು ವಿವಾದಿತ 700ಕ್ಕೂ ಅಧಿಕ ವಿಡಿಯೋ ಲಿಂಕ್ ಗಳಿಗೆ ಮಾತ್ರ ಸೀಮಿತವಾಗಿದೆ. ಆದರೆ, ಯೂಟ್ಯೂಬ್ ಅಥವಾ ಫೇಸ್ ಬುಕ್ ನಿಷೇಧಿಸುವುದಿಲ್ಲ.

ಇಸ್ಲಾಂ ವಿರೋಧಿ ಪಠ್ಯ, ಚಿತ್ರ ಹಾಗೂ ವಿಡಿಯೋ ತುಣುಕುಗಳನ್ನು ಮಾತ್ರ ತೆಗೆದುಹಾಕಲಾಗುತ್ತದೆ ಎಂದು ಹೇಳಿದೆ.

ಭಾರತದಲ್ಲೂ ನಿರ್ಬಂಧ: ವಿವಾದಿತ ಚಿತ್ರದ ದೆಸೆಯಿಂದ ಜಗತ್ತಿನೆಲ್ಲೆಡೆ ಪ್ರತಿಭಟನೆ, ಹಿಂಸಾಚಾರ ಆರಂಭವಾಗಿ ಲಿಬಿಯಾ ದೇಶದ ಯುಎಸ್ ರಾಯಭಾರಿ ಹತ್ಯೆಯಾದ ನಂತರ ಗೂಗಲ್ ಇಂಡಿಯಾ ಎಚ್ಚೆತ್ತುಕೊಂಡಿದೆ.

ಭಾರತದಲ್ಲಿ ಇಸ್ಲಾಂ ವಿರೋಧಿ ಚಿತ್ರವನ್ನು ನಿಷೇಧಿಸಿರುವುದಾಗಿ ಹೇಳಿಕೊಂಡಿದೆ. ಆದರೆ, ಗೂಗಲ್ ಸರ್ಚ್ ನಲ್ಲಿ ಚಿತ್ರದ ಕ್ಲಿಪ್ಪಿಂಗ್ ಗಳು ಕಾಣಿಸಿಕೊಂಡಿತ್ತು.

ಭಾರತ, ಇಂಡೋನೇಷಿಯಾ, ಲಿಬಿಯಾ ಹಾಗೂ ಈಜಿಪ್ಟ್ ಸೇರಿದಂತೆ ಹಲವು ದೇಶಗಳಲ್ಲಿ ಈ ವಿಡಿಯೋ ಪ್ರಸಾರ ನಿರ್ಬಂಧಿಸಲಾಗಿದೆ. ಯೂಟ್ಯೂಬ್ ನಿಯಮಾವಳಿಗೆ ಧಕ್ಕೆ ತರುವಂತೆ ಇದ್ದರೆ ವಿಡಿಯೋ ತುಣುಕನ್ನು ಸಂಪೂರ್ಣವಾಗಿ ಕಿತ್ತುಹಾಕಲಾಗುತ್ತದೆ ಎಂದು ವೈಟ್ ಹೌಸ್ ನ ಅಧಿಕಾರಿಗಳಿಗೆ ಗೂಗಲ್ ಪ್ರತಿಕ್ರಿಯಿಸಿತ್ತು.

ಯುಎಸ್ ಮೂಲದ ನಿರ್ದೇಶಕ ತೆಗೆದಿರುವ ಈ ಚಿತ್ರದಲ್ಲಿ ಪ್ರವಾದಿ ಮಹಮ್ಮದ್ ಅವರನ್ನು ವಂಚಕ, ಶಿಶು ಕಾಮ ಪ್ರಚೋದಕ ಎಂಬಂತೆ ಚಿತ್ರಿಸಿ ಅವಹೇಳನ ಮಾಡಲಾಗಿತ್ತು. ಮಧ್ಯಪ್ರಾಚ್ಯ ದೇಶಗಳಲ್ಲಿ ವಿಡಿಯೋ ವಿರುದ್ಧ ಭಾರಿ ಪ್ರತಿಭಟನೆ ನಡೆದಿದೆ.
ಇಸ್ಲಾಂ ಧರ್ಮಗುರುಗಳ ಅವಹೇಳನ ಮಾಡಿರುವ ಆರೋಪ ಹೊತ್ತಿರುವ ಚಿತ್ರ ನಿರ್ದೇಶಕ ಸ್ಯಾಮ್ ಬಾಸಿಲ್ ನಾಪತ್ತೆಯಾಗಿದ್ದಾರೆ.

56 ವರ್ಷದ ಬಾಸಿಲ್ ಚಿತ್ರ ಸಾಹಿತಿ ಹಾಗೂ ನಿರ್ದೇಶಕ ಇಸ್ರೇಲಿ ಯಹೂದಿಯಾಗಿದ್ದು ತನ್ನ ಚಿತ್ರದ ಮೂಲಕ ಇಸ್ಲಾಂ ಧರ್ಮದ ನೂನ್ಯತೆಗಳನ್ನು ಸರಿಪಡಿಸಬಹುದು ಎಂದು ಹೇಳಿಕೆ ನೀಡಿದ್ದಾರೆ. ಅರೇಬಿಕ್ ಗೆ ಇವರ ಹೇಳಿಕೆಗಳು ತರ್ಜುಮೆಗೊಂಡು ಯೂಟ್ಯೂಬ್ ಪ್ರವೇಶಿಸಿತ್ತು.

ಬಾಸಿಲ್ ಹೇಳಿಕೆ ಹಾಗೂ ಚಿತ್ರವನ್ನು ವೀಕ್ಷಿಸಿದ ಮುಸ್ಲಿಮರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದಾರೆ. 'ಇಸ್ಲಾಂ ಕ್ಯಾನ್ಸರ್ ಇದ್ದಂತೆ' ಎಂದು ಹೇಳಿಕೆ ನೀಡಿರುವ ಬಾಸಿಲ್ ಗೆ ಯಾರೂ ಆಶ್ರಯ ನೀಡಬಾರದು ಬಾಸಿಲ್ ನಮ್ಮ ವಶಕ್ಕೆ ಒಪ್ಪಿಸಿ ಎಂದು ಆಕ್ರೋಶ ಭರಿತ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

English summary
Following the Supreme Court's order Pakistan on Monday, Sep 17 blocked 700 YouTube video links of the anti-Islam movie which criticised Prophet Muhammed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X