ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೇಮಸೌಧ ತಾಜ್ ಮಹಲ್ ಮಾರಾಟಕ್ಕಿದೆ

By Mahesh
|
Google Oneindia Kannada News

Taj Mahal
ಭೋಪಾಲ್, ಸೆ.18: ವಿಶ್ವದ ಮಹಾನ್ ಕಟ್ಟಡಗಳಲ್ಲಿ ಒಂದಾದ ಪ್ರೇಮಸೌಧ ತಾಜ್ ಮಹಲ್ ಈಗ ಬಿಕರಿಯಾಗುತ್ತಿದೆ. ಮೊಘಲ್ ದೊರೆ ಷಹಜಹಾನ್ ತನ್ನ ಪ್ರೀತಿಯ ಮಡದಿ ಮುಮ್ತಾಜ್ ಅವರ ನೆನಪಿಗಾಗಿ ಕಟ್ಟಿದ ತಾಜ್ ಮಹಲ್ ಈಗ ನಿಮ್ಮ ವಶಕ್ಕೆ ತೆಗೆದುಕೊಳ್ಳಬಹುದು.

ಈಗ ನಿಮ್ಮ ಬಳಿ 100 ಕೋಟಿ ರೂ ಇದ್ದರೆ ತಾಜ್ ಮಹಲ್ ನಿಮಗೆ ಕೊಡುತ್ತೇವೆ ಎಂಬ ಜಾಹೀರಾತು ನೋಡಿದರೆ ಯಾರಾದರೂ ಒಂದು ಕ್ಷಣ ಆಶ್ಚರ್ಯಚಕಿತರಾಗುತ್ತಾರೆ, ಸರ್ಕಾರಿ ಸ್ವಾಮ್ಯದ ಮೊಘಲ್ ಸಾಮ್ರಾಜ್ಯದ ಐತಿಹಾಸಿಕ ಕಟ್ಟಡವನ್ನು ಮಾರಾಟ ಮಾಡಲು ಹೇಗೆ ಸಾಧ್ಯ? ಎಂಬ ಪ್ರಶ್ನೆ ಮೂಡುವುದು ಸಹಜ.

ಆದರೆ, ಗುಜರಾತಿನ ಉದ್ಯಮಿ ಹನೀಫ್ ಸೈಯದ್ ಅವರು ತಾಜ್ ಮಹಲ್ ಕಟ್ಟಡವನ್ನು 100 ಕೋಟಿ ರೂ ಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಸಿದ್ಧತೆ ನಡೆಸಿದ್ದಾರೆ.. ಅರೇ ಸರಕಾರದ ಅಧೀನದಲ್ಲಿರುವ ತಾಜ್ ಮಹಲ್ ಕಟ್ಟಡವನ್ನು ಮಾರಾಟ ಮಾಡುವ ಹಕ್ಕು ಇವನಿಗೆ ಹೇಗೆ ಬಂತು ಅಂತೀರಾ..?

ಕುತೂಹಲದ ವಿಷಯವೆಂದರೆ, ಈಗ ಮಾರಾಟಕ್ಕೆ ಮುಂದಾಗಿರುವುದು ಆಗ್ರಾದ ತಾಜ್ ಮಹಲ್ ಕಟ್ಟಡವಲ್ಲ. ಆಗ್ರಾದ ತಾಜ್ ಮಹಲ್ ಅನ್ನು ನೇರವಾಗಿ ಹೋಲುವ ತಾಜ್ ಮಹಲ್ ಮಧ್ಯ ಪ್ರದೇಶದಲ್ಲಿದೆ.

1874 ರಲ್ಲಿ ಷಹಜಹಾನ್ ಕಟ್ಟಿದ ಆಗ್ರಾದ ತಾಜ್ ಮಹಲ್ ಇನ್ನೊಂದು ಈ ಉದ್ಯಮಿ ಹನೀಫ್ ಸಿದ್ಧಪಡಿಸಿದ ತಾಜ್ ಮಹಲ್. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಯತ್ನಿಸುತ್ತಿರುವ ಉದ್ಯಮಿ ಹನೀಪ್ ಅವರ ತಾಜ್ ಮಹಲ್ ಯಾರು ಪಾಲಾಗಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಮಧ್ಯ ಪ್ರದೇಶದ ರಾಜಧಾನಿ ಬೋಪಾಲ್ ನಲ್ಲಿ ಎರಡು ತಾಜ್ ಮಹಲ್ ಗಳಿವೆ.

English summary
The epitome of love Taj Mahal clould be all yours for a whopping Rs 100 crore! The Taj's replica is being built by Hanif Saiyed, a businessman from Gujarat who plans to sell it in the international market for Rs 100 crore!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X